ಕಲ್ಪ ಮೀಡಿಯಾ ಹೌಸ್ | ಢಾಕಾ |
ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಉದ್ವಿಗ್ನತೆ ನಡುವೆಯೇ ಸುರಕ್ಷತೆಯ ದೃಷ್ಠಿಯಿಂದ ಅಲ್ಲಿನ ಪ್ರಧಾನಿ ಶೇಕ್ ಹಸೀನಾ #PM Sheik Hasina ಅವರು ನವದೆಹಲಿಗೆ ಆಗಮಿಸಿದ್ದು, ಇಂದು ರಾತ್ರಿ ಲಂಡನ್’ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವರದಿಯಾಗಿದೆ.
ಹಸೀನಾ ಆಡಳಿತದ ಮೇಲೆ ಹೆಚ್ಚುತ್ತಿರುವ ಅಶಾಂತಿ ಮತ್ತು ಒತ್ತಡದ ಮಧ್ಯೆ ಈ ನಿರ್ಧಾರ ಕೈಗೊಂಡಿದ್ದು, ಅಲ್ಲಿನ ಅರಮನೆ ಹಾಗೂ ದೇಶ ತೊರೆದಿದ್ದಾರೆ.
Also read: ಆಹಾರ ಮತ್ತು ನೀರಿನ ಸುಸ್ಥಿರ ಭದ್ರತೆಯ ಥೀಮ್’ನಲ್ಲಿ 14 ನೇ ನ್ಯಾನೋ ಸಮಿಟ್: ಸಚಿವ ಭೋಸರಾಜು
ಲಕ್ಷಾಂತರ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಂತೆ ಬೇರೆ ಸರ್ಕಾರ ರಚನೆಯಾಗದಂತೆ ತಡೆಯುವಂತೆ ಭದ್ರತಾ ಪಡೆಗಳನ್ನು ಹಸೀನಾ ಅವರ ಸಜೀಬ್ ವಾಝೆದ್ ಜಾಯ್ ಒತ್ತಾಯಿಸಿದ್ದರು.
ಈ ಕುರಿತಂತೆ ಯುಎಸ್ ಮೂಲದ ಜಾಯ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಜನರನ್ನು ಸುರಕ್ಷಿತವಾಗಿರಿಸುವುದು, ನಮ್ಮ ದೇಶವನ್ನು ಸುರಕ್ಷಿತವಾಗಿರಿಸುವುದು ಮತ್ತು ಸಂವಿಧಾನವನ್ನು ಎತ್ತಿಹಿಡಿಯುವುದು ನಿಮ್ಮ ಕರ್ತವ್ಯ ಎಂದಿದ್ದಾರೆ.
ಇನ್ನು, ಹಸೀನಾ ಅವರು ಬಾಂಗ್ಲಾ ತೊರೆದ ಬೆನ್ನಲ್ಲೇ ಅಲ್ಲಿನ ಸೇನೆ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು, ಪ್ರಧಾನಿ ಕಚೇರಿಯಿಂದ ಹಸೀನಾ ಅವರ ಫೋಟೋಗಳನ್ನು ಸಹ ತೆಗೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post