ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಕೋವಿಡ್19 ಪರಿಸ್ಥಿತಿ ನಿಯಂತ್ರಣವನ್ನು ಸಮರ್ಥವಾಗಿ ನಿರ್ವಹಿಸಿದ ಪರಶುರಾಂಪುರ ಪಿಎಸ್’ಐ ಮಹೇಶ್ ಲಕ್ಷ್ಮಣ್ ಹೊಸಪೇಟ್ ಅವರಿಗೆ ಉತ್ತಮ ನಿರ್ವಹಣೆ ಪ್ರಶಸ್ತಿ ಸಂದಿದೆ.
ಅಂತರ ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳ ನಿರಂತರ ಸಂಪರ್ಕದಿಂದ ಜಿಲ್ಲೆಗೆ ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಿ ಆಂಧ್ರ ಗಡಿಯ ಪರಶುರಾಮಪುರ ಹೋಬಳಿಯಲ್ಲಿ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆಯನ್ನು ಮಹೇಶ್ ನೀಡಿದ್ದಾರೆ.
ಈ ಕುರಿತಂತೆ ಅಡಿಷನಲ್ ಡೈರಕ್ಟರ್ ಜನರಲ್ ಆಫ್ ಪೊಲೀಸ್ ಡಾ ಅಮರ್‌ಕುಮಾರ್ ಪಾಂಡೆ ಅವರು ಘೋಷಣೆ ಮಾಡಿದ್ದು, ಕರ್ನಾಟಕ ಆಂಧ್ರ ಗಡಿಯ ಪರಶುರಾಮಪುರ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಶ ಲಕ್ಷ್ಮಣ ಹೊಸಪೇಟ್ ಅವರಿಗೆ ಕೋವಿಡ್-19ನ ಉತ್ತಮ ನಿರ್ವಹಣೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಕೊರೋನಾ ಲಾಕ್‌ಡೌನ್ ವೇಳೆ ಇಲಾಖೆಯ ಜೊತೆಯಲ್ಲಿ ನೆರೆ ರಾಜ್ಯ ಮತ್ತು ಜಿಲ್ಲೆಗಳ ಅಧಿಕಾರಿಗಳಿಂದ ಪ್ರತೀ ದಿನ ಮಾಹಿತಿ ಪಡೆದು ಪರಶುರಾಮಪುರ ಗಡಿ ಗ್ರಾಮಗಳಲ್ಲಿ ಸೋಂಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಕರೋನಾ ವೈರಸ್ ನಿಯಂತ್ರಣಕ್ಕೆ ಪಿಎಸ್‌ಐ ಮಹೇಶ ಲಕ್ಷ್ಮಣ ಹೊಸಪೇಟ್ ಅವರು ಶ್ರಮಿಸಿದ್ದನ್ನು ಗುರ್ತಿಸಿ ಅಡಿಷನಲ್ ಡೈರಕ್ಟರ್ ಜನರಲ್ ಆಫ್ ಪೊಲೀಸ್ ಡಾ ಅಮರ್‌ಕುಮಾರ್ ಪಾಂಡೆ ಐಪಿಎಸ್, ಇವರು ಕಾನೂನು ಮತ್ತು ಸುವ್ಯವಸ್ಥೆ ಕರ್ನಾಟಕದ ಪೊಲೀಸ್ ಇಲಾಖೆಯ ವತಿಯಿಂದ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಪಿಎಸ್‌ಐ ಮಹೇಶಹೊಸಪೇಟ್ ಅವರನ್ನು ಪ್ರಶಂಸಿಸಿ ಈ ಪ್ರಮಾಣ ಪತ್ರವನ್ನು ನೀಡಲಾಗಿದೆ.
-ರಾಧಿಕಾ, ಪೊಲೀಸ್ ವರಿಷ್ಟಾಧಿಕಾರಿ ಚಿತ್ರದುರ್ಗ ಜಿಲ್ಲೆ
ಚಿತ್ರದುರ್ಗ ಜಿಲ್ಲೆಯ ಆಂಧ್ರಪ್ರದೇಶದ ಕೂಗಳತೆ ದೂರದ ಜಾಜೂರು ಗ್ರಾಪಂ ವ್ಯಾಪ್ತಿಯ ಗಂಟೆ ದೊಡ್ಡೋಬಯ್ಯನಹಟ್ಟಿಗೆ ಕೇವಲ ಒಂದು ಕಿಮೀ ದೂರದಲ್ಲಿದ್ದ ಆಂಧ್ರದ ಅನಂತಪುರ ಜಿಲ್ಲೆಯ ಸಂಪರ್ಕದ ವ್ಯಕ್ತಿಯಿಂದ ಸೋಂಕಿನ ವರದಿ ಬರುವುದಕ್ಕೂ ಮುಂಚಿತವಾಗಿ ಪೊಲೀಸ್ ಇಲಾಖೆ ಈ ಭಾಗದ ರಾಜ್ಯದ ಹಳ್ಳಿಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಇಲಾಖೆಯ ಮೇಲಾಧಿಕಾಗಳ ಆದೇಶದ ಮೇರೆಗೆ ಜಾಜೂರು ಸುತ್ತಮುತ್ತ ಸುಮಾರು ಐದು ಕಿಮೀ ತನಕ ಸ್ವಯಂಪ್ರೇರಿತವಾಗಿ ಸೀಲ್‌ಡೌನ್ ಮಾಡಿಸಿ ಚೆಕ್ ಪೋಸ್ಟ್ ನಿರ್ಮಿಸಿ ಕೊರೋನಾ ಸೋಂಕು ನಿಯಂತ್ರಿಸಲು ಶ್ರಮಿಸಿದ ಹಿನ್ನೆಲೆಯಲ್ಲಿ ಇವರಿಗೆ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಈ ಪ್ರಮಾಣ ಪತ್ರವನ್ನು ನೀಡಿದ್ದಾರೆ.
ಇಲಾಖೆಯ ಎಲ್ಲಾ ಹಂತದ ಮೇಲಾಧಿಕಾರಿಗಳ ನಿರ್ದೇಶನದಂತೆ ಅವರ ಮಾರ್ಗದರ್ಶನವನ್ನು ಅನುಸರಿಸಿಕೊಂಡು ಗ್ರಾಮದ ಪೊಲೀಸ್ ಠಾಣಾ ಸಿಬ್ಬಂದಿಯ ಸಹಕಾರದಲ್ಲಿ ಕರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಗಮನ ನೀಡಿ, ಸರ್ಕಾರದ ಆದೇಶಗಳನ್ನು ಪಾಲನೆ ಮಾಡುತ್ತಿರುವೆ, ಈವರೆಗೂ ಪರಶುರಾಮಪುರ ಠಾಣಾ ವ್ಯಾಪ್ತಿಯಲ್ಲಿ ಕರೋನಾ ಕಂಡುಬರದೇ ಇರುವುದು ಸಂತಸದ ಸಂಗತಿ
-ಮಹೇಶ ಲಕ್ಷ್ಮಣ ಹೊಸಪೇಟ್, ಪಿಎಸ್’ಐ
ಉತ್ತರ ಪ್ರದೇಶದಿಂದ ಲಾರಿಯಲ್ಲಿ ಆಗಮಿಸುತ್ತಿದ್ದ ಗುಂಪೊಂದನ್ನು ಅಂತರ ರಾಜ್ಯ ಚೆಕ್ ಪೋಸ್ಟ್ ನಾಗಪ್ಪನಹಳ್ಳಿ ಗೇಟ್‌ನಲ್ಲಿ ತಡೆದು ತಪಾಸಣೆ ನಡೆಸಿ ಆ ಎಲ್ಲರನ್ನೂ ಕ್ವಾರಂಟೈನ್ ಮಾಡಿದ ಬಳಿಕ ಬಂದ 28 ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಿಪಿಐ, ಡಿವೈಎಸ್‌ಪಿ, ಪಿಎಸ್‌ಐ ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಿಂದ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.
ಇವರ ಉತ್ತಮವಾದ ಕಾರ್ಯನಿರ್ವಹಣೆ ಗುರುತಿಸಿ ಸಾರ್ವಜನಿಕರು ಚಳ್ಳಕೆರೆ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಅವರು ಕರೋನಾ ವಾರಿಯರ್ಸ್ ಜೊತೆಯಲ್ಲಿ ಇವರನ್ನು ಗೌರವಿಸಲಾಗಿತ್ತು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post