No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
  • Advertise With Us
  • Grievances
  • About Us
  • Contact Us
Thursday, August 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸಂಸ್ಕಾರವಂತ ಕುಟುಂಬದ ಫಲ | ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾದ ಕೋಲಾರದ ವಿದ್ಯಾಶ್ರೀ

ಮೇ. 4ರಂದು ವಿದ್ಯಾಶ್ರೀ ಎಚ್.ಎಸ್. ಭರತನಾಟ್ಯ ರಂಗಪ್ರವೇಶ | ವಿದುಷಿ ರೂಪಶ್ರೀ ಮಧುಸೂದನ ಅವರ ಶಿಷ್ಯೆ ರಂಗಾರೋಹಣ

kalpa News by kalpa News
May 3, 2024
in Special Articles, ಬೆಂಗಳೂರು ನಗರ
0
ಸಂಸ್ಕಾರವಂತ ಕುಟುಂಬದ ಫಲ | ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾದ ಕೋಲಾರದ ವಿದ್ಯಾಶ್ರೀ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಲೇಖನ: ಕೌಸಲ್ಯಾ ರಾಮ  |

ಕರುನಾಡಿನ ಸಾಂಸ್ಕೃತಿಕ ಕಲೆಗಳನ್ನು ಅನಾವರಣಗೊಳಿಸುವ ಹಲವು ಕಲಾ ಪ್ರಕಾರಗಳು ನಮ್ಮ ನಾಡಿನ ವೈಭವವನ್ನು ಮೇರು ಪರ್ವತದೆತ್ತರಕ್ಕೆ ಸಾರಿವೆ. ಇಂತಹ ಕಲೆಯ ಸಾಲಿನಲ್ಲಿ ಭರತನಾಟ್ಯ ಅಗ್ರಗಣ್ಯವಾಗಿದೆ. ಇಂತಹ ಶ್ರೇಷ್ಠ ಕಲೆಯನ್ನು ಅನವರತ ಅಭ್ಯಾಸ ಮಾಡಿ, ರಂಗ ಪ್ರವೇಶದ ಮೂಲಕ ಕಲಾ ಸರಸ್ವತಿಯನ್ನು ಆರಾಧಿಸಲು ಸಿದ್ದರಾಗಿದ್ದಾರೆ ಬೆಂಗಳೂರಿನ ಇಂಜಿನಿಯರ್ ಎಚ್.ಎಸ್. ವಿದ್ಯಾಶ್ರೀ…

ಕೋಲಾರ #Kolara ಮೂಲದ ಇಂಜಿನಿಯರ್ ಎಚ್.ಎಸ್. ಸುರೇಶ್ ಮತ್ತು ಸಂಸ್ಕೃತ ಶಿಕ್ಷಕಿ ಕೆ.ಸಿ. ನಾಗಶ್ರೀ ಅವರ ಪುತ್ರಿ ವಿದ್ಯಾಶ್ರೀ ಎಚ್.ಎಸ್. ಇದೀಗ ಭರತನಾಟ್ಯ #Bharatanatya ರಂಗಪ್ರವೇಶಕ್ಕೆ ಸಿದ್ಧರಾಗಿದ್ದಾರೆ.

ಸಂಸ್ಕಾರವಂತ ಕುಟುಂಬದಿಂದ ಬಂದ ಯುವತಿಯು ವಿದುಷಿ ರೂಪಶ್ರೀ ಮಧುಸೂದನ ಅವರಲ್ಲಿ ಶಿಷ್ಯತ್ವ ಪಡೆದಿದ್ದು, ರಂಗಾರೋಹಣಕ್ಕೆ ಅಣಿಯಾಗಿರುವುದು ವಿಶೇಷ.

ಮೇ 4 ರಂದು ಬೆಳಗ್ಗೆ 9.30ಕ್ಕೆ ರಾಜಧಾನಿ ಬೆಂಗಳೂರಿನ #Bengaluru ಜೆ.ಸಿ. ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಹಿರಿಯ ಕಲಾವಿದರು, ಖ್ಯಾತ ವಿದ್ವಾಂಸರ ಸಮ್ಮುಖ ರಂಗ ಪ್ರಸ್ತುತಿ ಸಂಪನ್ನಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಗುರು ವಿದುಷಿ ರೂಪಶ್ರೀ ಮಧುಸೂದನರ ನಟುವಾಂಗ, ವಿದುಷಿ ದೀಪ್ತಿ ಶ್ರೀನಾಥ ಅವರ ಗಾಯನವಿದೆ. ಪಕ್ಕವಾದ್ಯ ಮೃದಂಗದಲ್ಲಿ ವಿದ್ವಾನ್ ಶ್ರೀಹರಿ ರಂಗಸ್ವಾಮಿ, ಕೊಳಲು- ವಿದ್ವಾನ್ ವಿವೇಕ ಕೃಷ್ಣ, ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ಕಾರ್ತಿಕ್ ದಾತಾರ್ ಸಾಥ್ ನೀಡಲಿದ್ದಾರೆ. ಮನೋಜ್ಞ ನೃತ್ಯ ಪ್ರದರ್ಶನಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಲಾಶ್ರೀ, ಹಿರಿಯ ನೃತ್ಯ ಪ್ರವೀಣೆ  ಡಾ. ಪದ್ಮಜಾ ಸುರೇಶ, ಭರತನಾಟ್ಯ ವಿದ್ವಾಂಸ ಪ್ರವೀಣ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಮನೆಯ ಸಂಸ್ಕಾರವೇ ಕಲೆಗೆ ಭೂಮಿಕೆಯಾಯಿತು
ಸುಸಂಸ್ಕೃತ ಮನೆಯಲ್ಲಿ ಹಿರಿಯರಿಂದ ದೊರಕುವ ಸಂಸ್ಕಾರವೇ ಮಕ್ಕಳ ಕಲಾಸಕ್ತಿಗೆ ಭೂಮಿಕೆಯಾಗಿತ್ತದೆ ಎಂಬುದಕ್ಕೆ ಯುವ ಪ್ರತಿಭೆ ವಿದ್ಯಾಶ್ರೀ ಪ್ರತೀಕವಾಗಿದ್ದಾರೆ ಎನ್ನಬಹುದು. ಹೌದು. ಕೋಲಾರ ಮೂಲದ ಇಂಜಿನಿಯರ್ ಎಚ್.ಎಸ್. ಸುರೇಶ್ ಮತ್ತು ಸಂಸ್ಕೃತ ಶಿಕ್ಷಕಿ ಕೆ.ಸಿ. ನಾಗಶ್ರೀ ಅವರ ವಂಶದಲ್ಲಿ ಎಲ್ಲರಿಗೂ ಸಂಗೀತ- ನೃತ್ಯದ ಬಗ್ಗೆ ಅಪಾರ ಗೌರವ ಇದೆ. ಆದರೆ ಯಾರೂ ಅದರಲ್ಲಿ ಈ ಮಟ್ಟಿನ ಸಾಧನೆ ಮಾಡಿದವರಿಲ್ಲ. ಆದರೂ ವಿದ್ಯಾಶ್ರೀಗೆ ಹೇಗೆ ಭರತನಾಟ್ಯ ಕಲೆ ಒಲಿಯಿತು ಎಂದು ಅವಲೋಕಿಸಿದಾಗ ಇದರ ಹಿಂದೆ ಅವರ ಮನೆಯ ಸಂಸ್ಕಾರ ಢಾಳಾಗಿ ಎದ್ದು ಕಾಣುತ್ತದೆ.
ಈ ಬಗ್ಗೆ ವಿದ್ಯಾಶ್ರೀ ಅವರ ತಾಯಿ ನಾಗಶ್ರೀ ಪ್ರತಿಕ್ರಿಯಿಸಿದ್ದು ಹೀಗೆ. ನನ್ನ ಮಗಳು ವಿದ್ಯಾಶ್ರೀಗೆ 6ನೇ ವರ್ಷದಿಂದಲೇ ಸಂಗೀತ- ನೃತ್ಯದ ಆಸಕ್ತಿ ಕಾಣಿಸಿತು. ಮನೆಯ ಸಮೀಪದಲ್ಲೇ ಶಾರದಾ ಸುಗಮ ಸಂಗೀತ ಶಾಲೆಯಲ್ಲಿ ಗಾಯನ,  ಚಿತ್ರಕಲಾ ತರಗತಿಗೆ ಸೇರಿದಳು. ಮಗಳು ವ್ಯಾಸಂಗ ಮಾಡುತ್ತಿದ್ದ  ವಿದ್ಯಾನಿಕೇತನ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ವಿದುಷಿ ರೂಪಶ್ರೀ ಮಧುಸೂದನ ಅವರು ಈಕೆ ಪ್ರತಿಭೆ ಗುರುತಿಸಿದರು. ಸರಿ. ಅವರ ಬಳಿಯೇನೃತ್ಯಗಂಗಾ ಕಲಾ ಶಾಲೆಯಲ್ಲಿ ನೃತ್ಯಾಭ್ಯಾಸ ಆರಂಭವಾಯಿತು. 16 ವರ್ಷದಿಂದ ನಾವು ಈಕೆಗೆ ಎಂದೂ ‘ಅಭ್ಯಾಸ ಮಾಡು’, ನೃತ್ಯ ಪರೀಕ್ಷೆ ಕಟ್ಟು ಎಂದು ಹೇಳಿಲ್ಲ. ಎಲ್ಲವೂ ಅವಳ ಸ್ವಯಂ ಸ್ಫೂರ್ತಿಯೇ- ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಶಾಲಾ ಕಲಿಕೆಗೆ ಪೂರಕವಾದ ನೃತ್ಯ
ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಂತಕ್ಕೆ ಬಂದ ಮಕ್ಕಳಿಗೆ ಪಾಲಕರು ಸಂಗೀತ- ನೃತ್ಯ- ಕಲೆ- ಕ್ರೀಡೆ- ಹೀಗೆ ಎಲ್ಲ ಚಟುವಟಿಕೆಗಳನ್ನೂ ಸ್ಟಾಪ್ ಮಾಡಿಬಿಡುತ್ತಾರೆ. ‘ಓದಬೇಕು, ಅಂಕ ಗಳಿಸಬೇಕು’ ಅಷ್ಟೇ ಪರಮ ಗುರಿ!  ಆದರೆ ವಿದ್ಯಾಶ್ರೀ ವಿಭಿನ್ನ. ಕಲೆ ಎಂದಿಗೂ ಶಾಲಾ ಪಠ್ಯಕ್ರಮಕ್ಕೆ ಪೂರಕವಾಗಿ ಇರುತ್ತದೆ ಎಂದು ಶಿಕ್ಷಣ ತಜ್ಞರು ಹೇಳುವ ಮಾತನ್ನು ಈಕೆ ದಿಟಗೊಳಿಸಿದಳು. 10ನೇ ತರಗತಿ ವ್ಯಾಸಂಗದ ನಡುವೆಯೇ ಭರತನಾಟ್ಯ ಸೀನಿಯರ್ ಪರೀಕ್ಷೆಯನ್ನು ಉತ್ತಮ ಅಂಕದೊಂದಿಗೇ ಉತ್ತೀರ್ಣಳಾದಳು.

https://kalpa.news/wp-content/uploads/2024/05/Kumadwathi-1.mp4

ಮಾದರಿ ವಿದ್ಯಾರ್ಥಿ
ವಿದುಷಿ ದಿವ್ಯಾ ಗಿರಿಧರ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪಾಠಕ್ರಮ ಪೂರ್ಣಗೊಳಿಸಿಕೊಂಡಳು. ಶಾಲಾ- ಕಾಲೇಜಿನ ಯಾವ ಹಂತದ ಪರೀಕ್ಷೆಗೂ ಸಂಗೀತ- ನೃತ್ಯ ಎಂಬುದು ಚೈತನ್ಯ ಕೊಟ್ಟಿತು. ಇದು ನಮ್ಮೆಲ್ಲಾ ಪಾಲಕರಿಗೆ ಮಾದರಿಯಾಗಬೇಕು. ಆ ಮಟ್ಟಿನ ಸಾಧನೆ ಮಾಡಿದ ವಿದ್ಯಾಶ್ರೀ, ಹಿಂತಿರುಗಿ ನೋಡಲೇ ಇಲ್ಲ. ಬಿಇ- ಎಂಎ. ಫೈನ್ ಆರ್ಟ್ಸ್ ಸಂದರ್ಭದಲ್ಲೂ ನೃತ್ಯ ಕಲಿಕೆ ಮರೆಯಲಿಲ್ಲ. ಆ ಮಟ್ಟಿಗಿನ ಬಾಂಧವ್ಯ, ಗುರು- ಶಿಷ್ಯ ಪರಂಪರೆಯನ್ನು ಬಿಗಿಗೊಳಿಸಿದ ಕೀರ್ತಿ ವಿದುಷಿ ರೂಪಶ್ರೀ ಅವರಿಗೂ ಸಲ್ಲುತ್ತದೆ. 16 ವರ್ಷ ನರ್ತನ ಕಲಿಕೆ ಫಲವಾಗಿ ವಿದ್ಯಾಶ್ರೀ ಇದೀಗ ಭರತನಾಟ್ಯ ವಿದ್ವತ್ ಪೂರ್ಣಗೊಳಿಸಿ ಕ್ರೈಸ್ಟ್ ವಿಶ್ವ ವಿದ್ಯಾಲಯದಲ್ಲಿ ಭರತನಾಟ್ಯ ಸ್ನಾತಕೋತ್ತರ ಪದವಿಯನ್ನೂ (ವಾರಾಂತ್ಯ ತರಗತಿಗೆ ಬದ್ಧವಾಗಿ) ಪಡೆದಿರುವುದು ಸಾಧನೆಯ ಛಾವಣಿಯ ನಿಚ್ಚಣಿಕೆಯಾಗಿದೆ.

ಬಹುಮುಖೀ- ಸಖೀ
ಇದರೊಂದಿಗೆ ಈಕೆ ಸಂಸ್ಕೃತ ಭಾಷೆಯಲ್ಲೂ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. 15 ವರ್ಷಗಳಿಂದ ವಿದ್ವಾನ್. ಸುಬ್ರಮಣ್ಯಯನ್ ಅವರ ಮಾರ್ಗದರ್ಶನದಲ್ಲಿ ಸಂಸ್ಕೃತ ಭಾಷಾಧ್ಯಯನ ಸಾಗಿದೆ. ವಿದುಷಿ ಅನಂತಲಕ್ಷ್ಮೀ ನಟರಾಜನ್ ರವರು ಸ್ಥಾಪಿಸಿದ ಗೀತಾಗೋವಿಂದ ಸಂಸ್ಕೃತ ಸಂಘದಲ್ಲಿ  ಈಕೆ ಸಂಸ್ಕೃತ ಶಿಕ್ಷಕಿಯಾಗಿದ್ದಾರೆ. ವ್ಯೋಮಾ ಲಿಂಗ್ವಿಸ್ಟಿಕ್ ಲ್ಯಾಬ್ಸ್, ಸಂಸ್ಕೃತ ಇ – ಲರ್ನಿಂಗ್ ಸಂಸ್ಥೆಯಲ್ಲಿ ಸ್ವಯಂ ಸೇವಕಿಯಾಗಿ ಸೇವೆ ಮಾಡುತ್ತಿದ್ದಾರೆ.

https://kalpa.news/wp-content/uploads/2024/04/VID-20240426-WA0008.mp4

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಅನ್ನ ನೀಡುವ ‘ ಆಪ್ತ ಸಹಾಯ ಫೌಂಡೇಷನ್’ ಎಂಬ ಎನ್‌ಜಿಒದಲ್ಲೂ ವಿದ್ಯಾಶ್ರೀ ವಾಲಂಟಿಯರ್. ಹೆತ್ತವರಿಗೆ, ವಿದ್ಯೆ ಕಲಿಸಿದ ಗುರುವಿಗೆ ಇದಕ್ಕಿಂತ ಇನ್ನೇನು ಕಾಣಿಕೆ ಬೇಕು? ಎಲ್ಲ ಮನೆಯಲ್ಲೂ ವಿದ್ಯಾಶ್ರೀ ಯಂಥಾ ಮಕ್ಕಳೇ ಜನಿಸಿದರೆ ನಮ್ಮ ಭರತಖಂಡದ ಕೀರ್ತಿ ಬಹುಬೇಗ ವಿಶ್ವವ್ಯಾಪಿ ಆಗುವಲ್ಲಿ ಸಂದೇಹವೇ ಇಲ್ಲ.

ಬನ್ನಿ. ಚಿನ್ನದ ನಾಡು ಕೋಲಾರ ಮೂಲದ ಹೆಮ್ಮೆಯ ಪುತ್ರಿಯ ಕಲಾ ಸೊಬಗಿನ ದರ್ಶನ ಮಾಡೋಣ. ಯುವ ಪ್ರತಿಭೆಗೆ ಬೆನ್ನು ತಟ್ಟುವ ಕೆಲಸ ಮಾಡಿ, ಇಂಥ ನೂರಾರು ಪ್ರತಿಭೆಗಳು ಚಿಗುರೊಡೆಯಲು ಪ್ರೇರಣೆ ನೀಡೋಣ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: ADA RangamandirBENGALURUBharatanatyamDance FestivalKannada News WebsiteKolaraLatest News KannadaSanskritಎಡಿಎ ರಂಗಮಂದಿರಕಲೆಕೋಲಾರನೃತ್ಯ ಪ್ರದರ್ಶನಬೆಂಗಳೂರುಭರತನಾಟ್ಯರಂಗಪ್ರವೇಶಸಂಸ್ಕೃತ
Share223Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಿವೃತ್ತ ಯೋಧನಿಗೆ ಅದ್ಧೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಿದ ಗ್ರಾಮಸ್ಥರು

Next Post

ಡಿ.ಎಸ್. ಈಶ್ವರಪ್ಪ ಅವರನ್ನು ಚುನಾವಣೆಗೆ ನಿಲ್ಲಿಸಿದ್ದು ಯಾರು: ಅವರೇ ಕೊಟ್ಟ ಸ್ಪಷ್ಟೀಕರಣ ಏನು?

kalpa News

kalpa News

Next Post
ಡಿ.ಎಸ್. ಈಶ್ವರಪ್ಪ ಅವರನ್ನು ಚುನಾವಣೆಗೆ ನಿಲ್ಲಿಸಿದ್ದು ಯಾರು: ಅವರೇ ಕೊಟ್ಟ ಸ್ಪಷ್ಟೀಕರಣ ಏನು?

ಡಿ.ಎಸ್. ಈಶ್ವರಪ್ಪ ಅವರನ್ನು ಚುನಾವಣೆಗೆ ನಿಲ್ಲಿಸಿದ್ದು ಯಾರು: ಅವರೇ ಕೊಟ್ಟ ಸ್ಪಷ್ಟೀಕರಣ ಏನು?

Leave a Reply Cancel reply

Your email address will not be published. Required fields are marked *

No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL