ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಯುವ ಪತ್ರಕರ್ತ ಭರತ್(32) ಎನ್ನುವವರು ದುರ್ಮರಣಕ್ಕೀಡಾಗಿರುವ ಘಟನೆ ಚಿಕ್ಕಬಳ್ಳಾಪುರ #Chikkaballapura ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಬಳಿಯಲ್ಲಿ ನಡೆದಿದೆ.
ಬೆಂಗಳೂರಿನ #Bengaluru ಪತ್ರಿಕೆಯೊಂದರಲ್ಲಿ ವಿಶೇಷ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಭರತ್, ಬೆಂಗಳೂರಿನಲ್ಲೇ ವಾಸವಿದ್ದರು. ವಾರಾಂತ್ಯದ ಹಿನ್ನೆಲೆಯಲ್ಲಿ ಸ್ವಗ್ರಾಮ ಗುಡಿಬಂಡೆಗೆ ಆಗಮಿಸಿದ್ದರು. ನಿನ್ನೆ ತಡರಾತ್ರಿ ಬಾಗೆಪಲ್ಲಿಗೆ ತೆರಳುವಾಗಿ ಅಪಘಾತ ಸಂಭವಿಸಿದೆ.
Also Read>> ‘ನನ್ನ ಗೋಪಾಲ’, `ರಾವಣ ದರ್ಶನಂ’ ನಾಟಕಗಳು | ಗೆದ್ದ ಹೊಂಗಿರಣ | ಮನಸೋತ ಪ್ರೇಕ್ಷಕ
ಮಾಚಹಳ್ಳಿ ಕೆರೆಯ ಏರಿಯ ಮೇಲೆ ಇದ್ದ ದೇವರ ಕಲ್ಲಿನ ಗುಡಿಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ದೇವರ ಗುಡಿಯ ಮೇಲಿನ ಚಪ್ಪಡಿ ಕಲ್ಲು ಕಾರಿನೊಳಗೆ ತೂರಿದೆ. ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಭರತ್ ಸಾವನ್ನಪ್ಪಿದ್ದಾರೆ.
ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಮುಂದಿನ ತಿಂಗಳು 09 ತಿಂಗಳ ಮಗಳ ನಾಮಕರಣ ಸಿದ್ಧತೆಯಲ್ಲಿ ಭರತ್ ತೊಡಗಿಕೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post