ಚನ್ನಪಟ್ಟಣ: ತಾಲೂಕಿನ ಹೊನ್ನಿಗನಹಳ್ಳಿ ಗ್ರಾಮದಲ್ಲಿ ಹಲವು ದಿನಗಳಿಂದ ಕಾಡುತ್ತಿದ್ದ ನೀರಿನ ಸಮಸ್ಯೆ ತಾಲೂಕಿನ ಕಾಂಗ್ರೆಸ್ ಯುವ ಮುಖಂಡೆ ಆರ್. ನವ್ಯಶ್ರೀ ಅವರ ಪ್ರಯತ್ನದಿಂದ ಪರಿಹಾರವಾಗಿದೆ.
ಗ್ರಾಮದ ನೀರಿನ ತೊಂಬೆ ಬಳಿ ಪೈಪ್ ಒಡೆದು ನೀರು ತೊಂಬೆಯೊಳಗೆ ಸಮರ್ಪಕವಾಗಿ ಹೋಗದೆ ಪೋಲಾಗುತ್ತಾ ಜನತೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರು. ಸರಿಪಡಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರ್, ಎಸ್’ಡಿಎ ಸಿದ್ದೇಗೌಡ ಸ್ಥಳದಲ್ಲೇ ಮೊಕ್ಕಾಂ ಹೂಡಿ ನೀರುಗಂಟಿ ಮೂಲಕ ಸರಿಪಡಿಸಿ ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ.







Discussion about this post