ಕಲ್ಪ ಮೀಡಿಯಾ ಹೌಸ್ | ಚೆನ್ನೈ/ಬೆಂಗಳೂರು |
ಚೆನ್ನೈ ಕನ್ನಡ ಬಳಗ ಪ್ರಕಾಶನದಲ್ಲಿ ಹೊರಬರುತ್ತಿರುವ ಚೆನ್ನೈ ಲಹರಿ ಯುಗಾದಿ ಕಥಾಸ್ಪರ್ಧೆ ಫಲಿತಾಂಶ ಪ್ರಕಟಗೊಂಡಿದ್ದು ಈ ಕೆಳಗಿನ ಕಥೆಗಳು ಬಹುಮಾನಕ್ಕೆ ಆಯ್ಕೆಯಾಗಿವೆ.
ಮೊದಲ ಬಹುಮಾನ- 6000 ರೂ. ಮೊತ್ತದ ಮೊದಲ ಬಹುಮಾನ ಮೈಸೂರಿನ ಕೆ.ವಿ. ರಾಜಲಕ್ಷ್ಮಿ ಅವರ `ಕಡಲಿನಾಳವು ಹಿರಿದು’, 3000 ರೂ. ಮೊತ್ತದ ಎರಡನೇ ಬಹುಮಾನ ಧಾರವಾಡದ ವಿದ್ಯಾ ಶಿರಹಟ್ಟಿ ಅವರ `ನಿರ್ಣಯ’, 2000 ರೂ. ಮೊತ್ತದ ಮೂರನೇ ಬಹುಮಾನ ಉಡುಪಿಯ ಉಮೇಶ್ ಆಚಾರ್ಯ ಅವರ `ಚಾಪೆ ಸೇಸಮ್ಮ’ ಕಥೆಗಳು ಆಯ್ಕೆಯಾಗಿವೆ.
ತಲಾ ಒಂದು ಸಾವಿರ ರೂಪಾಯಿಯ ಐದು ಸಮಾಧಾನಕರ ಬಹುಮಾನಗಳಿಗೆ ಇಟಗಿಯ ಕಿರಣ ಕ. ಗಣಾಚಾರಿ ಅವರ `ಹೆಗಳು ಇಳುವಿತು”, ಶಿವಮೊಗ್ಗದ ಕೆ.ವಿ. ಅಜೇಯ ಸಿಂಹ ಅವರ `ಆದ್ಯಾ’, ಮೈಸೂರಿನ ಗಿರಿಜಾ ಶ್ರೀಧರ್ ಅವರ `ಹುಣಸೇತೊಕ್ಕು’, ಬೆಂಗಳೂರಿನ ವಿಲಾಸ್ ಹುದ್ದಾರ್ ಅವರ `ಇದ್ದದ್ದು ಇದ್ದಂತೆ’ ಹಾಗೂ ದುಬೈನ ಫೌಜಿಯಾ ಸಲೀಂ ಅವರ `ಮುಖವಾಡ’ ಕಥೆಗಳು ಆಯ್ಕೆಯಾಗಿವೆ.
ಶ್ರೀ ಬನವಾಸಿ ವೆಂಕಟೇಶ ದೀಕ್ಷಿತ್, ಚಂದಕಚರ್ಲ ರಮೇಶ್ ಬಾಬು ಹಾಗೂ ಶ್ರೀ ಸದಾಶಿವ ಸೊರಟೂರು ಇವರು ಕಥಾ ಸ್ಪರ್ಧೆ ತೀರ್ಪುಗಾರರಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















