ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
1. ಗಾಯತ್ರಿ ಛಂದಸ್ಸು
24 ಅಕ್ಷರ, ಸ್ಥಾಯಿ ಶೃತಿ-ಶಡ್ಜ, ಅಭಿಮಾನಿ ದೇವತೆ-ಸ್ವಾಹಾದೇವಿ;
2.ಉಷ್ಣಿಕ್ ಛಂದಸ್ಸು-
28 ಅಕ್ಷರ, ಋಷಭ ಸ್ಥಾಯಿ, ಅಭಿಮಾನಿ ದೇವತೆ- ಸಂಜ್ಞಾ
3.ಅನುಷ್ಟುಪ್ ಛಂದಸ್ಸು-
32 ಅಕ್ಷರ, ಸ್ಥಾಯಿ-ಗಾಂಧಾರ, ಅಭಿಮಾನಿ- ರೋಹಿಣಿ
4.ಬೃಹತೀ ಛಂದಸ್ಸು- 36 ಅಕ್ಷರ, ಮದ್ಯಮ ಸ್ಥಾಯಿ, ಅಭಿಮಾನಿ ತಾರಾ.;
5.ಪಂಕ್ತೀ ಛಂದಸ್ಸು-
40 ಅಕ್ಷರ, ಪಂಚಮ ಸ್ಥಾಯಿ, ಅಭಿಮಾನಿ-ಮಿತ್ರಾವರುಣ ಪತ್ನಿಯರು;
6.ತ್ರಿಷ್ಟುಪ್ ಛಂದಸ್ಸು-
44 ಅಕ್ಷರ, ದೈವತಾ ಸ್ಥಾಯಿ, ಅಭಿಮಾನಿ ದೇವತೆ-ಶಚೀದೇವಿ
7.ಜಗತೀ ಛಂದಸ್ಸು-
48 ಅಕ್ಷರ, ನಿಷಾದ ಸ್ಥಾಯಿ, ಅಭಿಮಾನಿ ದೇವತೆ-ಸರ್ವ ದೇವತಾ ಪತ್ನಿಯರು.
ಈ ಎಲ್ಲಾ ಛಂದಸ್ಸುಗಳಿಗೆ ಅಭಿಮಾನಿಗಳು ಸ್ತ್ರೀ ದೇವತೆಗಳಿರುವುದು ವಿಶೇಷ. ಅಂದರೆ ಸ್ವರ, ನಾದಗಳು ಸ್ತ್ರೀ ಲಿಂಗ. ನಾದವು ನಾಡಿಗಳ ಜಾಗೃತಿಗೆ ಇರುವಂತದ್ದು. ನಾಡಿ ಜಾಗೃತವಾಗುವುದು ಕಂಪನದಿಂದ ಮಾತ್ರ. ಅಂದರೆ ನಾಡಿ ಸ್ಪುರಣಗೊಂಡರೆ ನಾಡಿಗಳು ಜಾಗೃತವಾಗುತ್ತದೆ. ಮನುಷ್ಯನ ದೇಹದಲ್ಲಿ 72 ಸಾವಿರ ನಾಡಿಗಳು ಮತ್ತು ಅದರ ಉಪನಾಡಿಗಳು 36 ಲಕ್ಷವಿದೆ. ಇದರ ಜಾಗೃತಿ ಆದಾಗ ಮನುಷ್ಯನಿಗೆ ಜ್ಞಾನೋದಯ ಆಗುತ್ತದೆ. ಜ್ಞಾನೋದಯವಾಗುತ್ತಿದ್ದಂತೆ ಮನುಷ್ಯ ಪ್ರಕೃತಿಗೆ ಹೊಂದಿಕೊಂಡು ಬದುಕಲಾರಂಭಿಸುತ್ತಾನೆ. ಆಗ ಅವನಿಗೆ ಮನುಷ್ಯತ್ವ ಬರುತ್ತದೆ. ನಂತರ ಮಹಾಮಾನವನಾಗಿ ದೈವತ್ವ ಪಡೆಯುತ್ತಾನೆ.
ಯಾವಾಗ ನಾಡಿಗಳು ಜಾಗೃತಾವಸ್ಥೆಗೆ ಹೋಗುವುದಿಲ್ಲವೋ ಆಗ ಮನುಷ್ಯನಿಗೆ ರೋಗಾಧಿ ಭಯ ಉಂಟಾಗಿ ರೋಗ ಪ್ರವೇಶ ಮಾಡುತ್ತದೆ. ಅಲ್ಲಿಗೆ ಅವನ ಚಿಂತನೆಗಳೂ ಬಿದ್ದು ಹೋಗಿ, ಮಾಡಬಾರದ್ದನ್ನು ಮಾಡಲು ಶುರು ಮಾಡುತ್ತಾನೆ. ನಾವು ನಿಜ ಜೀವನದಲ್ಲಿ ಕೆಲವರನ್ನು ನೋಡುತ್ತಿರುತ್ತೇವೆ. ತುಂಬಾ depress ಆದಾಗ ಅದರಿಂದ ಹೊರಬರಲು ಹೆಂಡ ಕುಡಿಯುತ್ತಾನೆ. ಅಮಲೇರಿದಂತೆ ದುಃಖ ಮರೆಯುತ್ತಾನೆ. ಅಮಲಿಳಿದಾಗ ಮತ್ತೆ ಮರುದಿನ ಇದೇ ಪರಿಹಾರ ಬೇಕಾಗುತ್ತದೆ. ಆಗ ಹೆಂಡದಂಗಡಿಗಳು ಕೈಬೀಸಿ ಕರೆಯುತ್ತವೆ. ಆ ಹೆಂಡದಂಗಡಿಗೆ ಸರಕಾರವೇ ಪರವಾನಗಿ ಕೊಡುತ್ತದೆ. ಯಾಕೆಂದರೆ ಆ ಸರಕಾರದಲ್ಲೂ ಇಂತದ್ದೇ ಮನೋಸ್ಥಿತಿ ಅನೇಕ ಸದಸ್ಯರಿರುತ್ತಾರೆ! ಈ ರೀತಿ ದುಃಖ ನಿವಾರಣೆಗೆ ಕಂಡುಕೊಂಡ ಮಾರ್ಗವು ಕ್ಷಣಿಕ ಸುಖದ ಮೂಲಕ ನರಕಕ್ಕೆ ಕೊಂಡೊಯ್ಯುತ್ತದೆ. ದುರ್ಬುದ್ಧಿಯು ಇವರ ಪರಮ ಮಿತ್ರರಾಗಿ ಕೊನೆಗೊಂದು ದಿನ ಹೆಂಡದ ಬದಲು ಔಷಧಿಗೆ ದಾಸನಾಗಿ ಜೀವನ ಕೊನೆಗೊಳ್ಳುತ್ತದೆ. ಆಗ ಈ ದುಃಖಿತ ಮೃತನಿಗೆ ಮೋಕ್ಷವು ದುರ್ಲಭವಾಗಿ, ನರಕವೇ ಪ್ರಾಪ್ತಿಯಾಗಿ, ಮುಂದೊಂದು ದಿನ ಮುಂದಿನ ಜನ್ಮವೂ ಇಂತಹ ದುಃಖಿತ ಸಂಸಾರದೊಳಗೇ ಆಗಿ ಬಿಡುತ್ತದೆ.
ಇಂತಹ ದುರಂತಗಳನ್ನು ಚಿಂತನೆ ಮಾಡಿದ ಋಷಿಮುನಿಗಳು ಇದಕ್ಕೊಂದೊಂದು ಪರಿಹಾರ ಕಂಡು ಹಿಡಿದರು.
ಸತ್ಯನಾರಾಯಣ ವೃತ ಕಥೆಯಲ್ಲೊಂದು ಕಡೆ-
ಏಕದಾ ನಾರದೋ ಯೋಗಿ
ಪರ್ಯಟಾನ್ ವಿವಿಧಾನ್ ಲೋಕಾನ್
ಮರ್ತ್ಯ ಲೋಕ ಮುಪಾಗತಃ
ಮರ್ತ್ಯ ಲೋಕೇ ಜನಾಃಸರ್ವೇ
ನಾನಾ ಕ್ಲೇಷ ಸಮುತ್ನಾನ್….ಎಂದು ಶಾಸ್ತ್ರ ಗ್ರಂಥಕಾರರು ಬರೆಯುತ್ತಾ ತಿಳಿಸಿದ್ದಾರೆ. ಇದನ್ನು ಕಂಡ ನಾರದರು ಶೌನಕಾದಿ ಮುನಿಗಳ ಗೋಷ್ಠಿಯನ್ನು ಕರೆದು ಇಂತಹ ದುಃಸ್ಥಿತಿಯ ನಿವಾರಣೋಪಾಯದ ಬಗ್ಗೆ ಚರ್ಚಾಕೂಟ ಏರ್ಪಡಿಸುತ್ತಾರೆ. ಅಲ್ಲಿಯ ಕರಡು ನಿರ್ಧಾರವನ್ನು ಸ್ವಯಂ ಭಗವಂತನಿಗೆ ಸಮರ್ಪಿಸಿ ಅನುಮೋದನೆ ಪಡೆಯುತ್ತಾರೆ.
ಇದರಲ್ಲಿ ಬಹು ಪ್ರಾಮುಖ್ಯವಾದದ್ದೇ ನಾದ. ಜಗದ ಆದಿಯಲ್ಲಿ ಮೊದಲು ಉತ್ಪತ್ತಿಯಾದದ್ದೇ ನಾದ. ಅದುವೇ ಓಂಕಾರ ನಾದ. ನಂತರ ಅದರೊಳಗೆ ಇರುವ ಶ್ರುತಿಲಯಗಳೇ ಸಪ್ತ ಸ್ವರ. ಈ ಸಪ್ತಸ್ವರಗಳ ಮೂಲಕ ನಾಡಿಗಳ ಜಾಗೃತಿ. ಮತ್ತೆ ಈ ಸಪ್ತಸ್ವರಗಳನ್ನಾಧರಿಸಿ, ಸ್ವರ ಸಂಯೋಜನೆಯಲ್ಲಿ ಛಂದಸ್ಸು, ತಾಳ, ಸ್ಥಾಯಿ, ಲಯಗಳ ಸಂಶೋಧನೆ ನಡೆಯುತ್ತದೆ. ಈ ಸ್ವರಗಳ ಛಂಧಸ್ಸಿನ ರೂಪವೇ ವೇದಗಳು. ಇಲ್ಲಿ ಯಾವುದೋ ಕಪೋಲಕಲ್ಪಿತ ಗೀತೆಗಳಿಲ್ಲ. ಇಲ್ಲಿ ಪ್ರಕೃತಿಯ ಒಂದೊಂದು ಸ್ವರೂಪ ವರ್ಣನೆಯನ್ನು ಮಾಡಿದೆ. ಇದರಿಂದ ಪ್ರಕೃತಿಯ ಮಹತ್ವ, ಪ್ರೀತಿಗಳು ಒಂದೆಡೆ ಲಭಿಸಿದರೆ, ಛಂಧಸ್ಸುಗಳಿಂದ ಮಾನಸಿಕ ನೆಮ್ಮದಿ ಲಭಿಸಿ ನಾಡಿ ಜಾಗೃತಗೊಳ್ಳುತ್ತದೆ.
ಧ್ಯಾನ ಶ್ಲೋಕಗಳೂ, ಪುರಾಣ ಕಥೆಗಳೂ, ಸಂಗೀತ ಹಾಡುಗಳೂ ಈ ಛಂದಸ್ಸಿನ ಆಧಾರದಲ್ಲೇ ಹುಟ್ಟಿಕೊಂಡವು. ಎಲ್ಲವೂ ಪೂಜ್ಯತ್ವ ಪಡೆದವು. ನವ್ಯ ಗೀತೆಗಳೂ ಇದರ ಆಧಾರದಲ್ಲೇ ಸೃಷ್ಟಿಯಾಯಿತು.
ಗೋವಿನ ಗೀತೆಯನ್ನೇ ನೋಡಿ-
ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷಕೆ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೇ ಇದರಲ್ಲಿ ಒಂದು ಮೂಕ ಪ್ರಾಣಿಯ ಪ್ರಾಮಾಣಿಕತೆಯೂ, ದುಷ್ಟ ಪ್ರಾಣಿಯ ಮನಃ ಪರಿವರ್ತನೆಯೂ ಅಡಗಿದೆ. ಛಂದೋಬದ್ಧವಾದ ಈ ಗೀತೆ ಹಾಡಿದರೆ, ಕೇಳುದರೆ ಮನಸ್ಸು ಪ್ರಪುಲ್ಲತೆಯನ್ನು ಹೊಂದಿ ನಾಡಿಗಳು ಸ್ಪುರಣವಾಗಿ ಜಾಗೃತವಾಗುತ್ತದೆ. ಅದೇ ರೀತಿ ಪ್ರಕೃತಿ ಭೂಮಾತೆಯನ್ನು ವರ್ಣಿಸಿದ ರೀತಿ ನೋಡಿ-ಹಿರಣ್ಯವರ್ಣಾಂ ಹರಿಣೀಂ
ಸುವರ್ಣರಜಸಾಂ ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀ ಜಾತವೇದೋ ಮಾ ಆ ವಹ॥ ಇದರ ಋಷಿ ಛಂದಸ್ಸು-
ಆನಂದಕರ್ದಮಶ್ರೀಚಕ್ಲೀತೇಂದಿರಾಸುತಾ ಋಷಯಃ
ಆದ್ಯಾಸ್ತಿಸ್ರೋಠನುಷ್ಟಪ್ ಛಂದಃ
ಪಂಚಮೀಷಷ್ಠೌ ತ್ರುಷ್ಟುಬೌ
ತತೋಷ್ಟಾನುಷ್ಟಭಃ
ಅಂತ್ಯಾ ಪ್ರಸ್ತಾರ ಪಂಕ್ತಿಃ ಎಂಬ ಛಂದಸ್ಸುಗಳೂ, ಶ್ರೀರಗ್ನಿಶ್ಚೇತ್ಯುಭೇ ಅಭಿಮಾನಿ ದೇವತೆಗಳೂ ಇರುತ್ತದೆ. ಲಕ್ಷ್ಮೀ ಪ್ರಸಾದ ಸಿದ್ಯರ್ಥವಾಗಿ ಈ ಸೂಕ್ತ ಪಠನೆ ಮಾಡುತ್ತಾರೆ.
ಹೀಗೇ ಒಂದೇ ಸೂಕ್ತದೊಳಗೆ ಎರಡನೆಯ ಮೂರು ಛಂಧಸ್ಸು ಬೇಧಗಳ ಮಂತ್ರಗಳಿರುತ್ತವೆ. ಉದ್ಧೇಶ ದೇಹದ ನಾಡಿಶುದ್ಧಿ, ಪ್ರಪಂಚದ ವಾತಾವರಣ ಶುದ್ಧಿ ಮಂತ್ರಗಳಿವು.
ಹೇಗೆ ವಾತಾವರಣ, ದೇಹ ಶುದ್ಧಿ ಆಗುತ್ತದೆ ಎಂಬ ಜಿಜ್ಞಾಸುಗಳೂ ಇದ್ದಾರೆ ನಮ್ಮಲ್ಲಿ. ಒಂದು ಕಲಹದ ಅಶ್ಲೀಲ ಬೈಗಳನ್ನು ಕೇಳಿದಾಗ, ದುಃಖವನ್ನು ಕೇಳಿದಾಗ, ಸಂತೋಷ, ತಮಾಷೆ ಮಾತು ಕೇಳಿದಾಗ, ಸತ್ಸಂಗ ಪ್ರವಚನ ಕೇಳಿದಾಗ ಏನೇನು ಅನುಭವ ಆಗುತ್ತದೆ ಎಂಬುದನ್ನು ನಾವೇ ಊಹಿಸಿಕೊಂಡರೆ ಅರ್ಥವಾಗುತ್ತೆ.
ಶಬ್ಧಮಾಲಿನ್ಯ, ವಾಯುಮಾಲಿನ್ಯ ಉಂಟಾದಾಗ ದೇಹ ಮಾಲಿನ್ಯವಾಗುತ್ತದೆ. ದೇಹಗಳು ಮಾಲಿನ್ಯವಾದಾಗ ದೇಶವೇ ಮಲಿನವಾಗುತ್ತದೆ. ಹಾಗಾಗಿ, ಪರಿಸರ ಸ್ವಚ್ಛವಾಗಿ ಇಡುವಂತಹ ಪರಮ ಜವಾಬ್ದಾರಿ ನಮಗಿದೆ. ಪರಿಸರ ಸ್ವಚ್ಛ ಮಾಡಬೇಕಾದರೆ ನಾವಿರುವ ಸ್ಥಳ, ಆಹಾರ ನಿಯಮ, ನಿತ್ಯ ನಡಾವಳಿ ಅನುಷ್ಠಾನಗಳೆಲ್ಲ ಪ್ರಕೃತಿಗೆ ಪೂರಕವಾಗಿರಬೇಕು. ಪ್ರಕೃತಿ ಮಾತೆಯು ನಾವೇನು ಕೊಡುತ್ತೇವೆಯೋ ಅದನ್ನೇ ಹಿಂತಿರುಗಿಸಿ ಕೊಡುತ್ತಾಳೆ. ಕೊಳೆತ ವಸ್ತುಗಳನ್ನು ಕಂಡ ಕಂಡಲ್ಲಿ ಎಸೆಯದೆ, ಹೂ ಬಳ್ಳಿಗಳ ಬುಡಕ್ಕೆ ಹಾಕಿದರೆ ಪರಿಮಳಯುಕ್ತ ಫಲ ಪುಷ್ಪವನ್ನು ನೀಡುತ್ತದೆ. Totally simple theory. ಆದರೆ ಮನಸ್ಸು ಮಾತ್ರ ಇರಬೇಕು.
Get in Touch With Us info@kalpa.news Whatsapp: 9481252093
Discussion about this post