ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭರಮಸಾಗರ: ಕಾರ್ತಿಕ ಹುಣ್ಣಿಮೆ ಅಂಗವಾಗಿ ಸೋಮವಾರ ಸಕಲ ಭಕ್ತ ಸಮೂಹದ ನಡುವೆ 5ನೆಯ ಮಂತ್ರಾಲಯ ಎಂದು ಹೆಸರಾಗಿರುವ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಶ್ರೀರಾಘವೇಂದ್ರ ಸ್ವಾಮಿಗಳ ವಿಶ್ರಾಂತಿ ಗೃಹದಲ್ಲಿ ಕಾರ್ತೀಕ ದೀಪೋತ್ಸವ ನಡೆಯಿತು.

ಹುಣ್ಣಿಮೆ ಕಾರ್ತಿಕ ದೀಪೋತ್ಸವ ದ ಅಂಗವಾಗಿ ಶ್ರೀ ರಾಯರ ಅಕ್ಷತಾ ಬೃಂದಾವನಕ್ಕೆ ಮತ್ತು ಭೂತರಾಜರ ಕಂಭಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಧಾರ್ಮಿಕ ವಿಧಿವಿಧಾನಗಳು ನೆರವೇರಿಸಲಾಯಿತು.

ಸಂಜೆ ಸಕಲ ಭಕ್ತರ ಸಮಯದಲ್ಲಿ ಶ್ರೀ ರಾಯರ ವಿಶ್ರಾಂತಿ ಗೃಹದಲ್ಲಿ ಮತ್ತು ಆವರಣದಲ್ಲಿ ವಿಶೇಷ ಕಾರ್ತಿಕ ದೀಪೋತ್ಸವ ನಡೆಸಲಾಯಿತು. ಕಾರ್ತಿಕ ಹುಣ್ಣಿಮೆ ಅಂಗವಾಗಿ ಬಂದಭಕ್ತರು ದೀಪಗಳನ್ನು ಹಚ್ಚಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.
(ವರದಿ: ಮುರುಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















