No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
2

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
  • Advertise With Us
  • Grievances
  • About Us
  • Contact Us
Thursday, June 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪ್ರವಾಸ ಪ್ರೇಮಿ ಕಂಟೆಂಟ್ ಕ್ರಿಯೇಟರ್ ಗಳಿಗಾಗಿ ಕ್ಲಿಯರ್‌ ಟ್ರಿಪ್ ನಿಂದ ಕ್ರಿಯೇಟರ್ಸ್ ಕ್ಲಬ್ ಆರಂಭ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 25, 2026
in Special Articles
0
Cleartrip: Creators Club
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಬೆಂಗಳೂರು |

  • ಯಾವುದೇ ಕನಿಷ್ಠ ಫಾಲೋವರ್ಸ್ ಮಿತಿ ಇಲ್ಲ ಮತ್ತು ಪೋಸ್ಟ್‌ಗೆ ಇಂತಿಷ್ಟು ಹಣ ಎಂಬ ನಿಯಮವಿಲ್ಲದೆ ಎಲ್ಲರಿಗೂ ಮುಕ್ತ ಅವಕಾಶ ~
  • ಪ್ರಾಯೋಗಿಕ ಯೋಜನೆಯಲ್ಲಿ ಪ್ರಾದೇಶಿಕ ಕ್ರಿಯೇಟರ್‌ ಗಳದ್ದೇ ಮೇಲುಗೈ; ತೆಲುಗು ಕಂಟೆಂಟ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ಪತ್ತೆ

ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕಂಟೆಂಟ್‌ ಗಳನ್ನು ವಾಣಿಜ್ಯ ಅವಕಾಶವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಫ್ಲಿಪ್‌ ಕಾರ್ಟ್ ಸಮೂಹದ ಪ್ರಮುಖ ಆನ್‌ ಲೈನ್ ಟ್ರಾವೆಲ್ ಪ್ಲಾಟ್‌ ಫಾರ್ಮ್ ಕ್ಲಿಯರ್‌ಟ್ರಿಪ್, ಇದೀಗ ಹೊಸದಾಗಿ ಕ್ಲಿಯರ್‌ ಟ್ರಿಪ್ ಕ್ರಿಯೇಟರ್ಸ್ ಕ್ಲಬ್ ಅನ್ನು ಆರಂಭಿಸಿದೆ. ಇದು ಒಂದು ವ್ಯವಸ್ಥಿತ ಅಫಿಲಿಯೇಟ್ ಕಾರ್ಯಕ್ರಮವಾಗಿದ್ದು, ಕ್ರಿಯೇಟರ್‌ ಗಳ ವಿಡಿಯೋ ಮತ್ತು ಕಂಟೆಂಟ್‌ ಗಳನ್ನು ನೇರವಾಗಿ ಟಿಕೆಟ್ ಬುಕಿಂಗ್ ಪ್ರಕ್ರಿಯೆಯೊಂದಿಗೆ ಸಂಯೋಜಿಸಲಿದೆ.
JNNCE Shivamoggaಸಾಂಪ್ರದಾಯಿಕವಾಗಿ ಕಂಟೆಂಟ್‌ಗಳಿಗೆ ಇಂತಿಷ್ಟು ಹಣ ನೀಡುವ (ಪೇ- ಪರ್- ಕಂಟೆಂಟ್) ಮಾದರಿಗೆ ಮುಕ್ತಿ ನೀಡಿರುವ ಸಂಸ್ಥೆ, ಹೊಸ ಕಾರ್ಯಕ್ಷಮತೆ ಆಧಾರಿತ ಕಮಿಷನ್ ಮಾದರಿಯನ್ನು ಪರಿಚಯಿಸಿದೆ. ಇದರಿಂದಾಗಿ ಕ್ರಿಯೇಟರ್‌ ಗಳು ಕೇವಲ ಪ್ರಚಾರಕರಾಗಿ ಉಳಿಯದೆ ಕಂಪನಿಯ ಆದಾಯದಲ್ಲಿ ನೇರ ಪಾಲುದಾರರಾಗಲಿದ್ದಾರೆ. 2026 ರ ಅಂತ್ಯದ ವೇಳೆಗೆ ದೇಶಾದ್ಯಂತ 10,000 ಕ್ಕೂ ಹೆಚ್ಚು ಕ್ರಿಯೇಟರ್‌ ಗಳನ್ನು ಈ ಕ್ಲಬ್‌ಗೆ ಸೇರಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ. ಈ ಕಾರ್ಯಕ್ರಮದ ಪ್ರಮುಖ ವೈಶಿಷ್ಟ್ಯವೆಂದರೆ, ಇದರಲ್ಲಿ ಭಾಗವಹಿಸಲು ಕ್ರಿಯೇಟರ್‌ಗಳಿಗೆ ಯಾವುದೇ ಕನಿಷ್ಠ ಫಾಲೋವರ್ಸ್ ಸಂಖ್ಯೆಯ ಮಿತಿ ಇರುವುದಿಲ್ಲ. ಕೇವಲ ಫಾಲೋವರ್ಸ್ ಸಂಖ್ಯೆಗಿಂತ ಅವರ ಕಂಟೆಂಟ್‌ಗೆ ಸಾರ್ವಜನಿಕರಿಂದ ಸಿಗುವ ಪ್ರತಿಕ್ರಿಯೆ ಆಧರಿಸಿ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ ಹೊಸದಾಗಿ ಕಂಟೆಂಟ್ ಕ್ರಿಯೇಟ್ ಮಾಡಲು ಆರಂಭಿಸಿರುವವರಿಗೂ ಇದು ಮುಕ್ತ ಅವಕಾಶ ಕಲ್ಪಿಸಿದೆ.

ಕಾರ್ಯಕ್ರಮದ ಅಧಿಕೃತ ಬಿಡುಗಡೆಗೂ ಮುನ್ನ ನಡೆಸಲಾದ ಪ್ರಾಯೋಗಿಕ ಯೋಜನೆಯಲ್ಲಿ ಪ್ರಾದೇಶಿಕ ಭಾಷೆಗಳ ಕ್ರಿಯೇಟರ್‌ ಗಳು ಮುಂಚೂಣಿಯಲ್ಲಿರುವುದು ಕಂಡುಬಂದಿದೆ. ಪ್ರವಾಸಕ್ಕೆ ಸಂಬಂಧಿಸಿದ ಕಂಟೆಂಟ್‌ಗಳಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗು ಭಾಷೆಯ ಕಂಟೆಂಟ್‌ ಗಳು ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ಈ ಅಧ್ಯಯನದಲ್ಲಿ ಪತ್ತೆಯಾಗಿದೆ.

ಭಾರತದಲ್ಲಿ ಪ್ರವಾಸದ ನಿರ್ಧಾರಗಳು ಈಗ ಕೇವಲ ಸರ್ಚ್ ಬಾರ್‌ ಗಳಿಗೆ ಸೀಮಿತವಾಗಿಲ್ಲ. ಟ್ರಾವೆಲ್ ಕ್ಷೇತ್ರದಲ್ಲಿ ಸಾಮಾಜಿಕ ಜಾಲತಾಣಗಳು ಅತ್ಯಂತ ಶಕ್ತಿಶಾಲಿ ವಿತರಣಾ ಚಾನಲ್ ಆಗಿ ನಿಶ್ಯಬ್ದವಾಗಿ ಹೊರಹೊಮ್ಮುತ್ತಿವೆ. ಅದರಲ್ಲೂ ವಿಶೇಷವಾಗಿ ಜೆನ್-ಜೀ ಮತ್ತು ಮಿಲೇನಿಯಲ್ಸ್ ತಲೆಮಾರಿನ ಯುವಕರು ಪ್ರವಾಸದ ಸ್ಥಳಗಳ ಆಯ್ಕೆಯಿಂದ ಹಿಡಿದು ಬುಕಿಂಗ್ ನಿರ್ಧಾರಗಳವರೆಗೆ ಪ್ರತಿಯೊಂದಕ್ಕೂ ಕಂಟೆಂಟ್ ಕ್ರಿಯೇಟರ್‌ಗಳನ್ನೇ ಅವಲಂಬಿಸುತ್ತಿದ್ದಾರೆ. ಕ್ಲಿಯರ್‌ ಟ್ರಿಪ್‌ ನ ಪೀಕ್‌ಅಬೂ ಟ್ರೆಂಡ್ಸ್ ಟ್ರ್ಯಾಕರ್ ವರದಿಯ ಪ್ರಕಾರ, ಈ ಬದಲಾವಣೆಯು ಕೇವಲ ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ; ಎರಡನೇ ಹಂತದ ನಗರಗಳ ಮಾರುಕಟ್ಟೆಗಳೂ ಸಹ ಪ್ರವಾಸೋದ್ಯಮದಲ್ಲಿ ಹೆಚ್ಚು ಸಕ್ರಿಯವಾಗುತ್ತಿದ್ದು, ಕ್ರಿಯೇಟರ್‌ ಗಳೇ ಇದಕ್ಕೆ ಪ್ರಮುಖ ಪ್ರೇರಕರಾಗಿದ್ದಾರೆ.
PES Public School Shivamoggaಈ ಕುರಿತು ಕ್ಲಿಯರ್‌ ಟ್ರಿಪ್‌ ನ ಮುಖ್ಯ ಮಾರ್ಕೆಟಿಂಗ್ ಮತ್ತು ರೆವಿನ್ಯೂ ಅಧಿಕಾರಿ ಪಲ್ಲವಿ ಸಕ್ಸೇನಾ ಮಾತನಾಡಿ, “ಜೆನ್- ಜೀ ತಲೆಮಾರು ಪ್ರವಾಸದ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಪ್ರವಾಸದ ಯೋಜನೆ ಮತ್ತು ಪ್ರೇರಣೆ ಈಗ ಸೋಶಿಯಲ್ ಮೀಡಿಯಾ ಫೀಡ್‌ ಗಳಿಂದಲೇ ಆರಂಭವಾಗುತ್ತದೆ ಮತ್ತು ಕ್ರಿಯೇಟರ್‌ ಗಳು ಈ ಬದಲಾವಣೆಯ ಕೇಂದ್ರಬಿಂದುವಾಗಿದ್ದಾರೆ. ಭಾರತದ ಮುಂದಿನ ಹಂತದ ಪ್ರವಾಸೋದ್ಯಮದ ಬೆಳವಣಿಗೆಯು ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಕ್ರಿಯೇಟರ್‌ ಗಳು ಹೆಚ್ಚು ಪ್ರಭಾವ ಹೊಂದಿರುವ ಮಾರುಕಟ್ಟೆಗಳು ಮತ್ತು ಗ್ರಾಹಕರಿಂದ ಬರಲಿದೆ. ಕ್ಲಿಯರ್‌ ಟ್ರಿಪ್ ಕ್ರಿಯೇಟರ್ಸ್ ಕ್ಲಬ್ ಆರಂಭವು ಅವರಿಗೆ ತಮ್ಮ ಪ್ರತಿಯೊಂದು ಪೋಸ್ಟ್ ಅನ್ನು ಆದಾಯದ ಮೂಲವಾಗಿ ಮತ್ತು ಪ್ರತಿಯೊಂದು ಬುಕಿಂಗ್ ಅನ್ನು ಮತ್ತೊಂದು ಪ್ರವಾಸದ ಪ್ರೇರಣೆಯಾಗಿ ಪರಿವರ್ತಿಸಲು ಅಗತ್ಯವಿರುವ ವೇದಿಕೆಯನ್ನು ಒದಗಿಸುತ್ತದೆ. ಇದೇ ವ್ಯವಸ್ಥೆಯನ್ನು ನಾವು ನಿರ್ಮಿಸುತ್ತಿದ್ದೇವೆ” ಎಂದರು.

ಗ್ರಾಹಕರ ಪ್ರಕ್ರಿಯೆಯನ್ನು ಸುಲಭಗೊಳಿಸಲು ಇದರಲ್ಲಿ ಕಾಮೆಂಟ್-ಟು-ಡಿಎಂ ಆಟೊಮೇಷನ್ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ವೀಕ್ಷಕರು ಕ್ರಿಯೇಟರ್‌ ನ ಪೋಸ್ಟ್‌ಗೆ ಟ್ರಿಪ್ ಎಂದು ಕಾಮೆಂಟ್ ಮಾಡಿದರೆ, ಅವರು ತಮ್ಮ ಇನ್‌ ಬಾಕ್ಸ್‌ ನಲ್ಲಿ ಮುಂಚಿತವಾಗಿಯೇ ಭರ್ತಿ ಮಾಡಿದ ಬುಕಿಂಗ್ ಲಿಂಕ್ ಮತ್ತು ಕ್ಲಿಯರ್‌ ಟ್ರಿಪ್‌ ನ ವಿಶೇಷ ಕೂಪನ್ ಕೋಡ್ ಅನ್ನು ಸ್ವಯಂಚಾಲಿತವಾಗಿ ಪಡೆಯುತ್ತಾರೆ. ಈ ಕಾರ್ಯಕ್ರಮವು ಸದ್ಯ ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ ನಲ್ಲಿ ದೇಶಾದ್ಯಂತ ಲಭ್ಯವಿದೆ.

ಈ ಕಾರ್ಯಕ್ರಮದ ಆರಂಭಿಕ ಫಲಿತಾಂಶಗಳು ಅತ್ಯಂತ ಆಶಾದಾಯಕವಾಗಿವೆ. ಒಟ್ಟು ಸೃಷ್ಟಿಯಾದ ಕಂಟೆಂಟ್‌ಗಳಲ್ಲಿ ಶೇ. 50 ರಷ್ಟು ಪ್ರಾದೇಶಿಕ ಕ್ರಿಯೇಟರ್‌ ಗಳದ್ದೇ ಆಗಿದ್ದು, ಇದು ವಿವಿಧ ಭೌಗೋಳಿಕ ಪ್ರದೇಶಗಳಲ್ಲಿನ ಸ್ಥಳೀಯ ಜನರನ್ನು ತಲುಪಿರುವುದನ್ನು ಪ್ರತಿಬಿಂಬಿಸುತ್ತದೆ. ಬ್ಯೂಟಿ ಮತ್ತು ಲೈಫ್‌ ಸ್ಟೈಲ್, ಫುಡ್ ಹಾಗೂ ಡೀಲ್ ಹ್ಯಾಕ್ (ಆಫರ್‌ ಗಳು) ಕಂಟೆಂಟ್‌ ಗಳು ನಿರಂತರವಾಗಿ ಶೇ. 5 ರಿಂದ ಶೇ. 6 ರಷ್ಟು ಎಂಗೇಜ್‌ ಮೆಂಟ್ ರೇಟ್ ತಂದುಕೊಡುವ ಮೂಲಕ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿವೆ. ಇದು ಉದ್ಯಮದ ಸರಾಸರಿಗಿಂತ ತೀರಾ ಹೆಚ್ಚಾಗಿದೆ. ದಕ್ಷಿಣದ ರಾಜ್ಯಗಳಿಂದಲೂ ಕ್ರಿಯೇಟರ್‌ ಗಳು ಇದರಲ್ಲಿ ಭಾರಿ ಪ್ರಮಾಣದಲ್ಲಿ ಭಾಗವಹಿಸುತ್ತಿದ್ದು, ಅದರಲ್ಲೂ ವಿಶೇಷವಾಗಿ ತೆಲುಗು ಭಾಷೆಯ ಕಂಟೆಂಟ್‌ ಗಳು ಅತ್ಯಂತ ಸಕ್ರಿಯ ಮತ್ತು ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿ ಹೊರಹೊಮ್ಮಿವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Kalahamsa Infotech private limited

Tags: BENGALURUKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಬೆಂಗಳೂರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಪಘಾತದಲ್ಲಿ ನಿಧನರಾದ ಪತ್ರಕರ್ತನ ಪುತ್ರನಿಗೆ ಉಚಿತ ಶಿಕ್ಷಣ | ಕಾಂತೇಶ್ ಮಾನವೀಯ ನಡೆ

Next Post

ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಆಯ್ಕೆ ವಿವಾದ: ಪಾರದರ್ಶಕತೆಗೆ ಒತ್ತಾಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಇರುವಕ್ಕಿ ಕೃಷಿ-ತೋಟಗಾರಿಕೆ ವಿವಿ | ಫೆ.5ರಂದು ಕೃಷಿ ಮೇಳ

ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಆಯ್ಕೆ ವಿವಾದ: ಪಾರದರ್ಶಕತೆಗೆ ಒತ್ತಾಯ

Leave a Reply Cancel reply

Your email address will not be published. Required fields are marked *

No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
2

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL