ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾರುಕಟ್ಟೆಯಲ್ಲಿ ದೊರೆಯುವ ಕಳಪೆ ಗುಣಮಟ್ಟದ ಮಾಸ್ಕ್ ಧರಿಸುವುದರಿಂದ ಆರೋಗ್ಯಕ್ಕೆ ಅಡ್ಡ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಗುಣಮಟ್ಟದ ಎನ್95 ಮಾಸ್ಕ್’ಗಳನ್ನು ಸರ್ಕಾರಿ ನೌಕರರ ಸಂಘದ ವತಿಯಿಂದಲೇ ಸರ್ಕಾರಿ ನೌಕರರಿಗೆ ವಿತರಿಸಲಾಗುತ್ತಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಕಚೇರಿಯಲ್ಲಿ ಮಾಸ್ಕ್’ಗಳನ್ನು ವಿತರಿಸಿ ಅವರು ಮಾತನಾಡಿದರು.

ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ, ರಾಜ್ಯ ನೌಕರರ ಜಂಟಿ ಕಾರ್ಯದರ್ಶಿ ಡಾ. ಸಿ.ಎ. ಹಿರೇಮಠ ಮಾತನಾಡಿ, ಮಹಾನಗರ ಪಾಲಿಕೆಯವರು ದಂಡ ವಿಧಿಸುತ್ತಾರೆಂದು ಕಾಟಾಚಾರಕ್ಕೆ ಮುಖಗವಸು ಹಾಕಿಕೊಳ್ಳುವುದರಿಂದ ಮೂಲ ಉದ್ದೇಶ ಈಡೇರುವುದಿಲ್ಲ. ಹಾದಿಬೀದಿಯಲ್ಲಿ ಮಾರಾಟಕ್ಕೆ ಲಭ್ಯವಿರುವ ಮುಖಗವಸುಗಳನ್ನು ಧರಿಸುವುದರಿಂದ ವ್ಯಾಪಾರಿಗೆ ಲಾಭವೆ ಹೊರತು ಜನರಿಗಲ್ಲ. ದುಡ್ಡು ಉಳಿಸಬೇಕೆಂಬ ಆಸೆಯಿಂದ ಮೂಗು, ಮುಖ ಮುಚ್ಚುವಂತೆ ಬಿಗಿಯಾಗಿ ಮುಖಗವಸು, ಕರವಸ್ತ್ರ ಹಾಕಿಕೊಳ್ಳುವುದರಿಂದ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಕ್ರಮೇಣ ದೇಹಸ್ವಾಸ್ಥ್ಯ ಕೆಡಬಹುದು. ಆದ್ದರಿಂದ ಮರುಬಳಸಬಹುದಾದ, ಐಎಸ್‌ಒ ಪ್ರಮಾಣಿತ, ಎನ್ 95 ಮುಖಗವಸುಗಳನ್ನು ಬಳಸುವಂತೆ ಸಲಹೆ ನೀಡಿದರು.

Get In Touch With Us info@kalpa.news Whatsapp: 9481252093







Discussion about this post