ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಾಡು-ನುಡಿ ನೆಲ ಜಲ ಕುರಿತು ಯುವಸಮೂಹ ಅಭಿಮಾನ ಮತ್ತು ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ತಾಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ತಿಳಿಸಿದರು.
ತಾಲೂಕಿನ ಪರಶುರಾಂಪುರ ಮುಖ್ಯವೃತ್ತದಲ್ಲಿ 65 ನೆಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗ್ರಾಮದ ಜಯಕರ್ನಾಟಕ ವೇದಿಕೆ ಹಾಗೂ ಸ್ಥಳೀಯ ಆಡಳಿತ ನಾಡ ಧ್ವಜಾರೋಹಣ ಹಾಗೂ ಕನ್ನಡದದಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತರಿಗೆ, ನಿವೃತ್ತ ನೌಕರರಿಗೆ, ವಿವಿಧ ಕನ್ನಡ ದಿನ ಪತ್ರಿಕೆಗಳ ಬಾಯ್ಸ್‌ಗೆ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮದಲ್ಲಿ ಪ್ರತೀ ವರ್ಷವೂ ಗ್ರಾಮದ ಮುಖ್ಯವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ನಾಡು ನುಡಿಯ ಕುರಿತು ಜನರಲ್ಲಿ ಅಭಿಮಾನ ಮೂಡಿಸುತ್ತಿರುವುದು ಸಂತಸದ ಸಂಗತಿ ಎಂದರು.
ಗ್ರಾಮದ ಜಯಕರ್ನಾಟಕ ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷ ಬಿ ತಿಪ್ಪೇಸ್ವಾಮಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿ ಆಂಧ್ರ ಗಡಿಭಾಗದ ಕನ್ನಡಿಗರ ಮನೆಗಳಿಗೆ ಪ್ರಾಣದ ಹಂಗು ತೊರೆದು ದಿನ ಪತ್ರಿಕೆಗಳನ್ನು ಹಂಚಿದ ಪತ್ರಿಕಾ ವಿತರಕರು, ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿವೃತ್ತ ನೌಕರರಿಗೆ ಗೌರವಿಸಿದ್ದು ಸ್ಮರಣೀಯ ಎಂದರು.
ನಿವೃತ್ತ ಶಿಕ್ಷಕರಾದ ಟಿ.ಆರ್. ಚಂದ್ರಯ್ಯ, ವಿ. ನಾಗಭೂಷಣ ರಾಜ್ಯೋತ್ಸವ ಕುರಿತು ಉಪನ್ಯಾಸ ನೀಡಿದರು.
ಇದೇ ವೇಳೆ ಗ್ರಾಮದ ನಿವೃತ್ತ ಬಿಇಒ ಪಿ. ಕುಮಾರಸ್ವಾಮಿ, ಐಒಸಿ ನಾಗರಾಜು ಹಾಗೂ ನಿವೃತ್ತ ಶಿಕ್ಷಕರಾದ ಟಿ.ಆರ್. ಚಂದ್ರಯ್ಯ, ವಿ. ನಾಗಭೂಷಣ, ಟಿ. ಚಂದ್ರಣ್ಣ, ಹಂಪಮ್ಮ, ಎನ್ ನರಸಿಂಹಪ್ಪ, ಪ್ರತಿಭಾವಂತ ವಿದ್ಯಾರ್ಥಿಗಳಾದ ಮೇಘನಾ, ನಯನಾ, ಸಂಧ್ಯಾ, ವಿನಯ್, ಲಾವಣ್ಯಾ, ಶ್ವೇತಾ, ಪೇಪರ್‌ಬಾಯ್ಸ್ ಗ್ರೂಪ್‌ನ (ಪತ್ರಿಕಾ ವಿತರಕರು) ಅಜೇಯ, ಜೀವನ್, ಚಂದನ್, ಹರೀಶ, ಅಭಿ, ಮಂಜುನಾಥ, ಹೆಂಜೇರಪ್ಪ, ಅರುಣ್, ವಿನಯ್ ಹಾಗೂ ಪತ್ರಿಕಾ ವರದಿಗಾರರನ್ನೂ ಜಯಕರ್ನಾಟಕ ವೇದಿಕೆಯ ವತಿಯಿಂದ ಮುಖ್ಯವೃತ್ತದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗೌರವಿಸಿದರು.
ಲಘುವಾಹನ, ಆಟೋ ಮಾಲೀಕರು, ಚಾಲಕರು ತಮ್ಮ ವಾಹನಗಳಿಗೆ ಕನ್ನಡದ ಬಾವುಟಗಳನ್ನು ಕಟ್ಟಿಕೊಂಡು ಅತ್ಯುತ್ಸಾಹದಿಂದ ಗ್ರಾಮದ ಮುಖ್ಯವೃತ್ತದಲ್ಲಿ ನಡೆದ ನಾಡ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದಿದ್ದ ಎಲ್ಲರಿಗೂ ಸಿಹಿ ಹಂಚಿದ್ದು ವಿಶೇಷವಾಗಿತ್ತು. ಗ್ರಾಮದ ಮುಖ್ಯವೃತ್ತವೂ ಸೇರಿದಂತೆ ವಿವಿಧ ಬೀದಿಗಳನ್ನು ತಳಿರು ತೋರಣ, ಕನ್ನಡ ಬಾವುಟಗಳಿಂದ ಸಿಂಗರಿಸಲಾಗಿತ್ತು.
ತಾಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ, ಜಯಕರ್ನಾಟಕ ವೇದಿಕೆಯ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಬೀಡಾ ವೆಂಕಟೇಶ, ರುದ್ರೇಶ, ಕಿಚ್ಚ ಸುದೀಪ ಬಳಗದ ಅಧ್ಯಕ್ಷ ಸುಧಾಕರ, ನಿವೃತ್ತ ನೌಕರರಾದ ಐಒಸಿ ಟಿ. ನಾಗರಾಜು, ನಿವೃತ್ತ ಬಿಇಒ ಪಿ. ಕುಮಾರಸ್ವಾಮಿ, ಗ್ರಾಪಂ ಮಾಜಿ ಸದಸ್ಯರಾದ ಪ್ರಸನ್ನಕುಮಾರ, ಆರ್ ತಿಪ್ಪೇಸ್ವಾಮಿ, ಬಿ ತಿಪ್ಪೇಸ್ವಾಮಿ, ಮಿಲ್ಟ್ರಿ ಸಿದ್ದೇಶಣ್ಣ, ಇಂದ್ರಕುಮಾರ, ತಿಪ್ಪೇಶ, ಕೆಡಿಪಿ ಜಿಪಂ ನಾಮನಿರ್ದೇಶಿತ ಸದಸ್ಯ ಜಯವೀರಾಚಾರಿ, ಲಘುವಾಹನ, ಆಟೋ ಮಾಲೀಕರು, ಚಾಲಕರು ಹಾಗೂ ಜಯಕರ್ನಾಟಕ ವೇದಿಕೆಯ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post