ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೋವಿಡ್ 19 ವೈರಸ್ ಸೋಂಕು ತಗಲು ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಜ್ಞರ ಸಲಹೆ ಮೇರೆಗೆ ವಿವಿಧ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಲು ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಕೋವಿಡ್ 19 ಸೋಂಕಿತ ರೋಗಿಗಳಿಗೆ ತಜ್ಞರ ಸಲಹೆಯಂತೆ ಸಿದ್ದಪಡಿಸಿರುವ ಪಥ್ಯಾಹಾರದ ಪಟ್ಟಿ ಈ ಕೆಳಗಿನಂತಿದೆ.
ಬೆಳಗ್ಗೆ 7 ಗಂಟೆಗೆ: ಸೋಮವಾರ-ರವೆ ಇಡ್ಲಿ, ಮಂಗಳವಾರ-ಪೋಂಗಲ್, ಬುಧವಾರ-ಸೆಟ್ ದೋಸೆ, ಗುರುವಾರ ಅಕ್ಕಿ ಇಡ್ಲಿ, ಶುಕ್ರವಾರ-ಬಿಸಿಬೇಳೆ ಬಾತ್, ಶನಿವಾರ-ಚೌಚೌ ಬಾತ್, ಭಾನುವಾರ-ಸೆಟ್ ದೋಸೆ.
ಬೆಳಗ್ಗೆ 10 ಗಂಟೆಗೆ: ಸೋಮವಾರ-ಕಲ್ಲಂಗಡಿ ಹಣ್ಣು ಮತ್ತು ರಾಗಿ ಗಂಜಿ, ಮಂಗಳವಾರ-ಪಪಾಯ ಹಣ್ಣು ಮತ್ತು ಪಾಲಾಕ್ ಸೂಪ್, ಬುಧವಾರ-ಕರಬೂಜ ಹಣ್ಣು ಮತ್ತು ರವೆ ಗಂಜಿ, ಗುರುವಾರ-ಕಲ್ಲಂಗಡಿ ಹಣ್ಣು ಮತ್ತು ಕ್ಯಾರೆಟ್ ಸೂಪ್, ಶುಕ್ರವಾರ-ಪಪಾಯ ಹಣ್ಣು ಮತ್ತು ರಾಗಿ ಗಂಜಿ, ಶನಿವಾರ-ಕರಬೂಜ ಹಣ್ಣು ಮತ್ತು ಟೊಮೋಟೋ ಸೂಪ್, ಭಾನುವಾರ-ಪಪಾಯ ಹಣ್ಣು ಮತ್ತು ರವೆ ಗಂಜಿ.
ಮಧ್ಯಾಹ್ನ 1 ಗಂಟೆಗೆ: ರೊಟ್ಟಿ/ಚಪಾತಿ 2, ಪಲ್ಯ, ಅನ್ನ, ಬೇಳೆ ಸಾರು, ಮೊಸರು/ಮೊಟ್ಟೆ
ಸಾಯಂಕಾಲ 5.30ಕ್ಕೆ: ಏಲಕ್ಕಿ ಬಾಳೆಹಣ್ಣು, ಮಾರಿ ಬಿಸ್ಕೇಟ್-3, ಪ್ರೊಟೀನ್ ಬಿಸ್ಕೇಟ್-2, ಫ್ರೆಶ್ ಡೇಟ್ಸ್-2, ಮ್ಯಾಂಗೋ ಬಾರ್(ವಿಟಮಿನ್ -ಸಿ ಯುಕ್ತ).
ರಾತ್ರಿ ಊಟ 7 ಗಂಟೆಗೆ: ರೊಟ್ಟಿ/ಚಪಾತಿ-2, ಪಲ್ಯ, ಅನ್ನ, ಬೇಳೆಸಾರು, ಮೊಸರು.
ರಾತ್ರಿ 9 ಗಂಟೆಗೆ: ಫ್ಲೇವರ್ಡ್ ಮಿಲ್ಕ್
Get In Touch With Us info@kalpa.news Whatsapp: 9481252093
Discussion about this post