ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಭಿನ್ನ ಫಿಕ್ಷನ್ ಮತ್ತು ನಾನ್ ಫಿಕ್ಷನ್ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿರುವ ಜೀ ಕನ್ನಡ #ZeeKannada ಇದೀಗ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡಿದೆ. ಜನಮನ್ನಣೆ ಗಳಿಸಿರುವ ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್’ #DanceKarnatakaDance ಹೊಸ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ.
ಡಾನ್ಸ್ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಈ ಶೋ ಈ ಬಾರಿ ಇನ್ನಷ್ಟು ವಿಭಿನ್ನವಾಗಿರಲಿದೆ. ಹೊಸ ಥೀಮ್‌ಗಳು, ಅದ್ಭುತ ಪ್ರತಿಭೆಗಳ ಪ್ರದರ್ಶನಗಳೊಂದಿಗೆ ಈ ಬಾರಿಯ ಶೋ ಮತ್ತಷ್ಟು ಮನರಂಜನೆ ನೀಡಲು ಸಜ್ಜಾಗಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನವೆಂಬರ್ 15ರಂದು ಪ್ರೀಮಿಯರ್ ಆಗಲಿದ್ದು, ಪ್ರತೀ ಶನಿವಾರ ಮತ್ತು ಭಾನುವಾರ ಸಂಜೆ 7:30ಕ್ಕೆ ಪ್ರಸಾರವಾಗಲಿದೆ.
ತನ್ನ ಮಾತಿನ ಮೂಲಕ ಜನಮನ್ನಣೆ ಪಡೆದ ಅನುಶ್ರೀ #Anushree ಅವರು ಈ ಸೀಸನ್‌ನ ಆಂಕರ್ ಆಗಿರಲಿದ್ದು, ಜಡ್ಜಸ್ ಪ್ಯಾನೆಲ್‌ನಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್, #Shivarajkumar ಡಿಂಪಲ್ ಕ್ವೀನ್ ರಚಿತಾ ರಾಮ್, ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಮತ್ತು ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಇರಲಿದ್ದಾರೆ.
ಈ ಸೀಸನ್‌ನಲ್ಲಿ ಬಿಗ್ ಟ್ವಿಸ್ಟ್ ಇರಲಿದ್ದು ಜನಪ್ರಿಯ ಸೆಲೆಬ್ರಿಟಿಗಳು ರಾಜ್ಯದಾದ್ಯಂತ ಆಯ್ಕೆಯಾದ ಪ್ರತಿಭಾವಂತ ನೃತ್ಯಗಾರರೊಂದಿಗೆ ಜೋಡಿಯಾಗಿ ಪಾಲ್ಗೊಳ್ಳಲಿದ್ದಾರೆ. ಸೆಲೆಬ್ರಿಟಿಗಳ ಸಾಲಿನಲ್ಲಿ ಧನಂಜಯ್, ಭವ್ಯಾ ಗೌಡ, ಆರತಿ ಪಡುಬಿದ್ರಿ, ಅಮೋಘ್, ಪ್ರತೀಕ್ಷಾ, ನಂದಿನಿ, ಅನೂಪ್, ಸ್ಮೈಲ್ ಗುರು ರಕ್ಷಿತ್, ಜಗಪ್ಪ, ಅನನ್ಯ, ಪೂಜಾ ರಮೇಶ್ ಮತ್ತು ಅಶ್ವಿನ್ ಇರಲಿದ್ದಾರೆ.
ಮೊದಲ ಎಪಿಸೋಡ್ ನಲ್ಲಿ ಸೆಲೆಬ್ರಿಟಿ ಡ್ಯಾನ್ಸರ್ ಗಳು ಇರಲಿದ್ದು, ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆದ ಆಡಿಷನ್ ನಲ್ಲಿ ಸೆಲೆಕ್ಟ್ ಆದ ಡ್ಯಾನ್ಸರ್ ಗಳು ಮುಂಬರಲಿರುವ ಎಪಿಸೋಡ್ ಗಳಲ್ಲಿ ಇವರಿಗೆ ಜೋಡಿಯಾಗಲಿದ್ದಾರೆ. ಯಾವ ಸೆಲೆಬ್ರಿಟಿಗೆ ಯಾರು ಜೋಡಿ ಆಗ್ತಾರೆ ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಲಿದೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಹೊಸ ಸೀಸನ್ ಡಾನ್ಸ್ ಮತ್ತು ಕ್ರಿಯೇಟಿವಿಟಿ ಎದ್ದು ಕಾಣಲಿದೆ. ಪ್ರತಿ ಎಪಿಸೋಡ್‌ನಲ್ಲಿ ವಿಭಿನ್ನ ಥೀಮ್‌ಗಳು, ರೋಮಾಂಚನಕಾರಿ ಫೇಸ್‌ಆಫ್‌ಗಳು ಮತ್ತು ಕರ್ನಾಟಕದ ಸಂಸ್ಕೃತಿ, ರಿದಮ್ ಮತ್ತು ಆತ್ಮಸ್ಥೈರ್ಯವನ್ನು ಪ್ರತಿಬಿಂಬಿಸುವ ಡಾನ್ಸ್ ಗಳು ಇರಲಿದ್ದು ಇದು ಪ್ರೇಕ್ಷಕರನ್ನು ತನ್ನತ್ತ ಸೆಳೆಯಲಿದೆ.
ಇನ್ನು ವರುಷದ ಬಳಿಕ ಈಗ ಡಾನ್ಸ್ ಕರ್ನಾಟಕ ಡಾನ್ಸ್ ಪ್ರೇಕ್ಷಕರನ್ನು ಮತ್ತೊಮ್ಮೆ ಮೋಡಿ ಮಾಡಲು ಸಿದ್ಧವಾಗಿದೆ. ಡಾನ್ಸ್ ಹಬ್ಬವನ್ನು ಕಣ್ಣುತುಂಬಿಸಿಕೊಳ್ಳಲು ವೀಕ್ಷಿಸಿ ‘ಡಾನ್ಸ್ ಕರ್ನಾಟಕ ಡಾನ್ಸ್’ ಇದೆ 15 ರಿಂದ, ಶನಿವಾರ ಮತ್ತು ಭಾನುವಾರ ರಾತ್ರಿ 7:30 ಕ್ಕೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post