ಭದ್ರಾವತಿ: ಕಾಯಕವೇ ಕೈಲಾಸ, ಸೇವೆಯೇ ಸಾಧನೆ ಎಂಬುದನ್ನು ಕೃತಿಯಲ್ಲಿ ಸಾಧಿಸಿ, ವಿಶ್ವಗುರುವಾಗಿ ಬೆಳೆದ ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ ಇಡಿಯ ಭಕ್ತಗಣವನ್ನು ದುಃಖದಲ್ಲಿ ಮುಳುಗಿಸಿದೆ.
ಇಂತಹ ದುಃಖದ ನಡುವೆಯೇ ಗುರುಗಳು ಉಪದೇಶಿಸಿದ ಸೇವೆಯನ್ನು ಶ್ರೀಗಳ ಅಂತಿಮ ವಿಧಿವಿಧಾನದ ಸಂದರ್ಭದಲ್ಲಿ ಭದ್ರಾವತಿಯ ವೀರಶೈವ ಸಮುದಾಯದವರು ನೆರವೇರಿಸಿದ್ದಾರೆ.
ಶ್ರೀಗಳ ಅಂತಿಮ ದರ್ಶನವನ್ನು ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಪಡೆದಿದ್ದಾರೆ. ಇಂತಹ ಸಂದರ್ಭದಲ್ಲಿ ಭದ್ರಾವತಿಯ ವೀರಶೈವ ಸೇವಾ ಸಮಿತಿಯ ಸದಸ್ಯರು ಹಾಗೂ ಸಮುದಾಯದವರು ಸಿದ್ದಗಂಗೆಗೆ ತೆರಳಿ ಭಕ್ತರ ಸೇವೆ ಮಾಡುವ ಮೂಲಕ ಗುರುಗಳ ಸೇವೆ ಮಾಡಿದ್ದಾರೆ.
ಭದ್ರಾವತಿಯಿಂದ ಸಿದ್ದಗಂಗೆಗೆ ತೆಗಳಿದ್ದ ಇವರುಗಳು ಶ್ರೀಗಳ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಸಾವಿರಾರು ಮಂದಿಗೆ ಕುಡಿಯುವ ನೀರಿನ ವಿತರಣೆ ಮಾಡಿದ್ದಾರೆ. ಕುಡಿಯುವ ನೀರಿನ ಪ್ಯಾಕೇಟ್’ಗಳೊಂದಿಗೆ ಸಿದ್ದಗಂಗೆಗೆ ತೆರಳಿದ ತಂಡ ನಿರಂತರವಾಗಿ ಉಚಿತ ನೀರಿನ ವ್ಯವಸ್ಥೆ ಮಾಡುವ ಮೂಲಕ ಶ್ರೀಗಳು ಹಾಕಿಕೊಟ್ಟ ಸೇವಾ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡಿರುವುದು ಪ್ರಶಂಸನೀಯ.
Discussion about this post