ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮಾರಕ ಕೊರೋನಾ ವೈರಸ್ ರಾಜ್ಯ ಹಾಗೂ ರಾಷ್ಟ್ರವನ್ನು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯದಾದ್ಯಂತ ಹಲವು ವೈದ್ಯರು ಹಾಗೂ ಶುಶ್ರೂಷಕಿಯರು ಹಗಲಿರುಳು ತಮ್ಮ ಮನೆಗಳಿಗೂ ಸಹ ತೆರಳದೇ ಸೇವೆ ಸಲ್ಲಿಸುತ್ತಿದ್ದು, ಇಂತಹ ಸಾಲಿನಲ್ಲಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಸುನಂದಾ ಅವರೂ ಸಹ ಒಬ್ಬರು.
ಇಲ್ಲಿನ ಕೊರೋನಾ ವಾರ್ಡ್’ನಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುನಂದಾ ಅವರು, ಕಳೆದ 15 ದಿನಗಳಿಂದ ತಮ್ಮ ಮನೆಗೂ ತೆರಳದೇ ಮಗುವನ್ನು ನೋಡದೇ ದೂರ ಉಳಿದಿದ್ದಾರೆ.
ಮುಖ್ಯಮಂತ್ರಿ ಶ್ರೀ @BSYBJP ಅವರು, ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ #ಕೊರೊನ ವಾರ್ಡ್‌ನಲ್ಲಿ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುವ ಸಲುವಾಗಿ, 15 ದಿನಗಳಿಂದ ಮನೆಗೆ ಹೋಗಲಾಗದೇ ಮಗುವನ್ನು ನೋಡದೆ ದೂರ ಉಳಿದಿರುವ ಸುನಂದಾ ಅವರಿಗೆ ಧೈರ್ಯ ತುಂಬಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.#ಮನೆಯಲ್ಲೇಇರಿ#KarnatakaFightsCorona pic.twitter.com/daftFgqH1E
— CM of Karnataka (@CMofKarnataka) April 8, 2020
ಇವರ ಮಗು ತಾಯಿಯನ್ನು ನೋಡಬೇಕು, ತಾಯಿಯ ಬಳಿ ಕರೆದುಕೊಂಡು ಹೋಗಿ ಎಂದು ಗೋಳಿಡುತ್ತಿದ್ದ ಹಿನ್ನೆಲೆಯಲ್ಲಿ ಮಗುವಿನ ತಂದೆ ಆಸ್ಪತ್ರೆಯ ಬಳಿ ಕರೆದುಕೊಂಡು ಬಂದು ದೂರದಿಂದಲೇ ತಾಯಿಯನ್ನು ತೋರಿಸಿದ್ದಾರೆ. ಈ ವೇಳೆ ತಾಯಿ ಹಾಗೂ ಮಗು ಇಬ್ಬರೂ ಕಣ್ಣಿರಿಟ್ಟಿದ್ದು, ದೃಶ್ಯ ಎಂತಹವರ ಮನವನ್ನೂ ಕಲಕುವಂತಿತ್ತು. ಎಲ್ಲಕ್ಕೂ ಮಿಗಿಲಾಗಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಶುಶ್ರೂಷಕಿಯರ ತ್ಯಾಗ ನಿಜಕ್ಕೂ ಬೆಲೆ ಕಟ್ಟಲಾಗದು ಎಂಬುದನ್ನು ಸಾಬೀತುಪಡಿಸಿದೆ.
ಇನ್ನು, ಈ ವಿಚಾರ ತಿಳಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸ್ವತಃ ಸುನಂದಾ ಅವರಿಗೆ ಕರೆ ಮಾಡಿ, ತುಂಬಾ ಒಳ್ಳೆಯ ಕೆಲಸವನ್ನು ಕಷ್ಟ ಪಟ್ಟು ಮಾಡುತ್ತಿದ್ದೀರಿ. ಮಕ್ಕಳನ್ನೂ ಬಿಟ್ಟು ಸೇವೆ ಮಾಡುತ್ತಿದ್ದೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಶ್ಲಾಘಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post