ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೇಳದೆ ಬಂದೆ ನೀನು…
ಹೇಳದೇ ನನ್ನ ಮನಸಲ್ಲಿ
ಕಣ್ಣಿಗೆ ಕಾಣದ ಈ ಪ್ರೀತಿಯೆಂಬ ರಂಗುಚಲ್ಲಿ…
ಕಾಣದೆ ಹೋದೆಯಲ್ಲಿ ಕಾಡಿದೆ ನಿನ್ನ ನೆನಪಿಲ್ಲಿ
ಯಾರನೇ ಕಂಡರು ನೀನ್ನೇ ಕಾಣುವೆ ಅಲ್ಲಿ…
ಹುಡುಕೋದಾರಿ ನೀನಲ್ಲಿ ಸೇರಿ
ನೀ ಸಿಕ್ಕರೇ ಸಾಕು ಬೇಡುವೇ ಸರೀ
ಭಯವ ಮೇರಿ ನಿನ್ನ ಓಲವೇ ಬೇಕು…
ಪ್ರೀತಿಯ ತೋರಿ ಓಮ್ಮೇಲೆ ಜರಿ ಯಲ್ಲಿಗೆ ಹೋದೆ ನೀನು… ಪ್ರತೀ ಕ್ಷಣವೂ ನಾ
ನಿನ್ನ ಗುಂಗಲ್ಲೇ ನನ್ನೇ ಮರೆತನ…
ಕದು ಕೊತೆನಾ ಕರಗಿ ಸೋತೆನಾ… ನಿನ್ನ ಗುಂಗಲ್ಲೇ…
ಅದೇನೋ ಗೊತ್ತಿಲ್ಲ ಒಂದೊಂದ್ಸಲ ಈ ಹಾಡು ಕೇಳಿದಾಗಲೆಲ್ಲ ಜೀ ನಿಮ್ಮ ನೆನಪಾಗುತ್ತೆ. ಕೆಲವೊಮ್ಮೆ ನೆನಪುಗಳು ಅಂದರೆ ಇದೇನಾ ಅಂತ ಅನಿಸುತ್ತೆ. ಬೇಡ ಅಂದ್ರು, ಸುಮ್ಮನೆ ಇದ್ರು ಪದೇ ಪದೇ ನಿಮ್ಮ ಬಗ್ಗೇನೆ ಯೋಚನೆ ಮಾಡುತ್ತೆ ಜೀ ಈ ಹಾಳಾದ್ ಮನಸ್ಸು.
ಪ್ರೀತಿ ಅಂದ್ರೆ ಹೀಗೇನಾ ಯಾವಾಗ ಪ್ರೀತಿ ಆಗುತ್ತೆ ಎಂದು ಗೊತ್ತೇ ಆಗಲ್ಲ. ಅದೇ ಪ್ರೀತಿ ಯಾವಾಗ ಹೊಡೆದು ಹೋಗುತ್ತೆ ಅದು ಕೂಡ ಗೊತ್ತೇ ಆಗಲ್ಲ. ಕೆಲವೊಮ್ಮೆ ಪ್ರೀತಿ ಅಂದ್ರೆ ಇದೇನಾ ಎಂಬ ಅನುಮಾನ ಬರುತ್ತೆ. ಪ್ರೀತಿಯೆಂಬುವುದು ಕೇವಲ ಪ್ರಶ್ನಾರ್ಥಕ ಚಿಹ್ನೆಯಂತೆ ಅದಕ್ಕೆ ಉತ್ತರ ಸಿಗಲ್ಲ ಯಾವಾಗಲೂ ಪ್ರಶ್ನೆಯಾಗಿ ಉಳಿಯುತ್ತೆ.
ಜೀ, ನಿಸ್ಸಂಕೋಚ ಭಾವದಿಂದ ಕೇಳುತ್ತಿದ್ದೇನೆ. ನಿಮ್ಮ ಮೌನದ ಹಿಂದಿರುವ ಮಾತೇನು? ನಿಮ್ಮ ತಿರಸ್ಕಾರದ ನೋಟಕ್ಕೆ ಕಾರಣವೇನು? ಕಾರಣ ಕೇಳಿದರೂ ಹೇಳುತ್ತಿಲ್ಲ ಯಾಕೆ? ಏನಾಯ್ತು ನಿಮ್ಮ ಪ್ರೀತಿ ಸುಳ್ಳ? ನಿಮಗೂ ಮೋಸ ಮಾಡುವ ಮನಸ್ಸಿದೆಯಾ? ನಿಮ್ಮನ್ನು ನಂಬಿ, ನಿಮ್ಮೊಂದಿಗೆ ಬದುಕು ಕಟ್ಟಿಕೊಂಡು ಪ್ರೀತಿಯ ಪಲ್ಲಕ್ಕಿಯಲ್ಲಿ ಕೊನೆವರೆಗೂ ರಾಜ-ರಾಣಿಯರಂತೆ ಸುಖ, ದುಃಖದಲ್ಲಿ ಜೊತೆಯಾಗಿ ನಿಮ್ಮೊಡನೆ ಜೀವನ ನಡೆಸಬೇಕೆಂದು ನನ್ನ ಮನಸ್ಸು ಹಾತೊರೆಯುತ್ತಿದೆ ಜೀ… ಆದರೆ ನಿಮ್ಮ ಮೌನ ನನ್ನನ್ನು ಪ್ರತಿ ಕ್ಷಣ ಕೊಲ್ಲುತ್ತಿದೆ.
ಮರೆತೆ ಬಿಡುವನು ಜಗವ ನಡು ನಡುವೆ…!
ಎಲ್ಲೋ ಹೋರಾಟರೆ ಎಲ್ಲೋ ತಲುಪಿರುವೆ…!
ಎಂಥಾ ಚಂದ ದೂರದಿಂದ ನೀನು ನೀಡೋ ಹಿಂಸೆ…!
ಒಂದೂ ಕಾರಣ ಕೇಳಲಿಲ್ಲ, ಯಾವ ಕಾರಣವನ್ನೂ ಹೇಳಲಿಲ್ಲ. ನನ್ನ ಒಲವ ಎದೆಗೊಡಿನಲ್ಲೊಂದು ಪ್ರೀತಿಯ ದೀಪ ಹಚ್ಚಿಟ್ಟೆ. ಇನ್ನೇನು ಪ್ರೀತಿ ಪ್ರಜ್ವಲಿಸಿ, ನಮ್ಮ ಕನಸೊಂದು ಫಲಿಸಿ, ಹೊಸ ಬದುಕಿಗೆ ನಾಂದಿ ಹಾಡುತ್ತದೆ ಎನ್ನುವಷ್ಟರಲ್ಲಿ ತಟ್ಟನೇ ದೀಪ ಆರಿಸಿಟ್ಟು ಹೊರಟು ಹೋದೆಯಲ್ಲ…
ಎಲ್ಲರೂ ಮೋಸ ಮಾಡ್ತಾರೆ, ಮತ್ತೆ ಮೋಸ ಹೋಗುತ್ತಾರೆ ಅಂತ ಗೊತ್ತಿತ್ತು. ಆದರೆ ಪ್ರೀತಿಯಲ್ಲೇ ಮೋಸ ಮಾಡ್ತಾರೆ ಅಂತ ಗೊತ್ತಿರಲಿಲ್ಲ. ಹೀಗಾಗಿ ಪ್ರೀತಿ ಅಂದರೆನೇ ಬುಲ್’ಶೀಟ್ ಅನಿಸುತ್ತಿದೆ.
ಯಾರಾದ್ರೂ ಪ್ರೀತಿ ಅಂದ್ರೆ ಹೀಗೆ ಹಾಗೇ ಅಂತ ಹೇಳುವವರಿಗೆ ಅರ್ಥ ಆಗೋ ರೀತಿಯಲ್ಲಿ ಪ್ರೀತಿ ಅನ್ನುವುದು ಪುಸ್ತಕದ ಬದನೆಕಾಯಿ ಇದ್ದಂತೆ ಸುಮ್ನೆ ಯಾಕೆ ಪ್ರೀತಿ-ಪ್ರೇಮ ಅಂತ ಸಾಯ್ತೀರಾ ಎಂದು ಕೂಗಿ ಕೂಗಿ ಹೇಳಬೇಕು ಅನ್ಸುತ್ತೆ.
ನಿಜವಾಗಲ್ಲೂ ಒಂಟಿಯಾಗಿ ಇದ್ದಾಗ ನಮಗೆ ಪ್ರತಿಯೊಬ್ಬರ ಬಗ್ಗೆ ಇರುವಂತಹ ಮನೋಭಾವ ಪರಿಪೂರ್ಣವಾಗಿ ಅರ್ಥವಾಗುತ್ತದೆ. ಪ್ರೀತಿಯೆಂಬುವುದೇ ಮಾಯಾಲೋಕ. ಅಲ್ಲಿ ಯಾರು, ಯಾವಾಗ ಬೇಕಾದರೂ ಒಂದು ಹೋಗಬಹುದು.
ಜೀ ಮೊದಲೆಲ್ಲಾ ಮನಸ್ಸು ನಿಮ್ಮನ್ನು ನೋಡಬೇಕು. ನಿಮ್ಮ ಜೊತೆ ಮಾತಾಡಬೇಕು ಅಂತ ಹಾತೊರೆಯುತ್ತಿತ್ತು. ಆದರೆ ಕಾಲ ಬದಲಾದಂತೆ ಹೇಗೆ ಮರಗಳು ಹೊಸ ಹೊಸ ಚಿಗುರುಗಳನ್ನು ಬಿಡುತ್ತೋ ಹಾಗೆ ನನ್ನ ಮನಸ್ಸು ನಿಧಾನವಾಗಿ ನಿಮ್ಮ ನೆನಪುಗಳಿಂದ ಹೊರ ಬರಬೇಕೆಂದು ನಿರ್ಧರಿಸಿದೆ.
ಈಗ ನಿಮ್ಮನ್ನು ನೆನಪು ಮಾಡಿಕೊಳ್ಳುವುದಕ್ಕೂ ನನಗೆ ಇಷ್ಟವಿಲ್ಲ. ಕೊನೆಯದಾಗಿ ನಿಮಗೆ ಒಂದು ಮಾತು. ಮತ್ತೆ ಯಾವುದೇ ಕಾರಣಕ್ಕೂ ನನ್ನ ಜೀವನದಲ್ಲಿ ಬರುವ ಪ್ರಯತ್ನ ಮಾಡಬೇಡಿ. ಈಗ ನೀವು ನೀಡಿರುವ ನೋವುಗಳೇ ಸಾಕು. ನಿಮ್ಮನ್ನು ಯಾವುದೇ ಕಾರಣಕ್ಕೂ ಮತ್ತೆ ಮತ್ತೆ ಕ್ಷಮಿಸುವಷ್ಟೂ ಉದಾರಿ ನಾನಲ್ಲ.
Get in Touch With Us info@kalpa.news Whatsapp: 9481252093
Discussion about this post