Wednesday, July 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಮಹಾಪ್ರಳಯ ಕಾಲದ ಕಾಲಗಣನೆ: ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಆ ಕಾಲ ಯಾವುದು ಗೊತ್ತಾ?

January 2, 2020
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 6 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಹೆಚ್ಚಿನವರು ಜ್ಯೋತಿಷ್ಯವನ್ನು ಕೇವಲ ಭವಿಷ್ಯ ಹೇಳುವ ಶಾಸ್ತ್ರವೆಂದೇ ತಿಳಿದುಕೊಳ್ಳುತ್ತಾರೆ. ಜ್ಯೋತಿಷ್ಯವು ಕಾಲಗಣನೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಯಾವುದೇ ಶಕಗಳು ಅಳಿದು ಹೋಗಬಹುದು. ಆದರೆ ಗ್ರಹ ಗತಿಗಳ ಲೆಕ್ಕಾಚಾರವು ಅಳಿಯಲಾರದು. ಅದು ಅಳಿಯುವ ದಿನವೆಂದರೆ ಸಕಲ ಬ್ರಹ್ಮಾಂಡಗಳ ಸ್ಪೋಟ (Big Bang). ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನೆಂದು ವೇದಗಳು ಮಹಾವಿಷ್ಣುವನ್ನು ಸಂಭೋದಿಸುವುದು ಕೋಟಿ ಬ್ರಹ್ಮಾಂಡಗಳಿವೆ ಅಥವಾ ಅದಕ್ಕಿಂತಲೂ ಅನಂತವಾಗಿವೆ ಎಂಬ ಅರ್ಥ ನೀಡುತ್ತದೆ. ಇದು ಕೂಡಾ ಅಮರವಲ್ಲ. ಇದಕ್ಕೂ ನಿರ್ಧಿಷ್ಟವಾದ ಆಯುಷ್ಯವಿದೆ. ಇಂತಹ ಕಾಲಗಣನೆಗಳನ್ನು ಜ್ಯೋತಿರ್ಗಣಿತ ಮಾತ್ರ ಮಾಡಲು ಸಾಧ್ಯವಿದೆ. ಜ್ಯೋತಿಷ್ಯದೊಳಗೆ ಕೇವಲ ಭವಿಷ್ಯ, ಕಾಲಗಣನೆಗಳು ಮಾತ್ರವಲ್ಲ. ಇದರಲ್ಲಿ ಆಯುರ್ವೇದಾದಿ ಆರೋಗ್ಯಕ್ಕೆ ಪೂರಕವಾದಂತಹ ಧನ್ವಂತರಿ ವಿಚಾರಗಳಿವೆ.

ಈಗ ನಾವು ಕಾಲಗಣನೆಯ ಕ್ರಮಗಳನ್ನು ತಿಳಿದ ಅತ್ಯಂತ ಸೂಕ್ಷ್ಮ ಕಾಲವೆಂದರೆ ಕ್ಷಣ. ಇದು ಅಣುರೂಪ. ಕ್ಷಣವೆಂದರೆ ಆರೋಗ್ಯವಂತ ಮಾನವನು ತನ್ನ ಕಣ್ಣಿನ ರೆಪ್ಪೆಗಳನ್ನು ಮುಚ್ಚಿ ತೆಗೆಯುವ ಕಾಲವನ್ನು ಸಾಮಾನ್ಯವಾಗಿ ಕ್ಷಣವೆನ್ನಬಹುದು. ಅಥವಾ ನೂರು ತಾವರೆಗಳ ಎಸಳುಗಳನ್ನು ಒಂದರಮೇಲೊಂದು ಇಟ್ಟು ರಭಸದಲ್ಲಿ ಸೂಜಿಯಿಂದ ಇದನ್ನು ಚುಚ್ಚುವಿಕೆಯ ಕಾಲಾವಧಿಯು ಕ್ಷಣವಾಗುತ್ತದೆ. ನಾವು ಸೆಕುಂಡು-ನಿಮಿಷ-ಘಂಟೆ-ದಿನವೆಂದು ಲೆಕ್ಕ ಹಾಕುತ್ತೇವೆ.

ಈ ಕ್ಷಣವು ಸೆಕಿಂಡಿನ ಇನ್ನೂರನೇ ಒಂದಂಶ 1/200 ಆಗುತ್ತದೆ. ತತ್ಪರ ಎಂಬ ಹಂತವು ಅತ್ಯಂತ ಕನಿಷ್ಟಾಂಶವಾಗಿದೆ. ಆದುದರಿಂದ ತತ್ಪರದಿಂದ ಗಣನೆಯನ್ನು ನೋಡೋಣ. ಈ ಕಾಲಗಣನೆಯಲ್ಲೂ ಬೇರೆ ಬೇರೆ ವಿಧಾನಗಳು ಆಗಿನ ಕಾಲದಲ್ಲೇ ಇತ್ತು. ಭಾರತದಲ್ಲಿ ಬ್ರಾಹ್ಮಂ, ದಿವ್ಯಂ, ತಥಾಪಿತ್ರ್ಯಂ ಪ್ರಾಜಾಪತ್ಯ ಗುರೋತಥಾ ಸೌರಂಚಸಾವನಂಚಾಂದ್ರಮಾರರ್ಕ್ಷಮಾನಿವೈನವಃ ಎಂಬ ಸೂತ್ರದಂತೆ ಬ್ರಾಹ್ಮ, ದಿವ್ಯ, ಪಿತ್ರ್ಯ, ಪ್ರಜಾಪತ್ಯ, ಗುರು, ಸೌರ, ಸಾವನ, ಚಾಂದ್ರ, ನಕ್ಷತ್ರಗಳೆಂಬ ಒಂಭತ್ತು ಕಾಲಗಣನ ವಿಧಾನಗಳಿವೆ. ಇವುಗಳಲ್ಲಿ ನಮಗೆ ಅತೀ ಪ್ರಾಮುಖ್ಯವಾದ ಕಾಲಗಣನೆಗಳೆಂದರೆ- ಪಿತೃ, ಪ್ರಜಾಪತ್ಯ, ದೇವ, ಮತ್ತು ಬ್ರಾಹ್ಮ. ಯಾಕೆಂದರೆ ನಾವು ಸೌರಮಾಸ, ಋತುಗಳು ತಿಥಿಗಳು, ದಿವ್ಯ ವರ್ಷ 360 ಸಂವತ್ಸರಗಳ ಕಾಲಾವಧಿಗಳನ್ನು ನೋಡುತ್ತೇವೆ. ಆದರೆ ಎಲ್ಲಾ ಲೆಕ್ಕಾಚಾರಗಳೂ ಕೊನೆಗೆ ಯಥಾಗಚ್ಚತಿಸಾಗರಂ’ಎಂಬಂತೆ ಸೇರುವುದು ಕಲ್ಪದ ಅವಧಿಗಳಿಗೆ.

ಬ್ರಹ್ಮನ ಅಂದರೆ ಸೃಷ್ಟಿ, ದಿವ್ಯ ಚೈತನ್ಯ ಒಟ್ಟು ಆಯು ಪ್ರಮಾಣವು 100 ವರ್ಷಗಳು. ಈ 100 ವರ್ಷ ಆಯಸ್ಸಿನಲ್ಲಿ 30 ಕಲ್ಪಗಳು 3600 ಬಾರಿ ಪುನರಾವರ್ತಿಸುತ್ತದೆ. 1 ಕಲ್ಪವು ಮಾನವರಿಗೆ 432 ಕೋಟಿ ಸೌರ ವರ್ಷಗಳಾದರೆ, ಬ್ರಹ್ಮನಿಗೆ ದೇವಮಾನ 1 ದಿವಸ. ಹಾಗಾಗಿ 30 ದಿನಗಳ 1 ತಿಂಗಳಿಗೆ 30 ಕಲ್ಪವಾಗುತ್ತದೆ. ಆರ್ಯಭಟ ಸಿದ್ಧಾಂತದ ಪ್ರಕಾರ ಸೌರ ಸಿದ್ಧಾಂತದಂತೆ ಕಾಲದ ವಿಂಗಡನೆಯು ಕೆಳಗೆ ತೋರಿಸಿರುತ್ತದೆ. ಸಾಧಾರಣವಾಗಿ ಎಲ್ಲಾ ಜ್ಯೋತಿರ್ಗಣಿ ತಜ್ಞರುಗಳ ಸಿದ್ಧಾಂತಗಳು ಒಂದೇ ಆಗಿದ್ದರೂ, ವಿಂಗಡಿಸುವಿಕೆಯಲ್ಲಿ ಸಣ್ಣ ವ್ಯತ್ಯಾಸಗಳಿರುತ್ತದೆ.

60 ತತ್ಪರ-1 ಪರ

60 ಪರ -1 ವಿಲಿಪ್ತ

60 ವಿಲಿಪ್ತ-1 ಲಿಪ್ತ

60 ಲಿಪ್ತ-1 ವಿಘಟಿ

60 ವಿಘಟಿ-1 ಘಟಿ

60 ಘಟಿ-1 ದಿವಸ 23 ಗಂಟೆ 56 ನಿಮಿಷ

30 ದಿನ -1 ತಿಂಗಳು

12 ತಿಂಗಳು-1 ಸಂವತ್ಸರ

1 ಸಂವತ್ಸರ =6 ಋತುಗಳು, 2 ಆಯನಗಳು

360 ಸಂವತ್ಸರಗಳಿಗೆ 1 ದಿವ್ಯ ವರ್ಷವೆಂದು ಹೇಳಿರುತ್ತಾರೆ.

432 ಕೋಟಿ ವರ್ಷಗಳಿಗೆ ಒಂದು ಕಲ್ಪಾಂತ್ಯ. 432 ಕೋಟಿ ವರ್ಷ 30 ಕಲ್ಪಗಳು=129600000000 ಸೌರವರ್ಷಗಳು

1 ಕಲ್ಪಕ್ಕೆ 14 ಮನುಗಳೂ, 14 ಇಂದ್ರರೂ. 1 ವ್ಯಾಸನೂ ಇರುತ್ತಾನೆ

30 ಕಲ್ಪಗಳಿಗೆ ಮೂವತ್ತು ವ್ಯಾಸರುಗಳ ಅವಧಿಗಳಿರುತ್ತದೆ.

14-ಮನುಗಳ ಹೆಸರುಗಳು-ಸ್ವಯಂಭೂ, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷ, ವೈವಸ್ವತ ಈಗಿನ ಮನು, ಸೂರ್ಯಸಾವರ್ಣಿ, ದಕ್ಷಸಾವರ್ಣಿ, ಬ್ರಹ್ಮಸಾವರ್ಣಿ, ಧರ್ಮಸಾವರ್ಣಿ, ರುದ್ರಸಾವರ್ಣಿ, ದೇವಸಾವರ್ಣಿ, ಇಂದ್ರಸಾವರ್ಣಿ.

14=ಇಂದ್ರ ಪದವಿಯಲ್ಲಿರುವವರ ಹೆಸರು:
ಯಜ್ಞ, ರೋಚನ, ಸತ್ಯಜಿತ್, ತ್ರಿಶಿಖ, ವಿಭು, ಮಂತ್ರದ್ರುಮ, ಪುರಂದರ ಈಗಿನ ಇಂದ್ರ, ಬಲಿ ಮುಂದಿನ ಇಂದ್ರ, ಅದ್ಭುತ, ಶಂಭು, ವೈವೃತಿ, ಋತಧಾಮ, ದಿವಸ್ಪತಿ, ಶುಚಿ.

30-ವ್ಯಾಸ ಪೀಠಾಧಿಪರ ಹೆಸರುಗಳು:
ಸ್ವಯಂಭೂ ಪ್ರಜಾಪತಿ, ಉಶನ, ಬೃಹಸ್ಪತಿ, ಸವಿತೃ, ಮೃತ್ಯು, ಮಘವ, ವಸಿಷ್ಟ, ಸಾರಸ್ವತ, ತ್ರಿಧಾಮ, ತ್ರಿವೃಷ, ಭಾರದ್ವಾಜ, ಅಂತರಿಜ್ಞ, ಧರ್ಮ, ತ್ರಯ್ಯಾರುಣ, ಧನಂಜಯ, ಮೇಧಾತಿಥಿ, ವ್ರತಿ, ಅತ್ರಿ, ಗೌತಮ, ಉತ್ತಮ, ವೇನರಾಜಸ್ರಜಾಕ್ಷ, ಸೋಮ, ನ್ಯೂಷಾಣ, ತೃಣಬಿಂದು, ಭಾರ್ಗವ, ಶಕ್ತಿ,. ಕೃಷ್ಣ ದ್ವೈಪಾಯನ ಈ ಕಲ್ಪದ ವ್ಯಾಸರು, ಅಶ್ವತ್ಥಾಮ ಮುಂದಿನ ವ್ಯಾಸ, ಜಾತೂಕರ್ಣ್ಯ. ಪ್ರತೀ ಕಲ್ಪದ ದ್ವಾಪರದಲ್ಲಿ ನೂತನ ಪೀಠಾರೋಹಣವಿದೆ. ವ್ಯಾಸರೆಂದರೆ ಸ್ವಯಂ ವಿಷ್ಣುವೇ ಆಗಿರುತ್ತಾನೆ.

30 ಕಲ್ಪಗಳ ಹೆಸರುಗಳು
ಬ್ರಾಹ್ಮ, ಪದ್ಮ, ಶ್ವೇತ, ನೀಲಲೋಹಿತ, ವಾಮದೇವ, ರಥಂತರ, ಗೌರವ, ದೇವ, ಬೃಹತ್, ಕಂದರ್ಪ, ಸದಃ, ಈಶಾನ, ತಮಸ್, ಸಾರಸ್ವತ, ಉಧಾನ, ಗರುಡ, ಕೌರ್ಮ, ನಾರಸಿಂಹ, ಸಮಾನ, ಆಗ್ನೇಯ, ತತ್ಪುರುಷ, ವೈಕುಂಠ, ಲಕ್ಷ್ಮೀ, ಸಾವಿತ್ರಿ, ಅಘೋರ, ವರಾಹ ಈಗಿನ ಕಲ್ಪ ವೈರಾಜ, ಗೌರೀ, ಮಾಹೇಶ್ವರಿ, ಪಿತೃ. ಶುಕ್ಲಪಾಢ್ಯದಿಂದ ಅಮಾವಾಸ್ಯೆಯವರೆಗಿನ ಲೆಕ್ಕಾಚಾರಗಳಿವು. ಕೊನೆಯದು ಪಿತೃ ಕಲ್ಪ ಅಂದರೆ ಅಮಾವಾಸ್ಯೆ.

ಪ್ರತಿಯೊಂದು ಮನ್ವಂತರಕ್ಕೆ ಒಬ್ಬ ಮನುವೂ, ಒಬ್ಬ ಇಂದ್ರನೂ ಬರುತ್ತಾರೆ. ವ್ಯಾಸರುಗಳು ಪ್ರತೀ ಕಲ್ಪಕ್ಕೊಬ್ಬರಂತೆ ಇರುತ್ತಾರೆ. ಇದು ಪುನರಾವರ್ತನೆಯಾಗುತ್ತಿರುತ್ತದೆ. ಇದಕ್ಕೆ ರಾಮಾಯಣದಲ್ಲಿ ಒಂದು ಉಪಮೆ ಇದೆ. ರಾಮಾಯಣದಲ್ಲಿ ರಾಮ ಪಟ್ಟಾಭಿಷೇಕವಾದ ಮೇಲೆ ಸೀತೆಯು ಹನುಮನಿಗೆ ಒಂದು ಮುತ್ತಿನ ಹಾರವನ್ನು ಉಡುಗೊರೆಯಾಗಿ ನೀಡುತ್ತಾಳೆ. ಹನುಮನು ಇದನ್ನು ಸ್ವಲ್ಪಹೊತ್ತು ಇದನ್ನು ಧರಿಸಿ ಅದರಲ್ಲಿ ರಾಮನಾಮವಿಲ್ಲ ಎಂದು ಸಾಗರಕ್ಕೆ ಎಸೆಯುತ್ತಾನೆ. ಆಗ ಸೀತೆಯು ಕೋಪಗೊಳ್ಳುತ್ತಾಳೆ. ಹನುಮನು ಈ ಕೋಪ ಶಮನಕ್ಕೋ ಅಥವಾ ಪೂರ್ವವೃತ್ತಾಂತ ತಿಳಿಸಲೋ ಎಂಬಂತೆ ಸಮುದ್ರಕ್ಕೆ ಜಿಗಿದು ಅದೇ ಪ್ರಕಾರವಾಗಿರುವ ಒಂಭತ್ತು ಹಾರಗಳನ್ನು ತರುತ್ತಾನೆ. ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಆಗ ಹನುಮನು ಈ ರೀತಿಯಾಗಿ ಅದೆಷ್ಟೋ ಸಲ ರಾಮಾಯಣ ನಡೆದಿರುವುದನ್ನು ಜ್ಞಾಪಿಸಲು ನಾನು ಹೀಗೆ ಮಾಡಿದ್ದು ಎನ್ನುತ್ತಾನೆ. ಅಂದರೆ ಇಂತಹ ಸ್ಥಿತಿಗಳು ಪುನರಾವರ್ತಿಸುತ್ತಲೇ ಇರುತ್ತದೆ ಎಂಬುದನ್ನು ಉಪಮೆಯ ಮೂಲಕ ವಾಲ್ಮೀಕಿ ಋಷಿಗಳು ಹೇಳಿರುತ್ತಾರೆ. ಸನಾತನ ಸಂಪ್ರದಾಯದಲ್ಲಿ ದೇವ ಪೂಜೆ, ಶುಭಾರಂಭಗಳ ಸಂಕಲ್ಪ ಕಾಲದಲ್ಲಿ ದೇಶ ಕಾಲವನ್ನು ಉಚ್ಚಾರ ಮಾಡುತ್ತಾರೆ.

ಇಲ್ಲಿ ಇನ್ನೊಂದು ಕಾಲಮಾನದ ವಿವರಣೆಯನ್ನು ನೋಡಿ:

1 ಮನ್ವಂತರ= 71 ಮಹಾಯುಗ 306720000 ಸೌರ ವರ್ಷಗಳು

14 ಮನ್ವಂತರ=4294080000 ಸೌರವರ್ಷಗಳು. ಒಂದು ಮನ್ವಂತರದಿಂದ ಇನ್ನೊಂದು ಮನ್ವಂತರ ಬದಲಾಗುವ ಮಧ್ಯದಲ್ಲಿ ಒಂದು ಸಂಧ್ಯಾ ಕಾಲವಿದೆ. ಒಂದು ಕಲ್ಪದಲ್ಲಿ ಇಂತಹ 15 ಸಂಧ್ಯೆಗಳು ಬರುತ್ತದೆ. ಒಂದು ಸಂಧ್ಯಾ ಎಂದರೆ-4320000/5= 17280000 ವರ್ಷ. ಇದಕ್ಕೆ 15 ರಿಂದ ಗುಣಿಸಿದಾಗ 25920000 ವರ್ಷಗಳು ಸಿಗುತ್ತದೆ. ಈ ವರ್ಷಗಳನ್ನು 1 ಕಲ್ಪದ ಕಾಲಾವಧಿಗೆ ಸೇರಿಸಿದರೆ 432 ಕೋಟಿ ವರ್ಷಗಳಾಗುತ್ತದೆ.

ಪ್ರತೀ ಯುಗಾಂತ್ಯಕ್ಕೂ ಪ್ರಳಯಗಳಿವೆ. ಇಲ್ಲಿ ಕೆಲವೊಂದು ಭೂಭಾಗಗಳಿಗೆ ಮಾತ್ರ ಹಾನಿಯಾಗುತ್ತದೆ. ಮನ್ವಂತರದ ಅಂತ್ಯ ಅಥವಾ ಕಲ್ಪಾಂತ್ಯಕ್ಕೆ ಪೂರ್ಣವಾದ ಪ್ರಳಯಗಳಿವೆ. ಕೊನೆಯದಾಗಿ ಪೂರ್ಣ ಕಲ್ಪಗಳೆಲ್ಲಾ ಮುಗಿಯುವಾಗ ಸಮಸ್ತ ಬ್ರಹ್ಮಾಂಡಗಳೂ, ಅದರೊಳಗಿರುವ ಸಕಲ ಗ್ರಹ ನಕ್ಷತ್ರಗಳೂ ದೂಳೀಪಟವಾಗಿ ಸಕಲ ಗ್ರಹ ನಕ್ಷತ್ರಾದಿಗಳೆಲ್ಲಾ ಬ್ರಹ್ಮ ಲೀನವಾಗುತ್ತದೆ. ಅಂದರೆ ಈಗ ಶೋಧನೆ ನಡೆಸುತ್ತಿರುವ ಪ್ರಕಾರವಾಗಿ Big Bang ಮತ್ತೆ ಯಥಾಸ್ಥಿತಿಗೆ ಬರಲು ಅದೆಷ್ಟು ಕಾಲ ಬೇಕೋ ಆ ಭಗವಂತನಿಗೆ ಮಾತ್ರ ತಿಳಿದಿರಬಹುದು. ಈಗ ಈಗಿನ ಕಾಲಕ್ಕೆ ಗತಿಸಿದ ವರ್ಷವು 1972949111. ಅದು ಹೇಗೆಂದರೆ= 6 ಮನು+7ನೆ ಮನುವಿನಲ್ಲಿ 27 ಮಹಾಯುಗ + 28ನೇ ಮಹಾಯುಗದಲ್ಲಿ ಗತಿಸಿ ವರ್ಷಗಳು +7 ಮನುಗಳ ಸಂಧ್ಯಾ ವರ್ಷ=ಗತ ವರ್ಷಗಳು.

ಉಳಿದಿರುವ ವರ್ಷಗಳು:
ಇಲ್ಲಿ ಒಂದು ಕಲ್ಪದ ಲೆಕ್ಕಾಚಾರ ಮಾತ್ರವಿದೆ. 6 ಮನು+7ನೇ ಮನು ಈಗಿನ ಮನುವಿನ ಬಾಕಿ ವರ್ಷಗಳು- 43 ಮಹಾಯುಗಗಳು + 8 ಸಂಧ್ಯಾವರ್ಷಗಳು + ಈಗ ನಡೆಯುವ ಕಲಿಯುಗದ 426891 ವರ್ಷಗಳು=ಉಳಿದ ವರ್ಷಗಳಾಗುತ್ತದೆ.

ಅಂದರೆ 2147040000+ 185760000+ 138240000+ 426889=2347050889. ಈಗ ಇದನ್ನು 432 ಕೋಟಿ ಕಾಲ ಮಾನದೊಂದಿಗೆ ಹೋಲಿಸಿದಾಗ ತಾಳೆ ನೋಡುವುದು = 1972949111+ 2347050889=432 ಕೋಟಿ ವರ್ಷಗಳಾಗುತ್ತದೆ. ಇದೇ ಪ್ರಕಾರವಾಗಿ 30 ಕಲ್ಪಗಳ ಅವಧಿಗೆ 129600000000 ಗತ ವರ್ಷ ಮತ್ತು ಬಾಕಿ ಉಳಿದಿರುವ ಆಯುಸ್ಸು ಎಷ್ಟೆಂದರೆ= 30 ಕಲ್ಪಗಳ ಸೌರವರ್ಷ- 27 ಕಲ್ಪ ಈಗಾಗಲೇ ಗತಿಸಿದ್ದು + ಸದ್ಯದ 28ನೇ ಕಲ್ಪದಲ್ಲಿ ಗತಿಸಿದ ಸೌರವರ್ಷ = ಉಳಿದ ಬ್ರಹ್ಮಾಂಡದ ಆಯುಷ್ಯ. ಅದು ಹೇಗೆಂದರೆ-129600000000-116640000000+197294111=10987050889.

ಈಗಾಗಲೇ ಗತಿಸಿದ ಒಟ್ಟು ವರ್ಷ = 27 ಕಲ್ಪ+ಈ ಕಲ್ಪದಲ್ಲಿ ಗತಿಸಿದ ಸೌರ ವರ್ಷ. ಅದು ಹೇಗೆಂದರೆ-116640000000 + 197294111=118612949111 ಈಗ ಗತಿಸಿದ ಮತ್ತು ಉಳಿದ ಸೌರವರ್ಷಗಳನ್ನು ಕೂಡಿಸಿದಾಗ ಬರುವ ಮೊತ್ತವೇ ಪೂರ್ಣ ಮೂವತ್ತು ಕಲ್ಪಗಳ ಮೊತ್ತವಾಗಿರುತ್ತದೆ. ಇಲ್ಲಿರುವ ಸೌರ ವರ್ಷಗಳು ಕೇವಲ ಬ್ರಹ್ಮನ ಒಂದು ತಿಂಗಳ ಅವಧಿಯದ್ದು ಮಾತ್ರ. ಇಂತಹ ಅವಧಿಗಳು ಬ್ರಹ್ಮನ ನೂರು ವರ್ಷ ಆಯುಸ್ಸಿನಲ್ಲಿ ಎಷ್ಟಾಗುತ್ತದೆ ಮತ್ತು ಎಷ್ಟು ಕಳೆದಿದೆ, ಎಷ್ಟು ಬಾಕಿ ಇದೆ ಎಂಬ ಲೆಕ್ಕಾಚಾರಗಳನ್ನೂ ಈ ಸೂತ್ರಾನುಸಾರವಾಗಿ ಮಾಡಬಹುದು.

ಬ್ರಹ್ಮನ 100 ವರ್ಷಗಳಿಗೆ 1200 ತಿಂಗಳುಗಳಾಗುತ್ತದೆ. ಆಗ 12960000000 x 1200=155520000000000 ಸೌರ ವರ್ಷಗಳಾಗುತ್ತದೆ. ಈ 15 ಸ್ಥಾನಗಳುಳ್ಳ ಸಂಖ್ಯಾ ಸ್ಥಾನಕ್ಕೆ ಪುರಾತನವಾದ ಭಾರತೀಯ ಗಣಿತದಲ್ಲಿ ವಿವರಾ’ಎಂದು ಹೆಸರಿದೆ. ಇದಕ್ಕಿಂತಲೂ ಅಧಿಕ ಸ್ಥಾನಗಳಿರುವ ಸಂಖ್ಯಾ ನಾಮಗಳಿವೆ. ಏಕ, ದಶ, ಶತ, ಸಹಸ್ರದಿಂದ ಹಿಡಿದು ಮಹಾಪದ್ಮ 36 ಸ್ಥಾನಗಳ ವರೆಗಿನ ಲೆಕ್ಕಾಚಾರಗಳಿವೆ. ಹಾಗಾದರೆ ಈ ಸ್ಥಾನಗಳ place value ಹೆಸರುಗಳ ಉದ್ದೇಶವೇನು? ಅಂತಹ ಅಗತ್ಯಗಳಿದ್ದಾಗ ಮಾತ್ರ ಹೆಸರಿನ ಅವಶ್ಯಕತೆಗಳಿರುತ್ತದೆ. ಈ ಅವಧಿಗಳನ್ನು ದಿನ, ಘಟಿಗಳನ್ನಾಗಿಸುವುದಾದರೆ, ಈ ಹೆಸರುಗಳ ಅಗತ್ಯವಿದೆ. ಅಂತಹ ಸಂಶೋಧನೆಗಳನ್ನು ಪೂರ್ವಿಕರು ಸಂಶೋಧಿಸಿದ್ದರು ಎಂಬುದಿಲ್ಲಿ ತಿಳಿಯಬಹುದು. ಮಹಾ ಪದ್ಮವೆಂಬ name of the place value 36 ಅಂಕಿಗಳುಳ್ಳ ಮಹಾಸಂಖ್ಯೆ. ಇಲ್ಲಿಂದ ಮುಂದೆ ಅನಂತ infinity. ಇಲ್ಲೊಂದು ವಿಶೇಷವಿದೆ. ಕಾಲಗಣನೆಯ ಪ್ರತಿಯೊಂದು ಅಂತಿಮ ಘಟ್ಟದ ಸಂಖ್ಯೆಗಳ ಒಟ್ಟು ಮೊತ್ತಗಳು compound value ಒಂಭತ್ತು! ಇದು ಭಗವಂತನ ನಿಯಮಾನುಸಾರವಾದ ಠಿಛಿಞ ಸಂಖ್ಯೆ. ಪೂಜೆಗಳಲ್ಲೂ ಒಂಭತ್ತಕ್ಕೆ ಮಹತ್ವವಿದೆ.

ಬ್ರಹ್ಮನ ಆಯುಸ್ಸಿನ ಪೂರ್ಣಾವಧಿಯ ನಂತರ ಬ್ರಹ್ಮಾಂಡವು ಶೂನ್ಯವಾಗಿ ಬ್ರಹ್ಮನಲ್ಲಿ ಲೀನವಾಗುತ್ತದೆ. ಮತ್ತೆ ಪುನಃ formationಯ ಥಾಸ್ಥಿತಿಗೂ ಬರುತ್ತದೆ. ಇದುವೇ ಕಾಲಚಕ್ರ. ಇದರ ನಿಯಂತ್ರಣವು ಒಂದು ದಿವ್ಯ ಚೈತನ್ಯದ ಕೈಯಲ್ಲಿದೆ. ಒಟ್ಟಿನಲ್ಲಿ ಸಕಲಾನುಗ್ರಹ ನಿಗ್ರಹಗಳ ಮಹಾ ಚೈತನ್ಯವಿದು. ಇದರಿಂದ ಹಿರಿದಾದುದು ಬೇರೊಂದಿಲ್ಲ. ಇದುವೇ ಮಹಾವಿಷ್ಣುವಿನ ಸಾನ್ನಿಧ್ಯವಾಗಿದೆ. ಇವನೇ ಪಾಲನಾ ಕರ್ತೃ. Maintenence.

ಈ ಕಾಲ ಗಣನೆಯಲ್ಲಿ ಯುಗಗಳ ಪಾತ್ರವು ಬಹಳ ಪ್ರಾಮುಖ್ಯ. ಕೃತ, ತ್ರೇತಾ, ದ್ವಾಪರ, ಕಲಿಗಳೆಂಬ ನಾಲ್ಕು ಯುಗಗಳು. ಪ್ರತೀ ಯುಗಕ್ಕೂ ಅದರದ್ದೇ ಆದ ಒಂದು ಯುಗ ಧರ್ಮವಿರುತ್ತದೆ. ಈ ಯುಗಗಳ ಪ್ರಾರಂಭ ಕಾಲವನ್ನು ಗ್ರಹ ಸ್ಥಿತಿಯಿಂದ ಮಾತ್ರ ಲೆಕ್ಕಿಸಲು ಸಾಧ್ಯ. ಅದು ಹೇಗೆಂದರೆ, ಮೇಷಾದಿ ದ್ವಾದಶ ಭಾವಗಳಲ್ಲಿ ನಾಲ್ಕು ತ್ರಿಕೋಣಗಳಿವೆ. ಮೇಷ-ಸಿಂಹ-ಧನುಸ್ಸುಗಳಿಗೆ ಮೇಷವೂ, ವೃಷಭ-ಕನ್ಯ-ಮಕರಗಳಿಗೆ ಮಕರವೂ, ಮಿಥುನ-ತುಲಾ-ಕುಂಭಗಳಿಗೆ ತುಲಾವೂ, ಕರ್ಕಟಕ-ವೃಶ್ಚಿಕ-ಮೀನಗಳಿಗೆ ಕರ್ಕಟಕವೂ ತ್ರಿಕೋಣ ಮೂಲವಾಗಿರುತ್ತದೆ. ಮೇಷ ತ್ರಿಕೋಣವು ಕೃತ ಯುಗ ರಾಶಿಯಾದರೆ ಮಕರ ತ್ರಿಕೋಣವು ತ್ರೇತಾಯುಗ. ತುಲಾ ತ್ರಿಕೋಣವು ದ್ವಾಪರವಾದರೆ, ಕರ್ಕ ತ್ರಿಕೋಣವು ಕಲಿಯುಗ ರಾಶಿಯಾಗುತ್ತದೆ. ಹಾಗಾಗಿ ಯಾವಾಗ ಮೇಷದಲ್ಲಿ ಅಷ್ಟಗ್ರಹಗಳು ಏಕಕಾಲಕ್ಕೆ ಒಂದೇ ಡಿಗ್ರಿಯಲ್ಲಿ ಉದಯವಾಗುತ್ತದೋ ಅದು ಕೃತಯುಗೋದಯ. ಮಕರವು ಇದೇ ರೀತಿಯಲ್ಲಿ ತ್ರೇತಾಯುಗ. ತುಲಾರಾಶಿಯು ದ್ವಾಪರ ಯುಗ. ಕರ್ಕದಲ್ಲಿ ಇದೇ ರೀತಿಯಾಗಿ ಗ್ರಹಗಳು ಏಕಕಾಲದಲ್ಲಿ, ಒಂದೇ ಡಿಗ್ರಿಯಲ್ಲಿ ಉದಯವಾದಾಗ ಕಲಿಯುಗ ಪ್ರಾರಂಭವಾಗುತ್ತದೆ. ಈ ಯುಗಗಳ ಕಾಲ ಪ್ರಮಾಣವು 1:2:3:4 ಆಗಿರುತ್ತದೆ. ಇದು ಯಾಕೆ ಈ ರೀತಿಯಾಗಿ ವೆತ್ಯಾಸ ಹೊಂದಿರುತ್ತದೆ ಎಂದರೆ ಗ್ರಹರ ವೈಶೇಶಿಕಾಂಶಗಳು ಈ ತ್ರಿಕೋಣ ರಾಶಿಗಳಿಗೆ ಬೇರೆ ಬೇರೆ ರೂಪಗಳಲ್ಲಿರುತ್ತದೆ. ಹಾಗಾಗಿ ಯುಗಗಳ ಆಯು ಪ್ರಮಾಣಗಳೂ ವ್ಯತ್ಯಾಸ ಹೊಂದಿರುತ್ತದೆ.

ಈ ವರ್ಷ ಗಣನೆಯಲ್ಲಿ ಮಹತ್ತರವಾದ ಒಂದು ವಿಚಾರವಿದೆ. ಇದೇ ಭಗವತ್ಪ್ರೇರಣೆ, ಭಗವಂತನ ನಿಯಮವೆನ್ನುವುದು. ಆ ನಿಯಮವನ್ನು ತಿಳಿಯಬಹುದಾದ ಶಾಸ್ತ್ರವೊಂದಿದ್ದರೆ ಅದು ಜ್ಯೋತಿರ್ವಿಜ್ಞಾನ ಮಾತ್ರ. ನಾವು ನಂಬುವ ಪುನರ್ಜನ್ಮಕ್ಕೆ ಇದು ನಿಜವಾಗಿಯೂ ಪುಷ್ಟೀಕರಣ ನೀಡುತ್ತದೆ. ಪುನರಪಿಜನನಂ ಪುನರಪಿಮರಣಂ ಪುನರಪಿಜನನೇಜಠರೇ ಶಯನಂ ಎಂಬುದು ಜನನ ಮರಣ- ಜನನಗಳ ಚಕ್ರವನ್ನು ಸೂಚಿಸುತ್ತದೆ. ಇದನ್ನು ಭಗವದ್ಗೀತೆಯಲ್ಲಿ ಜಾತಸ್ಯ ಹಿಧ್ರುವೊಮೃತುಃ ಧ್ರುವಂಜನ್ಮಮೃತಸ್ಯಚ’ ಹೇಳಿದೆ. ಅಂದರೆ ಬ್ರಹ್ಮಾಂಡದ ಸಕಲ ಚರಾಚರಗಳು ಒಮ್ಮೆಗೆ ಸಾಯಲೇಬೇಕು. ಮತ್ತೆ ಹುಟ್ಟಲೇಬೇಕು. ಇದು ಕೇವಲ ಮಾನವರಿಗೆ ಮಾತ್ರವೇ ಇರುವುದಲ್ಲ. ಇಡೀ ಬ್ರಹ್ಮಾಂಡಕ್ಕೇ ಇರುವ ನಿಯಮ.ಆದರೆ ಮಾನವರಿಗಾದರೆ ಸಾವು-ಹುಟ್ಟಿನ ಅಂತರವು ಅವರವರ ಕರ್ಮಾನುಸಾರವಾಗಿರುತ್ತದೆ. ಪ್ರಕೃತಿಗೆ ನಿರ್ಧಿಷ್ಟವಾದ ಕಾಲಗಳಿವೆ. ಅದೇ ರೀತಿ ಇಲ್ಲಿ ಬರುವ ವ್ಯಾಸರುಗಳು, ಇಂದ್ರರುಗಳು, ಮನುಗಳು ಪೂರ್ಣ ಪ್ರಮಾಣದ ಪುಣ್ಯವನ್ನು ಅರ್ಜಿಸಿರುತ್ತಾರೆ. ಹಾಗಾಗಿ ನಮ್ಮಮಾನವರ ಲೆಕ್ಕಾಚಾರಕ್ಕೆ ಕೋಟ್ಯಂತರ ವರ್ಷಗಳಾಗಿ ಕಾಣುತ್ತದೆ. ಇಲ್ಲಿ ಪುನರ್ಜನ್ಮಗಳು ಈ ವಿಶ್ವದ ಸಿದ್ದಾಂತಗಳು. ಇದಕ್ಕೆ ಹೊರತಾಗಿ ಯಾರೂ ಇಲ್ಲ. ದೇವರೆನಿಸಿಕೊಂಡ ರಾಮ ಕೃಷ್ಣರೂ ಇದಕ್ಕೆ ಮಣಿದಿದ್ದಾರೆ ಎಂದ ಮೇಲೆ ಸಾಮನ್ಯ ಮಾನವರೇನು? ಹೇಗೆ ಪ್ರಕೃತಿಯು ಕಲ್ಪದಿಂದ ಕಲ್ಪಕ್ಕೆ ಹೊರಳಿ ಒಂದು ದಿನ ಮತ್ತೆ ಪೂರ್ವಸ್ಥಿತಿಗೆ ಹೇಗೆ ಬರುತ್ತದೋ ಅದೇ ರೀತಿಯಾಗಿ ವಿಶ್ವದ ಸಕಲವೂ ಈ ಕಾಲ ಚಕ್ರದೊಳಗೆ ಸುತ್ತುತ್ತಿರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳೆಲ್ಲಾ ದ್ವಾದಶ ಭಾವಗಳ ಆಧಾರದಲ್ಲಿದೆ. ಸಕಲ ಗ್ರಹರ ಸ್ಥಿತಿಗಳು ಗ್ರಹರ ಭಾವಗಳ ಸ್ಥಿತಿಯಲ್ಲಿರುತ್ತದೆ. ಮೇಷದಿಂದ ಮೀನದ ವರೆಗಿನ ಹನ್ನೆರಡು ರಾಶಿಗಳು ನಾಲ್ಕು ತ್ರಿಕೋಣಗಳಲ್ಲಿದೆ. ಮೇಷ ಸಿಂಹ ಧನುಸ್ಸು ರಾಶಿಗಳು ಮೇಷ ತ್ರಿಕೋಣಗಳು. ಇವು ಕೃತಯುಗ ರಾಶಿಗಳು. ಯಾವಾಗ ಮೇಷದಲ್ಲಿ ಎಂಟು ಗ್ರಹರ ಉದಯವು ಏಕ ಕಾಲಕ್ಕೆ ಆಗುತ್ತದೋ ಅದು ಕೃತಯುಗ ಪ್ರಾರಂಭ ಕಾಲ. ಸಿಂಹ ರಾಶಿಯಲ್ಲಿ ಈ ಎಂಟು ಗ್ರಹಗಳು ಏಕ ಕಾಲದಲ್ಲಿ ಬಂದಾಗ ಅದು ಮದ್ಯಕಾಲ. ಧನುವಿನಲ್ಲಿ ಬಂದಾಗ ಕೃತಯುಗಾಂತ್ಯ ಕಾಲ. ವೃಷಭ-ಕನ್ಯ-ಮಕರ ರಾಶಿಗಳ ತ್ರಿಕೋಣವು ಮಕರದಿಂದ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ತ್ರೇತಾಯುಗ ರಾಶಿ. ಮಕರದಲ್ಲಿ ಅಷ್ಟ ಗ್ರಹಗಳು ಏಕ ಕಾಲದಲ್ಲಿ ಉದಯವಾದಾಗ ತ್ರೇತಾಯುಗ ಪ್ರಾರಂಭ ಕಾಲ. ವೃಷಭವು ಮದ್ಯ ಕಾಲವೂ, ಕನ್ಯಾ ಅಷ್ಟ ಗ್ರಹಗಳ ರಾಶಿಯ ಉದಯವು ತ್ರೇತಾಯುಗಾಂತ್ಯ ಕಾಲ. ಮಿಥುನ-ತುಲಾ-ಕುಂಭ ರಾಶಿಗಳು ದ್ವಾಪರ ರಾಶಿಗಳು. ಇದರ ಗಣನೆಯನ್ನು ತುಲಾರಾಶಿಯಿಂದ ತೆಗೆದುಕೊಳ್ಳಬೇಕು. ತುಲಾರಾಶಿಯ ಅಷ್ಟ ಗ್ರಹೋದಯವೇ ದ್ವಾಪರದ ಪ್ರಾರಂಭ. ತುಲಾದಲ್ಲಿ ಪ್ರಾರಂಭವಾದದ್ದು, ಕುಂಭದಲ್ಲಿ ಮದ್ಯಕಾಲವೂ, ಮಿಥುನದಲ್ಲಿ ಯುಗಾಂತ್ಯಕಾಲವೂ ಆಗುತ್ತದೆ. ಕರ್ಕಟಕ-ವೃಶ್ಚಿಕ-ಮೀನಾ ರಾಶಿಗಳಿಗೆ ಕರ್ಕಟಕವೇ ತ್ರಿಕೋಣ. ಇವು ಕಲಿಯುಗ ರಾಶಿಗಳು. ಇಲ್ಲಿ ಅಷ್ಟ ಗ್ರಹೋದಯವು ಕಲಿಯುಗ ರಾಶಿಯ ಉದಯ ಕಾಲ. ವೃಶ್ಚಿಕವು ಮದ್ಯಕಾಲವಾದರೆ, ಮೀನರಾಶಿಯಲ್ಲಿ ಅ0ತ್ಯ ಭಾಗದಲ್ಲಿ 30ನೆಯ ಡಿಗ್ರಿ ಅಷ್ಟಗ್ರಹರ ಅಸ್ತವು ಏಕ ಕಾಲದಲ್ಲಾಗುವಿಕೆಯೇ ಕಲಿಯುಗಾಂತ್ಯ. ಈ ಕಾಲವು ಪ್ರಳಯ ಕಾಲವಾಗುತ್ತದೆ. ಮುಂದೆ ಚತುರ್ಯುಗಗಳ ಸಂದ್ಯಾಕಾಲ ಕತ್ತಲುದ ನಂತರ ಪುನಃ ಕೃತ ಯುಗಾರಂಭವಾಗುತ್ತದೆ.

ಈ ರೀತಿಯಾಗಿ ಗ್ರಹಗಳು ತ್ರಿಕೋಣ ರಾಶಿಯಲ್ಲಿ ಏಕಕಾಲಕ್ಕೆ ಅಷ್ಟಗ್ರಹೋದಯವಾಗುತ್ತಾ, ಯುಗಾವರ್ತನೆಯಾಗುತ್ತಾ ಇರುತ್ತದೆ. ಈ ಯುಗಾವರ್ತನೆಯು ಎಪ್ಪತ್ತೊಂದು ಸಲವಾದಾಗ ಮಹಾ ಯುಗವಾಗುತ್ತದೆ. ಇಲ್ಲಿ ಮನ್ವಂತರವೇ ಬದಲಾಗುತ್ತದೆ. ಆಗ ಹದಿನಾಲ್ಕು ಮನುಗಳಲ್ಲೊಬ್ಬ ಅಧಿಕಾರಕ್ಕೇರುತ್ತಾನೆ. ಈ ರೀತಿಯಾಗಿ ಅಧಿಕಾರ ಬದಲಾವಣೆಯಾಗುತ್ತಾ ಹೋಗಿ, ಮೂವತ್ತು ಕಲ್ಪಗಳ ಕೊನೆಯಲ್ಲಿ ಇಡೀ ಸಮಸ್ತ ಬ್ರಹ್ಮಾಂಡಗಳೂಕೋಟಿ ಬ್ರಹ್ಮಾಂಡ ಧೂಳೀಪಟವಾಗಿ ಅಣುರೂಪದಲ್ಲಿ ಮಹಾಸಾನ್ನಿಧ್ಯವಿಷ್ಣುದಲ್ಲಿ ಲೀನವಾಗುತ್ತದೆ. ಇದನ್ನೇ ವಿಜ್ಞಾನವು ಮಹಾ ಸ್ಪೋಟ (The Big Bang) ಎಂದು ಕರೆಯುತ್ತದೆ. ಆಗ ರಾತ್ರಿ ಹಗಲು, ಜೀವ ಜಂತು ಎಂಬ ಪದಗಳೇ ಇರುವುದಿಲ್ಲ. ಹೀಗೇ ಮಹಾ ಸ್ಪೋಟವಾದ ನಂತರ ಮತ್ತೆ ಯಥಾ ಸ್ಥಿತಿಗೆ ಬರಲು 432 ಕೋಟಿ ವರ್ಷಗಳು ಬೇಕಾಗುತ್ತದೆ. ಬ್ರಹ್ಮಾಂಡದ ಸ್ಥಿತಿಯಲ್ಲೂ ಅಷ್ಟೇ ವರ್ಷ, ಬ್ರಹ್ಮಾಂಡ ರಚನೆಗೂ ಅಷ್ಟೇ ವರ್ಷಗಳು ಬೇಕಾಗಿವೆ.

ಇನ್ನೊಂದು ಮುಖ್ಯಾಂಶ ಗಮನಿಸಬೇಕು. ಒಂದು ಸ್ಥಿತಿಯು ಬರಬೇಕಾದರೆ ಪೂರ್ವ ಸೂಚನೆಗಳಿರುತ್ತದೆ. ಮಳೆ ಬರುವುದಕ್ಕೆ ಮುಂಚೆ ದಟ್ಟ ಮೋಡಗಳು, ಮಿಂಚು ಗುಡುಗುಗಳು ಉಂಟಾಗುವಂತೆ ಪ್ರಳಯಕ್ಕೂ ಸೂಚನೆಗಳಿವೆ. ಈ ಬಗ್ಗೆ ಒಂದು ನಾಣ್ನುಡಿ’ ಹೇಳುವುದನ್ನು ಗಮನಿಸೋಣ. ಪ್ರಳಯವು ಸಮೀಪಿಸುವ ಕಾಲಕ್ಕೆ, ಬೆಣ್ಣೆಯು ತೇಲುತ್ತದೆ, ರುಬ್ಬುವ ಕಲ್ಲು ತೇಲುತ್ತದೆ ಎಂದು ಹಳ್ಳಿಗಳಲ್ಲಿ ಹಿರಿಯರು ಹೇಳುತ್ತಿದ್ದ ಮಾತಿದು. ಅಂದರೆ ಭೂಮಿಯು ತನ್ನ ಗುರುತ್ವಾಕರ್ಷಣ ಶಕ್ತಿಯನ್ನು ಕಳೆದುಕೊಂಡಾಗ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಬಹುದು ಮತ್ತು ಉಷ್ಣಾಂಶಗಳಲ್ಲಿ ಏರುಪೇರಾಗಿ ಸಕಲವೂ ಜಲ ಸಮಾಧಿಯಾಗಬಹುದು. ಹಾಗೆಯೇ ಬ್ರಹ್ಮಾಂಡವು ನಾಶವಾಗುವ ಹೊತ್ತಿಗೆ ಸಕಲ ಆಕಾಶಕಾಯಗಳೂ ಧೂಳೀ ಪಟವಾಗಿ ಬ್ರಹ್ಮ ಲೀನವಾಗುತ್ತದೆ.

ಕೊನೆಯದ್ದಾಗಿ- ಈ ಬ್ರಹ್ಮಾಂಡದ ಪೂರ್ಣ ಆಯು ಪ್ರಮಾಣ ಎಷ್ಟೆಂದರೆ- ಬ್ರಹ್ಮನ ನೂರು ವರ್ಷಗಳು. ಅದು ಹೇಗೆಂದರೆ- 3600 ಕಲ್ಪಗಳು. ಇದನ್ನು ಬಿಡಿಸಿದಾಗ-4320000000 X 3600 = 15552000000000 the compound number -9 ie 1+8=9. ಇದು ಸತ್ಯವಾಗಿದೆ ಎಂದು ಹೇಳಲು ಆಧಾರವೇ ನಮಗೆ ಸಿಕ್ಕಿದ ಕೊನೆಯ ಮೊತ್ತ ಒಂಭತ್ತು. ಇದುವೇ ಭಗವತ್ ಸಾನ್ನಿಧ್ಯ.

(2012. ಕ್ಕೆ ಭೂಮಿ ಅಂತ್ಯ ಎಂಬ ಸುದ್ಧಿ ಹರಡಿದಾಗ ನಾನು ಆರ್ಯಭಟ ಸಿದ್ಧಾಂತ ಪ್ರಕಾರ ಲೆಕ್ಕ ಹಾಕಿ ಬರೆದ ಲೇಖನ ಇದು.) ನಂತರದ ದಿನಗಳನ್ನು ಇದೇ ಲಾಜಿಕ್ ಪ್ರಕಾರ ನೀವೂ ಮಾಡಬಹುದು.


Get in Touch With Us info@kalpa.news Whatsapp: 9481252093

Tags: Aryabhata TheoryAstrologybig bangBrahmaForce of GravityMahapralayaPrakash AmmannayaSolar Yearಆರ್ಯಭಟ ಸಿದ್ಧಾಂತಕೃತಯುಗಗುರುತ್ವಾಕರ್ಷಣ ಶಕ್ತಿಜ್ಯೋತಿರ್ವಿಜ್ಞಾನಂಜ್ಯೋತಿಷ್ಯ ಶಾಸ್ತ್ರಪ್ರಕಾಶ್ ಅಮ್ಮಣ್ಣಾಯಬ್ರಹ್ಮಬ್ರಹ್ಮಾಂಡಮನ್ವಂತರಮಹಾಪ್ರಳಯಸೌರ ವರ್ಷ
Previous Post

ಏನಿದು ಒಂದು ದೇಶ ಒಂದೇ ರೇಷನ್ ಕಾರ್ಡ್: ಪ್ರಾಯೋಗಿಕವಾಗಿ 12 ರಾಜ್ಯಗಳಲ್ಲಿ ಜಾರಿ

Next Post

ಈ ವಿಶ್ವ ಸಂತ ಜೋಳಿಗೆ ಹಿಡಿದು ಓಡಾಡಿದ್ದು ಮುಂದಿನ ಪೀಳಿಗೆಗಾಗಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಈ ವಿಶ್ವ ಸಂತ ಜೋಳಿಗೆ ಹಿಡಿದು ಓಡಾಡಿದ್ದು ಮುಂದಿನ ಪೀಳಿಗೆಗಾಗಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಜು.10 | ಜಯನಗರ ರಾಯರ ಮಠದಲ್ಲಿ ದಾಸವಾಣಿ ಕಾರ್ಯಕ್ರಮ

July 9, 2025
Gurupoornima

ಗುರುಪೂರ್ಣಿಮೆ ಮಹೋತ್ಸವ | ಜು.10ರಂದು ವಿಶೇಷ ಕಾರ್ಯಕ್ರಮ

July 9, 2025

ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಎಂಪಿ ರಾಘವೇಂದ್ರ | ಏನದು?

July 8, 2025

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನಮ್ಮ ಸರ್ಕಾರದ ಮುಖ್ಯ ಉದ್ದೇಶ: ಸಚಿವ ಮಧು ಬಂಗಾರಪ್ಪ

July 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಜು.10 | ಜಯನಗರ ರಾಯರ ಮಠದಲ್ಲಿ ದಾಸವಾಣಿ ಕಾರ್ಯಕ್ರಮ

July 9, 2025
Gurupoornima

ಗುರುಪೂರ್ಣಿಮೆ ಮಹೋತ್ಸವ | ಜು.10ರಂದು ವಿಶೇಷ ಕಾರ್ಯಕ್ರಮ

July 9, 2025

ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಎಂಪಿ ರಾಘವೇಂದ್ರ | ಏನದು?

July 8, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!