No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Tuesday, October 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

ದೇಶಿ ಗೋವಿನ ತುಪ್ಪಕ್ಕೇ ವಿಶೇಷ ಗುಣ | ಮಿಶ್ರತಳಿ ಹಾಲಿನ ಉತ್ಪನ್ನಗಳ ಬಗ್ಗೆ ರಾಘವೇಶ್ವರ ಶ್ರೀಗಳ ಮಾತು

ಸಾವಿರ ಬಾರಿ ಬಿಸಿ ಮಾಡಿದರೂ ಕೆಡದ ಅಪೂರ್ವ ಶಕ್ತಿ ತುಪ್ಪಕ್ಕಿದೆ ಎಂದ ಶ್ರೀಗಳು

kalpa News by kalpa News
September 22, 2026
in News, ಉತ್ತರ ಕನ್ನಡ
0
desi cow ghee special qualities raghaveshwara shree
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ (ಉತ್ತರಕನ್ನಡ)  |

ದೇಶಿ ಗೋವಿನ ಹಾಲಿನಿಂದ ಸಾಂಪ್ರದಾಯಿಕವಾಗಿ ತಯಾರಿಸುವ ಹಾಲು, ಮೊಸರು, ಬೆಣ್ಣೆ ಹಾಗೂ ತುಪ್ಪಕ್ಕೂ ಮಿಶ್ರತಳಿ ಗೋವುಗಳ ಹಾಲಿನಿಂದ ತಯಾರಿಸುವ ಉತ್ಪನ್ನಗಳಿಗೂ ವ್ಯತ್ಯಾಸವಿದೆ. ಉತ್ಕೃಷ್ಟ ಮೂಲದ್ರವ್ಯ ಹಾಗೂ ಸಮರ್ಪಕ ಸಂಸ್ಕಾರದಿಂದ ಮಾತ್ರ ಶ್ರೇಷ್ಠ ಗುಣಮಟ್ಟದ ತುಪ್ಪ (Desi Cow Ghee) ಲಭ್ಯವಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ (Gokarna) ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 21ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ತುಪ್ಪದ ಕುರಿತು ಪ್ರವಚನ ಅನುಗ್ರಹಿಸಿದ ಅವರು, ಆಹಾರದ ಮೂಲದ್ರವ್ಯ ಮತ್ತು ಅದಕ್ಕೆ ನೀಡುವ ಸಂಸ್ಕಾರ ಎರಡೂ ಅದರ ಗುಣಮಟ್ಟದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.dk shivakumar led karnataka government 100 days celebration

Desi Cow Ghee: ದೇಶಿ ಗೋವಿನ ತುಪ್ಪಕ್ಕೆ ವಿಶೇಷ ಮಹತ್ವ

ಈಚಲ ಮರದಲ್ಲಿ ಮಾವಿನ ಹಣ್ಣು ಬಿಡುವುದಿಲ್ಲ. ಮಾವಿನ ಮರದಲ್ಲಿ ಬಿಟ್ಟ ಹಣ್ಣಿಗಷ್ಟೇ ಮಾವಿನ ಹಣ್ಣು ಎಂಬ ಹೆಸರಿದೆ. ಅದೇ ರೀತಿ ದೇಶಿ ಗೋವಿನ ಹಾಲಿನಿಂದ ತಯಾರಾದ ತುಪ್ಪಕ್ಕಷ್ಟೇ ಅದರ ವಿಶಿಷ್ಟ ಗುಣಗಳನ್ನು ಹೊಂದಿರುವ ನೈಜ ತುಪ್ಪ ಎಂದು ಹೇಳಬಹುದು ಎಂದು ಶ್ರೀಗಳು ಉದಾಹರಿಸಿದರು.

ಮೂಲದಲ್ಲಿ ಗೋವು ಇಲ್ಲದ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪಗಳು ನೈಜ ಉತ್ಪನ್ನಗಳಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ದೇಶಿ ಗೋವು ಹಾಗೂ ಮಿಶ್ರತಳಿ ಹಸುಗಳ ನಡುವೆ ಮೂಲಭೂತ ವ್ಯತ್ಯಾಸವಿದೆ ಎಂದರು.

ಹಸು ಮತ್ತು ಎಮ್ಮೆ ಹೇಗೆ ವಿಭಿನ್ನವೋ, ಅದೇ ರೀತಿ ದೇಶಿ ಗೋವು ಮತ್ತು ಮಿಶ್ರತಳಿ ಹಸುಗಳೂ ವಿಭಿನ್ನವಾಗಿವೆ. ಮಾನವನ ಹಸ್ತಕ್ಷೇಪದಿಂದ ಮಿಶ್ರತಳಿ ಹಸುಗಳ ಕೆಲವು ಮೂಲ ಗುಣಗಳಲ್ಲಿ ಬದಲಾವಣೆಗಳಾಗಿವೆ. ಹೀಗಾಗಿ ಅವುಗಳಿಂದ ದೊರೆಯುವ ಹಾಲು ಮತ್ತು ಅದರಿಂದ ತಯಾರಿಸುವ ಉತ್ಪನ್ನಗಳನ್ನು ದೇಶಿ ಗೋವಿನ ಹಾಲು ಹಾಗೂ ಉತ್ಪನ್ನಗಳೊಂದಿಗೆ ಒಂದೇ ರೀತಿಯಲ್ಲಿ ಹೋಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

‘ತುಪ್ಪಕ್ಕೆ ಅಪೂರ್ವ ಶಕ್ತಿ ಇದೆ’

ಅನ್ನವನ್ನಾಗಲಿ, ಸಾರನ್ನಾಗಲಿ ಎರಡನೇ ಬಾರಿ ಬಿಸಿ ಮಾಡಿದಾಗ ಅದರ ಮೂಲ ಸ್ವರೂಪದಲ್ಲಿ ಬದಲಾವಣೆ ಉಂಟಾಗಬಹುದು. ಆದರೆ ತುಪ್ಪದ ಸಾಮರ್ಥ್ಯ ವಿಭಿನ್ನವಾಗಿದ್ದು, ಅದನ್ನು ಅನೇಕ ಬಾರಿ ಬಿಸಿ ಮಾಡಿದರೂ ಸುಲಭವಾಗಿ ಕೆಡುವುದಿಲ್ಲ ಎಂದು ಶ್ರೀಗಳು ಹೇಳಿದರು.

ಸಾವಿರ ಬಾರಿ ಪಾಕ ಮಾಡಿದಾಗಲೂ ತುಪ್ಪ ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿರುತ್ತದೆ ಎಂಬುದನ್ನು ಪ್ರಸ್ತಾಪಿಸಿದ ಅವರು, ತುಪ್ಪವು ಅಗ್ನಿವರ್ಧಕವಾಗಿದ್ದರೂ ದೇಹಕ್ಕೆ ತಂಪಿನ ಅನುಭವವನ್ನು ನೀಡುವ ವಿಶೇಷ ಗುಣ ಹೊಂದಿದೆ ಎಂದು ವಿವರಿಸಿದರು.PES Shivamogga

ಒಂದೇ ಸಮಯದಲ್ಲಿ ವಿಭಿನ್ನ ರೀತಿಯ ಕಾರ್ಯಗಳನ್ನು ನಿರ್ವಹಿಸುವ ವಿಶೇಷ ಸಾಮರ್ಥ್ಯ ತುಪ್ಪಕ್ಕಿದೆ. ಸಮರ್ಪಕವಾಗಿ ತಯಾರಿಸಲ್ಪಟ್ಟ ನೈಜ ತುಪ್ಪ ಜಠರಾಗ್ನಿಯನ್ನು ಉದ್ದೀಪನಗೊಳಿಸುತ್ತದೆ ಎಂದು ಅವರು ಹೇಳಿದರು.

ಸಂಸ್ಕಾರವಿಲ್ಲದ ತುಪ್ಪದ ಬಗ್ಗೆ ಎಚ್ಚರಿಕೆ

ದೇಶಿ ಗೋವಿನ ಹಾಲಿನಿಂದ ಸಾಂಪ್ರದಾಯಿಕ ಹಾಗೂ ಸಮರ್ಪಕ ಸಂಸ್ಕಾರದ ಮೂಲಕ ತಯಾರಿಸುವ ತುಪ್ಪ ಮತ್ತು ಮಿಶ್ರತಳಿ ಹಸುವಿನ ಹಾಲಿನಿಂದ ದೊರೆಯುವ ತುಪ್ಪದ ಗುಣಗಳಲ್ಲಿ ವ್ಯತ್ಯಾಸವಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಸಮರ್ಪಕ ಸಂಸ್ಕಾರವಿಲ್ಲದೆ ನೇರವಾಗಿ ಹಾಲಿನ ಕೆನೆಯಿಂದ ತಯಾರಿಸುವ ತುಪ್ಪದ ಗುಣವೂ ಸಾಂಪ್ರದಾಯಿಕವಾಗಿ ತಯಾರಿಸಿದ ನೈಜ ತುಪ್ಪಕ್ಕಿಂತ ಭಿನ್ನವಾಗಿರುತ್ತದೆ. ನೈಜ ತುಪ್ಪದಿಂದ ದೊರೆಯುವ ಪ್ರಯೋಜನ ಮತ್ತು ಕೇವಲ ತುಪ್ಪದ ಹೆಸರಿನಲ್ಲಿ ದೊರೆಯುವ ದ್ರವದ ಪರಿಣಾಮ ಒಂದೇ ಆಗಿರುವುದಿಲ್ಲ ಎಂದು ಅವರು ಎಚ್ಚರಿಸಿದರು.

Also Read>> ಕಸ್ತೂರಿರಂಗನ್ ವರದಿ ಗೊಂದಲಕ್ಕೆ ತೆರೆ ಎಳೆಯಿರಿ: ‘ಬಫರ್ ಝೋನ್’ ಸ್ಪಷ್ಟಪಡಿಸಿ : MLC ಅರುಣ್

‘ಗೋಮಾಳಗಳನ್ನೇ ಮನುಷ್ಯ ನುಂಗಿಹಾಕಿದ್ದಾನೆ’

ಹಿಂದೆ ಗೋವುಗಳು ಸ್ವತಂತ್ರವಾಗಿ ಸಂಚರಿಸಿ ಅಗತ್ಯವಾದ ಹುಲ್ಲನ್ನು ಮೇಯಲು ಸಾಕಷ್ಟು ಗೋಮಾಳಗಳು ಇದ್ದವು. ಗೋವುಗಳು ಗೋಮಾಳಗಳಲ್ಲಿ ಹುಲ್ಲನ್ನು ಮೇಯುತ್ತಿದ್ದವು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಮನುಷ್ಯನೇ ಗೋಮಾಳಗಳನ್ನು ನುಂಗಿಹಾಕಿದ್ದಾನೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವಿಷಾದಿಸಿದರು.

ಗೋವುಗಳು ಮತ್ತು ಅವುಗಳ ಆಧಾರಿತ ಜೀವನ ಪದ್ಧತಿಗೆ ಸಮಾಜದಲ್ಲಿ ಇದ್ದ ಮಹತ್ವವನ್ನು ಮರಳಿ ಅರಿತುಕೊಳ್ಳುವ ಅಗತ್ಯವಿದೆ. ಗೋಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಮಹತ್ವವನ್ನು ಸಮಾಜ ಅರಿಯಬೇಕು ಎಂಬ ಸಂದೇಶವನ್ನು ಅವರು ನೀಡಿದರು.Kalahamsa Infotech private limited

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಶಿಕಾರಿಪುರ, ಸೋನಿ ಕಂಪನಿಯ ಪ್ರಮುಖರಾದ ವಿಶ್ವಾವಸು ಮರಾಠೆ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು.

ಸುಬ್ರಹ್ಮಣ್ಯ ಹೆಗಡೆ ಹೊಸಪೇಟೆ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ರಮೇಶ್ ಕಟ್ಟ, ಶ್ರೀರಾಮ ಸೇರಿದಂತೆ ಪ್ರಮುಖರು ಹಾಗೂ ದಿನಪ್ರಧಾನರಾಗಿ ಲಕ್ಷ್ಮೀಶ್ ಎನ್. ಭಟ್ ದಂಪತಿ ಉಪಸ್ಥಿತರಿದ್ದರು.

ಗುಡಿಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ

ಶ್ರೀಮಠದ ಗುರುಪರಂಪರೆಯನ್ನು ಪಾರಂಪರಿಕವಾಗಿ ಆಶ್ರಯಿಸಿಕೊಂಡು ಬಂದಿರುವ ಗುಡಿಗಾರ ಸಮಾಜದ ವತಿಯಿಂದ ಸ್ವರ್ಣಪಾದುಕಾ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ನಂದಕುಮಾರ್ ಗುಡಿಗಾರ್, ವಿ.ಜಿ. ಶೇಟ್ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದು, ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Christ King

Kalpa News Advertising Disclaimer

Tags: Desi Cow gheeGokarnaಅನ್ನಬ್ರಹ್ಮ ಚಾತುರ್ಮಾಸ್ಯಗೋಕರ್ಣದೇಶಿ ಗೋವಿನ ತುಪ್ಪಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿ
Share205Tweet128Send
Aniruddha Vasishta S R

Aniruddha Vasishta S R

Editor-in-Chief

Previous Post

ಕಸ್ತೂರಿರಂಗನ್ ವರದಿ ಗೊಂದಲಕ್ಕೆ ತೆರೆ ಎಳೆಯಿರಿ: ‘ಬಫರ್ ಝೋನ್’ ಸ್ಪಷ್ಟಪಡಿಸಿ : MLC ಅರುಣ್

Next Post

ಹುಬ್ಬಳ್ಳಿ–ಚಿಕ್ಕಮಗಳೂರು, ಅರಸೀಕೆರೆ, ಚಿತ್ರದುರ್ಗ ಸೇರಿ ಹಲವು ರೈಲು ರದ್ದು | ಇಲ್ಲಿದೆ ಡೀಟೇಲ್ಸ್

kalpa News

kalpa News

Next Post
SWR Many Trains Cancelled Hubli Arsikere Chikkamagaluru

ಹುಬ್ಬಳ್ಳಿ–ಚಿಕ್ಕಮಗಳೂರು, ಅರಸೀಕೆರೆ, ಚಿತ್ರದುರ್ಗ ಸೇರಿ ಹಲವು ರೈಲು ರದ್ದು | ಇಲ್ಲಿದೆ ಡೀಟೇಲ್ಸ್

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL