No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Tuesday, October 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

ಕಸ್ತೂರಿರಂಗನ್ ವರದಿ ಗೊಂದಲಕ್ಕೆ ತೆರೆ ಎಳೆಯಿರಿ: ‘ಬಫರ್ ಝೋನ್’ ಸ್ಪಷ್ಟಪಡಿಸಿ : MLC ಅರುಣ್

kalpa News by kalpa News
September 22, 2026
in News, ಶಿವಮೊಗ್ಗ
0
Kasturirangan report buffer zone ds arun on house
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ |

ಪಶ್ಚಿಮಘಟ್ಟದ (Western Ghat) ಪರಿಸರ ಸೂಕ್ಷ್ಮ ಪ್ರದೇಶ (ESA) ಕುರಿತಂತೆ ಕಸ್ತೂರಿರಂಗನ್ ವರದಿ (Kasturirangan Report) ಕರಡು ಅಧಿಸೂಚನೆಯಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿ, ಮಲೆನಾಡಿನ (Malnad News) ರೈತರು ಹಾಗೂ ಗ್ರಾಮೀಣ ಜನರ ಹಿತರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ (D.S. Arun) ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯ ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಹಾಗೂ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ಕರಡು ಅಧಿಸೂಚನೆಯಲ್ಲಿರುವ ವಿವಿಧ ಲೋಪದೋಷಗಳು ಹಾಗೂ ಮಲೆನಾಡಿನ ಜನರು ಎದುರಿಸಬಹುದಾದ ಸಮಸ್ಯೆಗಳ ಕುರಿತು ಅಂಕಿ-ಅಂಶಗಳ ಸಹಿತ ಸರ್ಕಾರದ ಗಮನ ಸೆಳೆದರು.

20,668 ಚ.ಕಿ.ಮೀ ವ್ಯಾಪ್ತಿಯ ಜನರ ಹಿತರಕ್ಷಣೆ

ಕಸ್ತೂರಿರಂಗನ್ ವರದಿಯಡಿ ಮಲೆನಾಡಿನ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸುವ ಪ್ರಸ್ತಾವನೆ ಇದೆ. ಈ ವ್ಯಾಪ್ತಿಯಲ್ಲಿ ಸುಮಾರು 1,576 ಹಳ್ಳಿಗಳು ಒಳಗೊಂಡಿದ್ದು, ಲಕ್ಷಾಂತರ ಕೃಷಿಕರು, ಸಾಗುವಳಿದಾರರು ಹಾಗೂ ಗ್ರಾಮೀಣ ಜನರು ವಾಸಿಸುತ್ತಿದ್ದಾರೆ ಎಂದು ಡಿ.ಎಸ್. ಅರುಣ್ ಹೇಳಿದರು.

ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕೃಷಿ ಮತ್ತು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರ ಹಕ್ಕುಪತ್ರ, ಭೂಮಿಯ ಹಕ್ಕು ಹಾಗೂ ಮೂಲಭೂತ ಹಕ್ಕುಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

dk shivakumar led karnataka government 100 days celebration

Kasturirangan Report : ‘ಬಫರ್ ಝೋನ್’ ಗೊಂದಲ ನಿವಾರಣೆಗೆ ಒತ್ತಾಯ

ಪರಿಸರ ಸೂಕ್ಷ್ಮ ಪ್ರದೇಶದ ಸುತ್ತಮುತ್ತಲಿನ ‘ಬಫರ್ ಝೋನ್’ ಕುರಿತು ಮಲೆನಾಡಿನ ಜನರಲ್ಲಿ ಉಂಟಾಗಿರುವ ಗೊಂದಲವನ್ನು ಸರ್ಕಾರ ಸ್ಪಷ್ಟವಾಗಿ ನಿವಾರಿಸಬೇಕು ಎಂದು ಡಿ.ಎಸ್. ಅರುಣ್ ಒತ್ತಾಯಿಸಿದರು.

ESA ವ್ಯಾಪ್ತಿಯ ಗಡಿ, ಬಫರ್ ಝೋನ್‌ನ ಸ್ವರೂಪ, ಅದರ ವ್ಯಾಪ್ತಿಗೆ ಒಳಪಡುವ ಗ್ರಾಮಗಳು ಹಾಗೂ ಕೃಷಿ ಪ್ರದೇಶಗಳ ಕುರಿತು ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ನೆಲಮಟ್ಟದ ವಾಸ್ತವಾಂಶಗಳನ್ನು ಪರಿಗಣಿಸಿ, ಸ್ಥಳೀಯ ಜನರ ಆತಂಕಗಳಿಗೆ ಪರಿಹಾರ ಒದಗಿಸಬೇಕು ಎಂದು ಅವರು ಹೇಳಿದರು.

ಪ್ರಮುಖ ತಾಂತ್ರಿಕ ಹಾಗೂ ವಾಸ್ತವಿಕ ಬೇಡಿಕೆಗಳು

1 ಎಕರೆ ನಿಯಂತ್ರಿತ ಬಫರ್ ಝೋನ್ (Buffer Zone)
ಪ್ರಸ್ತುತ ಕರಡಿನಲ್ಲಿ ‘ಬಫರ್ ಝೋನ್’ ಬಗ್ಗೆ ಯಾವುದೇ ನಿಖರತೆ ಇಲ್ಲದಿರುವುದರಿಂದ ಕೃಷಿ ಭೂಮಿ ಅನಗತ್ಯವಾಗಿ ಅರಣ್ಯ ನಿಯಂತ್ರಣಕ್ಕೆ ಸಿಲುಕುತ್ತಿದೆ. ಪರಿಸರ ಸೂಕ್ಷ್ಮ ಪ್ರದೇಶ (ESA) ಮತ್ತು ಖಾಸಗಿ ಕೃಷಿ ಭೂಮಿಯ ನಡುವೆ “1 ಎಕರೆ ನಿಯಂತ್ರಿತ ಬಫರ್ ಝೋನ್” ಎಂಬ ನಿರ್ದಿಷ್ಟ ತಾಂತ್ರಿಕ ಚೌಕಟ್ಟನ್ನು (Technical Framework) ತಕ್ಷಣವೇ ನಿಗದಿಪಡಿಸಬೇಕು.

ಜಿಐಎಸ್ ಹಾಗೂ ಜಂಟಿ ಸರ್ವೆ (GIS Layering & Joint Survey)
ಉಪಗ್ರಹ ತಂತ್ರಜ್ಞಾನ (GIS Layering / ಉಪಗ್ರಹ ಮ್ಯಾಪಿಂಗ್), ಡ್ರೋನ್ ಸರ್ವೆ ಹಾಗೂ ಕಂದಾಯ-ಅರಣ್ಯ ಇಲಾಖೆಗಳ ಜಂಟಿ ಕ್ಷೇತ್ರ ಪರಿಶೀಲನೆಯ ಮೂಲಕ ಅರಣ್ಯ, ಕಂದಾಯ ಮತ್ತು ಜನವಸತಿ ವಲಯಗಳ ನಡುವೆ ಸ್ಪಷ್ಟ ಭೌಗೋಳಿಕ ಗಡಿರೇಖೆಯನ್ನು (Delineation) ಅಂತಿಮಗೊಳಿಸಬೇಕು. ಪ್ರಸ್ತುತ ಇರುವ ಸ್ಥಿತಿಯನ್ನು ಆಧರಿಸಿ ‘ಫ್ರೀಜ್’ (Freeze) ಮಾಡಿ ಜನಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.PES Shivamogga

ಕೇರಳ ಮಾದರಿಯ ಭೌತಿಕ ಸರ್ವೆ (Physical Survey)
ಕೇರಳ ಸರ್ಕಾರವು ತನ್ನ ರಾಜ್ಯದಲ್ಲಿ ಸುಮಾರು 13,000 ಚ.ಕಿ.ಮೀ ವ್ಯಾಪ್ತಿಯಲ್ಲಿ ಜನವಸತಿ ಮತ್ತು ಕೃಷಿ ಭೂಮಿಯನ್ನು ಪ್ರತ್ಯೇಕಿಸಲು ನಡೆಸಿದ ಪ್ರತ್ಯಕ್ಷ ಭೌತಿಕ ಸರ್ವೆಯ ಮಾದರಿಯನ್ನು ಕರ್ನಾಟಕದಲ್ಲೂ ಅಧ್ಯಯನ ಮಾಡಿ ಜಾರಿಗೆ ತರಬೇಕು.

ಕನ್ನಡ ಅನುವಾದ ಹಾಗೂ ವಿಶೇಷ ಗ್ರಾಮಸಭೆ ಕಡ್ಡಾಯ
ಇಂಗ್ಲಿಷ್‌ನಲ್ಲಿರುವ ಈ ಕರಡು ಅಧಿಸೂಚನೆಯು ಸಾಮಾನ್ಯ ರೈತರಿಗೆ ಅರ್ಥವಾಗುತ್ತಿಲ್ಲ. ಆದ್ದರಿಂದ ತಕ್ಷಣವೇ ಇದನ್ನು ಸಂಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಿ, ಬಾಧಿತವಾಗುವ ಶಿವಮೊಗ್ಗದ 484 ಗ್ರಾಮಗಳು ಸೇರಿದಂತೆ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ‘ವಿಶೇಷ ಗ್ರಾಮಸಭೆ’ ಕರೆದು ಸಾರ್ವಜನಿಕರ ಹಾಗೂ ರೈತರ ಅಭಿಪ್ರಾಯ ಕ್ರೋಡೀಕರಿಸಬೇಕು.

ಮಲೆನಾಡಿನ ವಾಸ್ತವ ಪರಿಸ್ಥಿತಿ, ಮೂಲಭೂತ ಸಮಸ್ಯೆಗಳು ಹಾಗೂ ಆತಂಕಗಳು

ಬೃಹತ್ ಭೂಭಾಗಕ್ಕೆ ಕುತ್ತು (20,668 sq km ಮತ್ತು 1,576 ಹಳ್ಳಿಗಳು)
ಕಸ್ತೂರಿರಂಗನ್ ವರದಿಯನ್ವಯ ಕರ್ನಾಟಕದ 20,668 ಚ.ಕಿ.ಮೀ ಬೃಹತ್ ಪ್ರದೇಶ ಮತ್ತು 1,576ಕ್ಕೂ ಹೆಚ್ಚು ಗ್ರಾಮಗಳು ಪರಿಸರ ಸೂಕ್ಷ್ಮ ವಲಯಕ್ಕೆ ಸೇರುತ್ತಿವೆ. ಇದರಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಅತಿ ಹೆಚ್ಚು ಭಾಗಗಳು ಸೇರಿವೆ.

ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಅತಿ ಹೆಚ್ಚಿನ ಧಕ್ಕೆ
ಉತ್ತರ ಕನ್ನಡದ ನಂತರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ಭಾಗದ 484 ಗ್ರಾಮಗಳು ಹಾಗೂ ಕೃಷಿ ಭೂಮಿ ಈ ಕರಡು ವರದಿಯ ವ್ಯಾಪ್ತಿಗೆ ಬರುತ್ತವೆ. ಅರಣ್ಯ ವಿಭಾಗದ ವಿವಿಧ ವರ್ಗೀಕರಣಗಳಾದ ಮೀಸಲು ಅರಣ್ಯ, ಡೀಮ್ಡ್ ಅರಣ್ಯ, ವನ್ಯಜೀವಿ ವಲಯ ಹಾಗೂ ಮಂಗಗಳ ಕಾಟ ಮತ್ತು ಬೆಳೆ ನಷ್ಟದಿಂದ ರೈತರು ಈಗಾಗಲೇ ತೀವ್ರ ಸಂಕಷ್ಟದಲ್ಲಿದ್ದು, ಈ ಕರಡಿನಿಂದಾಗಿ ಅವರ ಬದುಕು ಸಂಪೂರ್ಣ ಅಸ್ತವ್ಯಸ್ತಗೊಳ್ಳುವ ಭೀತಿ ಎದುರಾಗಿದೆ.Kalahamsa Infotech private limited

ಮುಳುಗಡೆ ಸಂತ್ರಸ್ತರ ದಶಕಗಳ ಆತಂಕ ಹಾಗೂ ಸಾಗುವಳಿ ಚೀಟಿ/ಹಕ್ಕುಪತ್ರ
ಲಿಂಗನಮಕ್ಕಿ ಸೇರಿದಂತೆ ವಿವಿಧ ಜಲಾಶಯಗಳ ನಿರ್ಮಾಣದಿಂದ ಸಂತ್ರಸ್ತರಾದ ಸಾವಿರಾರು ಕುಟುಂಬಗಳಿಗೆ ದಶಕಗಳು ಕಳೆದರೂ ಇನ್ನೂ ಹಕ್ಕುಪತ್ರ (RTC) ಹಾಗೂ ಸಾಗುವಳಿ ಚೀಟಿ ಸಿಗದೆ ಅನಿಶ್ಚಿತತೆಯಲ್ಲಿ ದಿನ ದೂಡುತ್ತಿದ್ದಾರೆ. ವರದಿಯ ಆತಂಕದಿಂದಾಗಿ ರಸ್ತೆ, ಡಾಂಬರೀಕರಣ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಹಾಗೂ ಸಾಗುವಳಿ ಚೀಟಿ ಹೊಂದಿರುವ ರೈತರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಸರ್ಕಾರ ತಕ್ಷಣವೇ ಈ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಹಾಗೂ ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ಪುನರಾರಂಭಿಸಬೇಕು.

ಸೊಪ್ಪಿನ ಬೆಟ್ಟ ಮತ್ತು ರೈತರ ಜೀವನೋಪಾಯ
ಮಲೆನಾಡಿನ ಅಡಿಕೆ ಹಾಗೂ ತೋಟಗಾರಿಕೆ ಕೃಷಿಗೆ ಪ್ರಮುಖ ಆಧಾರವಾಗಿರುವ ‘ಸೊಪ್ಪಿನ ಬೆಟ್ಟ’ ವ್ಯವಸ್ಥೆಯನ್ನೇ ನಂಬಿಕೊಂಡಿರುವ ಸುಮಾರು 10,000 ಕುಟುಂಬಗಳ ಹಿತಾಸಕ್ತಿಯನ್ನು ಸರ್ಕಾರ ಕಡ್ಡಾಯವಾಗಿ ಕಾಯಬೇಕು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ವೈಜ್ಞಾನಿಕ ಪರಿಶೀಲನೆ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಸ್ಥಳೀಯವಾಗಿ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದ್ದು, ವಿಸ್ತೃತ ಯೋಜನಾ ವರದಿ (DPR) ಇಲ್ಲದೆಯೇ ಅಪಾರ ಪ್ರಮಾಣದ ಹಣ ವೆಚ್ಚವಾಗಿರುವ ಬಗ್ಗೆಯೂ ಸರ್ಕಾರ ಗಮನಹರಿಸಬೇಕು.

Also Read>> ಎರಡು ಬೈಕ್’ಗಳ ಭಾರೀ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಉಳ್ಳೂರಿನ ವ್ಯಕ್ತಿ ದಾರುಣ ಸಾವು

ತಾಪಮಾನ ಏರಿಕೆ ಹಾಗೂ ಪರಿಸರ-ಜನಜೀವನದ ಸಮತೋಲನ
ಇತ್ತೀಚೆಗೆ ಮಲೆನಾಡಿನಲ್ಲೂ ತಾಪಮಾನ 38°C ದಾಟುತ್ತಿದ್ದು, ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯನ್ನು ಕಾಪಾಡುವುದು ಅಗತ್ಯ. ಆದರೆ ಪರಿಸರ ರಕ್ಷಣೆಯ ನೆಪದಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ಜನರ ದಿನನಿತ್ಯದ ಜೀವನವನ್ನು ದುಸ್ಥಿತಿಗೆ ತಳ್ಳಬಾರದು.

ಸರ್ವಪಕ್ಷ ನಿಯೋಗದಿಂದ ‘ಲೈವ್’ ಗ್ರೌಂಡ್ ರಿಪೋರ್ಟ್ (Live Visit)
ಪ್ರಸ್ತಾವಿತ ಪ್ರದೇಶಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ಸರ್ವಪಕ್ಷ ನಿಯೋಗವು ಸ್ವತಃ ಪ್ರತ್ಯಕ್ಷವಾಗಿ (Live Visit) ಭೇಟಿ ನೀಡಿ, ವಾಸ್ತವ ಭೌಗೋಳಿಕ ಪರಿಸ್ಥಿತಿಯನ್ನು ಪರಿಶೀಲಿಸಬೇಕು.Christ King

2013ರ ಮೂಲ ಕರಡು ಅಧಿಸೂಚನೆ ಸಂಪೂರ್ಣ ತಿರಸ್ಕಾರ:

2013ರಿಂದ ಇಲ್ಲಿಯವರೆಗೆ 7 ಬಾರಿ ಕರಡು ಅಧಿಸೂಚನೆ ಬಂದಿದ್ದು, ಈ ಹಿಂದೆ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಗಳು ಪಕ್ಷಾತೀತವಾಗಿ ಇದನ್ನು ತಿರಸ್ಕರಿಸಿದ್ದವು. ಮಲೆನಾಡಿನ ನೆಲದ ವಾಸ್ತವಕ್ಕೆ ತದ್ವಿರುದ್ಧವಾಗಿರುವ ಈ ಮೂಲ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರವು ಸಂಪೂರ್ಣವಾಗಿ ತಿರಸ್ಕರಿಸಬೇಕು.

ಸಂಸದರಾದ ಬಿ.ವೈ. ರಾಘವೇಂದ್ರ ಅವರ ಶ್ರಮ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಲೆನಾಡಿನ ರೈತರ ಹಾಗೂ ಸಾಗುವಳಿದಾರರ ಪರವಾಗಿ ಸೂಕ್ತ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಡಿ.ಎಸ್. ಅರುಣ್ ತಿಳಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      Kalpa News Advertising Disclaimer

Tags: BJPKasturirangan reportShivamoggaWestern Ghatಶಿವಮೊಗ್ಗ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಎರಡು ಬೈಕ್’ಗಳ ಭಾರೀ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಉಳ್ಳೂರಿನ ವ್ಯಕ್ತಿ ದಾರುಣ ಸಾವು

Next Post

ದೇಶಿ ಗೋವಿನ ತುಪ್ಪಕ್ಕೇ ವಿಶೇಷ ಗುಣ | ಮಿಶ್ರತಳಿ ಹಾಲಿನ ಉತ್ಪನ್ನಗಳ ಬಗ್ಗೆ ರಾಘವೇಶ್ವರ ಶ್ರೀಗಳ ಮಾತು

kalpa News

kalpa News

Next Post
desi cow ghee special qualities raghaveshwara shree

ದೇಶಿ ಗೋವಿನ ತುಪ್ಪಕ್ಕೇ ವಿಶೇಷ ಗುಣ | ಮಿಶ್ರತಳಿ ಹಾಲಿನ ಉತ್ಪನ್ನಗಳ ಬಗ್ಗೆ ರಾಘವೇಶ್ವರ ಶ್ರೀಗಳ ಮಾತು

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL