ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಮಹಾಮಾರಿ ಲಾಕ್ ಡೌನ್’ನಿಂದ ತತ್ತರಿಸಿರುವ ಹೊಸಮನೆ ಬಡಾವಣೆಯ ಸಾರ್ವಜನಿಕರಿಗೆ ವಿಧಾನಪರಿಷತ್ ಸದಸ್ಯರಾದ ಆರ್. ಪ್ರಸನ್ನ ಕುಮಾರ್ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ಅವರು ಆಹಾರದ ಕಿಟ್’ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂಎಲ್’ಸಿ ಆರ್. ಪ್ರಸನ್ನ ಕುಮಾರ್ ಅವರು ಕೊರೋನಾ ವೈರಸ್’ನಿಂದ ಜನ ಜೀವನ ತತ್ತರವಾಗಿತ್ತು. ಆದರೆ ಜನ ಆತಂಕ ಪಡುವುದು ಬೇಡ. ಎಚ್ಚರದಿಂದಿರಿ. ವಯೋವೃದ್ಧರು ಹಾಗೂ ಸಣ್ಣ ಮಕ್ಕಳು ಅತಿ ಹೆಚ್ಚು ಜಾಗೃತಿ ವಹಿಸಬೇಕು. ಸಾಮಾಜಿಕ ಅಂತರವನ್ನು ಕಂಡುಕೊಳ್ಳಬೇಕು ಮಾಸ್ಕ್ ಧರಿಸಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಅವರು, ಈಗಾಗಲೇ ನಾವು ಮುಂಜಾಗ್ರತಾ ಕ್ರಮವಾಗಿ ವಾರ್ಡ್‌ನಲ್ಲಿ ಔಷಧಿ ಸಿಂಪಡಣೆಯನ್ನು ಮಾಡಿದ್ದು ವೈಯಕ್ತಿಕವಾಗಿ ಸಾವಿರಕ್ಕೂ ಹೆಚ್ಚು ಆಹಾರದ ಕಿಟ್’ಗಳನ್ನು ಕೂಲಿ ಕಾರ್ಮಿಕರಿಗೆ, ಆಟೋ ಚಾಲಕರಿಗೆ ಹಾಗೂ ಎಲ್ಲ ಸ್ತರದ ಸಾರ್ವಜನಿಕರಿಗೆ ನೀಡಲಾಗಿದೆ. ಹಾಗೆಯೇ ನಮ್ಮ ಸ್ಥಳೀಯ ಅನುದಾನದಲ್ಲಿ ಮಹಾನಗರ ಪಾಲಿಕೆಯಿಂದ ಎರಡು ಸಾವಿರದ ಕಿಟ್’ಗಳನ್ನು ನೀಡಬೇಕೆಂದು ಮನವಿ ಮಾಡಿದ್ದವು. ಆದರೆ ಪಾಲಿಕೆಯ ತೀರ್ಮಾನದಂತೆ ಒಂದು ಸಾವಿರ ಕಿಟ್’ಗಳನ್ನು ನೀಡಲಾಗಿದ್ದು, ಅವುಗಳನ್ನು ಸಹ ಸಾರ್ವಜನಿಕರಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಈ ಕೊರೋನ ಮಹಾಮಾರಿ ವಿರುದ್ಧ ಹೋರಾಡುವ ಅವಶ್ಯಕತೆ ಇದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್ , ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ನಗರಾಧ್ಯಕ್ಷ ಎಚ್.ಪಿ. ಗಿರೀಶ್ ರಾಜ್ಯ ಕಾರ್ಯದರ್ಶಿಗಳಾದ ಟಿ.ವಿ. ರಂಜಿತ್ ಆರ್. ಕಿರಣ್ ಮುಖಂಡರುಗಳಾದ ಚಂದ್ರು ಗೆಡ್ಡೆ ರಾಜೇಶ್ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post