ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ತಮ್ಮ ಮಗಳ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಮಾಡಿ ನೃತ್ಯದ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿ.ಕೆ. ಸಂಗಮೇಶ್ವರ ಅವರ ಅಭಿಮಾನಿಗಳು ಟೀಕಾಕಾರರಿಗೆ ಬಹಿರಂಗ ಪತ್ರ ಬರೆದು, ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅದನ್ನು ಯಥಾವತ್ ಇಲ್ಲಿ ಪ್ರಕಟಿಸಲಾಗಿದೆ.
ಭದ್ರಾವತಿಯ ಮಾನ್ಯ ಶಾಸಕರು ತಮ್ಮ ಮಗಳ ಮದುವೆ ಸಮಾರಂಭದಲ್ಲಿ ನೃತ್ಯ ಮಾಡಿದ್ದಾರೆ ಎಂದು ಕೆಲವು ವಿಕೃತ ಮನಸ್ಸುಳ್ಳ ಅವಿವೇಕಿಗಳು ಹಾಗೂ ರಾಜಕೀಯ ವಿರೋಧಿಗಳ ಪ್ರಚೋದನೆ ಮೇರೆಗೆ ವೈರಲ್ ಆಗಿರುವ ವಿಡಿಯೋ ಬಗ್ಗೆ ಸಾಮಾಜಿಕ ತಾಣಗಳಲ್ಲಿ, ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಕಳೆದ ಎರಡು ದಿನಗಳಿಂದ ಚರ್ಚೆ ನೆಡೆದಿರುವುದು ನಿಜಕ್ಕೂ ಶೋಚನೀಯ ಸಂಗತಿ. ಶಾಸಕರ ನಡೆಯನ್ನು ಘೋರ ಅಪರಾಧ ಎಂಬಂತೆ ಬಿಂಬಿಸುತ್ತಿರುವ ಮೂಢಾತ್ಮರೇ, ಅವಿವೇಕಿಗಳೇ ನೀವು ಈ ಕೆಳಕಂಡ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ.
1) ಇಬ್ಬರು ಶಾಸಕರ ಪ್ರತಿಷ್ಠಿತ ಕುಟುಂಬಗಳ ನಡುವೆ ನೆರೆವೇರಿದ ಮದುವೆ, ಅವರ ಖಾಸಗಿ ಕಾರ್ಯಕ್ರಮ. ಕೋವಿಡ್19 ಇನ್ನೂ ಮುಕ್ತವಾಗಿಲ್ಲವಾದ್ದರಿಂದ ಎರಡೂ ಕುಟುಂಬಗಳ ಸದಸ್ಯರು, ಹಿತೈಷಿಗಳ ಸಮಕ್ಷಮದಲ್ಲಿ ನೆರೆಯ ರಾಜ್ಯ ಗೋವಾದಲ್ಲಿ ವಿವಾಹವನ್ನು ಆಯೋಜನೆ ಮಾಡಲಾಗಿತ್ತು. ಸದಾ ಸಾರ್ವಜನಿಕರ ಹಿತ ಕಾಪಾಡುವ ಜನಪ್ರತಿನಿಧಿಗಳಿಗೆ ತಮ್ಮ ಮಕ್ಕಳ ವಿವಾಹ ತಮ್ಮಿಷ್ಟದಂತೆ ನೆರೆವೇರಿಸಲು ಕನಿಷ್ಠ ಹಕ್ಕು ಇಲ್ಲವೇ?
2) ನೂರಾರು ಮಂದಿ ಭಾಗವಹಿಸಿದ ಸಮಾರಂಭದಲ್ಲಿ 100ಕ್ಕೂ ಹೆಚ್ಚು ಗೆಳಯರು, ಎರಡು ಕುಟುಂಬಗಳ ಮಹಿಳಾ ಸದಸ್ಯರು, ಗಣ್ಯರು, ಹಿತೈಷಿಗಳು, ಸಂಗೀತ ಸಂಜೆಯ ಆಯೋಜಕರು ಸೇರಿ ಮಾನ್ಯ ಶಾಸಕರನ್ನು ಒತ್ತಾಯಿಸಿದ ಕಾರಣ ಹಾಗೂ ತಮ್ಮ ಮಗಳ ಮದುವೆ ಕಾರ್ಯಕ್ರಮವಾದ್ದರಿಂದ ಸಮಾರಂಭ ರಂಗೇರಲು ಮಾನ್ಯ ಶಾಸಕರು ಕೆಲ ಕ್ಷಣ ಹೆಜ್ಜೆ ಹಾಕಿದ್ದು ತಪ್ಪೇ? ಅಭಿವ್ಯಕ್ತಿ ಸ್ವಾತಂತ್ರ್ಯ ಶಾಸಕರಿಗೆ ಅನ್ವಯಿಸುವುದಿಲ್ಲವೇ? ಈ ವಿಚಾರದಲ್ಲಿ ಬೊಬ್ಬೆ ಹೊಡಿಯುವ ವಿಕೃತ ಮನಸ್ಸಿನ ಅವಿವೇಕಿಗಳೇ ನಿಮ್ಮ ಮನಃಸಾಕ್ಷಿಗಳಿಗೆ ಕೇಳಿ ನಿಮ್ಮ ಖಾಸಗಿ ಜೀವನದ ಆನಂದ ಕ್ಷಣಗಳಲ್ಲಿ ನೀವು ರಾಜಿಯಾಗುವಿರಾ?
3) ಸನ್ಮಾನ್ಯ ಶಾಸಕರಾದ ಸಂಗಮೇಶ್ವರ ಅವರ ಕರೆಗೆ ಓಗೊಟ್ಟು ದೂರದ ಗೋವಾ ರಾಜ್ಯಕ್ಕೆ ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರುಗಳು ಕೆಪಿಸಿಸಿ ಅಧ್ಯಕ್ಶರು ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಮುಖಂಡರು, ಉದ್ಯಮಿಗಳು, ಭೇಟಿ ನೀಡಿ ಎರಡು ದಿನಗಳ ಕಾಲ ಇದ್ದು ನೂತನ ದಂಪತಿಗಳಿಗೆ ಶುಭ ಕೋರಿದ್ದಾರೆ. ಇದು ಸಂಗಮೇಶ್ವರ ಬಗ್ಗೆ ಇರುವ ಪ್ರೀತಿ, ವಿಶ್ವಾಸ ಗೌರವವನ್ನು ಏನೆಂದು ತೋರಿಸುತ್ತದೆ ನೀವೇ ಯೋಚಿಸಿ. ಸರಳ, ಸಜ್ಜನ ವಕ್ತಿತ್ವದ ಕಾಯಕಯೋಗಿ ಬಸವತತ್ವದ ಅನುಯಾಯಿ ಭದ್ರಾವತಿ ಜನನಾಯಕ ಸಂಗಮೇಶ್ವರ್ ಅವರ ಚಾರಿತ್ರ್ಯದ ಬಗ್ಗೆ ರಾಜಕೀಯ ವಿರೋಧಿಗಳು ಏನೇ ಒಳಸಂಚು ರೂಪಿಸಿದರೂ ವಿಫಲ ನಿಶ್ಚಿತ!
ಬಿಕೆಎಸ್ ವಿರೋಧಿಗಳಲ್ಲಿ ನಿವೇದನೆ ಏನೆಂದರೆ, ನಿಮ್ಮ ವಿರೋಧಿ ರಾಜಕೀಯಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಇನ್ನೊಬ್ಬರ ಚಾರಿತ್ರ್ಯ ತೇಜೋವಧೆ ಮಾಡುವ ಮೊದಲು ಸತ್ಯಾಸತ್ಯತೆ ಬಗ್ಗೆ ಕೂಲಂಕುಷವಾಗಿ ವಿವೇಚಿಸಿ. ನಿಮ್ಮ ಅಸಹಾಯಕ ವಿಕೃತ ಮನಸ್ಸುಗಳು ಪರಿಶುದ್ಧವಾಗಿ ಮಾರ್ಪಾಡಾಗಲಿ ಎಂದು ಬಯಸುತ್ತಾ, ಭ್ರಮಲೋಕದಿಂದ ನಿಮ್ಮ ಮನಸ್ಸುಗಳು ವಾಸ್ತವದೊಂದಿಗೆ ಚಿಂತಿಸಲೆಂದು ಆಶಿಸುತ್ತೇವೆ ಹಾಗೂ ನೆನಪಿರಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮುಂದುವರೆದಷ್ಟು ಭದ್ರಾವತಿಯ ಜನತೆಯ ನಡುವೆ ಸಂಗಮೇಶ್ವರ್ ಅವರು ವಜ್ರದಂತೆ ಝಳಪಳಿಸುವುದು ನಿಶ್ಚಿತ!
-ಶಾಸಕ ಬಿ.ಕೆ. ಸಂಗಮೇಶ್ವರ ಅಭಿಮಾನಿ ಬಳಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post