ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅರಸಾಳು: ಈ ರೈಲು ನಿಲ್ದಾಣ ಮಲೆನಾಡಿಗರಿಗೆ ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಜನರ ಭಾವನಾತ್ಮಕ ವಿಚಾರವಾಗಿ ಮಾರ್ಪಟ್ಟು ದಶಕಗಳೇ ಕಳೆದಿದೆ. ಅಂತಹ ಪ್ರದೇಶವಿದೆ.
ಆದರೆ, ಎಲ್ಲ ರೀತಿಯಲ್ಲೂ ನಿರ್ಲಕ್ಷಕ್ಕೆ ಒಳಗಾಗಿದ್ದ ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿರುವ ಈ ರೈಲು ನಿಲ್ದಾಣ ಸಂಸದ ಬಿ.ವೈ. ರಾಘವೇಂದ್ರ ಶ್ರಮದಿಂದಾಗಿ ಇಂದು ನವವಧುವಿನಂತೆ ಕಂಗೊಳಿಸುತ್ತಿದ್ದು, ಈ ಭಾಗದ ಜನರಲ್ಲಿ ಮಂದಹಾಸ ಮೂಡಿಸಿದೆ.
ಅರಸಾಳು ನಿಲ್ದಾಣ ಹೊಸನಗರ, ನಗರ, ನಿಟ್ಟೂರು, ತೀರ್ಥಹಳ್ಳಿ ಸೇರಿದಂತೆ ಈ ಭಾಗದ ಬಹಳಷ್ಟು ಪ್ರದೇಶಗಳ ಜನರಿಗೆ ರೈಲು ಸಂಪರ್ಕವಾಗಿದೆ. ಆದರೆ, ಇಲ್ಲಿ ಕೇವಲ ಪ್ಯಾಸೆಂಜರ್ ರೈಲುಗಳು ಮಾತ್ರ ನಿಲುಗಡೆಯಾಗುತ್ತಿದ್ದು, ಈಗ ಎಲ್ಲ ರೈಲುಗಳ ನಿಲುಗಡೆಯಾಗಲಿದೆ.
ಅಲ್ಲದೇ, ಮಾಲ್ಗುಡಿ ಡೇಸ್, ಆಕಸ್ಮಿಕ ಸೇರಿದಂತೆ ಹಲವಾರು ಸಿನಿಮಾಗಳ ಚಿತ್ರೀಕರಣವೂ ಸಹ ಇಲ್ಲಿ ಹಿಂದೆ ನಡೆದಿದ್ದು, ಈ ನಿಲ್ದಾಣ ಒಂದು ಭಾವನಾತ್ಮಕ ವಿಚಾರವೇ ಆಗಿಹೋಗಿದೆ.
ಹೀಗಾಗಿ, ಇದಕ್ಕೊಂದು ಹೊಸ ರೂಪ ನೀಡಲಾಗಿದ್ದು, ನಿಲ್ದಾಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿಗೆ ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ಈಗಾಗಲೇ ಕಲ್ಪಿಸಲಾಗಿದೆ.
ಪ್ರಮುಖವಾಗಿ, ಈ ನಿಲ್ದಾಣದಲ್ಲಿ ಮಾಲ್ಗುಡಿ ಮ್ಯೂಸಿಯಂ ಮಾಡಲಾಗಿದೆ. ಮಲೆನಾಡಿನ ಸಂಸ್ಕೃತಿ, ಸೊಗಡು ಹಾಗೂ ಮಾಲ್ಗುಡಿ ಡೇಸ್’ನ ಚಿತ್ರಣವನ್ನು ಸೃಜಿಸಲಾಗಿದ್ದು, ಪ್ರವಾಸೋದ್ಯಮದ ಆಕರ್ಷಣೀಯ ಕೇಂದ್ರವನ್ನಾಗಿ ಮಾಡಲಾಗಿದೆ.
Get In Touch With Us info@kalpa.news Whatsapp: 9481252093
Discussion about this post