ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಷ್ಟ್ರ ವ್ಯಾಪಿ ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದು, ಇವರ ತ್ಯಾಗಕ್ಕೆ ಏನು ಕೊಟ್ಟರೂ ಕಡಿಮೆಯೇ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮನೋವೈದ್ಯಕೀಯ ಸಮಸ್ಯೆ ಹೊಂದಿರುವ ರೋಗಿಗಳಿಗೆ ಉಚಿತ ಸಲಹೆಗಳನ್ನು ನೀಡಲು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ವಿಭಾಗದ ವೈದ್ಯರು ಮುಂದಾಗಿರುವುದು ನಿಜಕ್ಕೂ ವೈದ್ಯೋ ನಾರಾಯಣೋ ಹರಿಃ ಎಂಬುದನ್ನು ಸಾಬೀತು ಮಾಡಿದ್ದಾರೆ.
ಈ ಕುರಿತಂತೆ ತಜ್ಞ ಮನೋವೈದ್ಯ ಶಿವಮೊಗ್ಗದ ಡಾ. ಅರವಿಂದ್ ಅವರು ಮಾಹಿತಿ ನೀಡಿದ್ದು, ರಾಜ್ಯದಾದ್ಯಂತ ಮನೋವೈದ್ಯರ ಮಾಹಿತಿ ಹೀಗಿದೆ. ಖಿನ್ನತೆ ಆತಂಕ ಗೀಳುರೋಗ ಮಧ್ಯ ಹಾಗೂ ಇತರೆ ವ್ಯಸನಗಳು ಕರೋನಾ ಬಗ್ಗೆ ಮಾನಸಿಕವಾದ ಭಯಗಳಿಗೆ ವೈದ್ಯರ ಸಲಹೆ ಹಾಗೂ ಸೂಚನೆಗಳು ಸಹಾಯವಾಣಿ ಮೂಲಕ ಎಪ್ರಿಲ್ 14ರವರೆಗೂ ದೊರೆಯಲಿದೆ.
- ಡಾ.ಅರವಿಂದ್, ಶಿವಮೊಗ್ಗ
ಸಮಯ: ಸಂಜೆ 5.30ರಿಂದ 7 ಗಂಟೆ
ಮೊ: 9620803715 - ಡಾ.ಸಚಿನ್, ಧಾರವಾಡ ಮೊ.9880942288
ಡಾ.ಶ್ರೀಕಲಾ ಭರತ್, ಬೆಂಗಳೂರು ಮೊ.98454 08981
ಸಮಯ: ಬೆಳಗ್ಗೆ 8.30ರಿಂದ 10 ಗಂಟೆ - ಡಾ.ಆರ್.ಎಸ್. ದೀಪಕ್, ಚಿತ್ರದುರ್ಗ ಮೊ.9353051686
ಡಾ.ಪ್ರೀತಿ ಪೈ, ಶಿವಮೊಗ್ಗ ಮೊ.9480838072
ಸಮಯ: ಬೆಳಗ್ಗೆ 10 ರಿಂದ 11.30 ಗಂಟೆ - ಡಾ.ಗೋಪಾಲ್ ದಾಸ್, ತುಮಕೂರು ಮೊ.9740707779
ಡಾ.ರಾವತ್ ಸ್ನೇಹ, ಕೋಲಾರ ಮೊ.9902987140
ಸಮಯ: ಮಧ್ಯಾಹ್ನ 1ರಿಂದ 2.30ಗಂಟೆ - ಡಾ. ಲೋಕೇಶ್ ಬಾಬು, ತುಮಕೂರು ಮೊ.9740707779
ಡಾ. ಅಭಯ ಮುಕ್ತಾರ್, ಹುಬ್ಬಳ್ಳಿ ಮೊ.9448450565
ಸಮಯ: ಮಧ್ಯಾಹ್ನ 1ರಿಂದ 2.30ಗಂಟೆ - ಡಾ. ಅಲೋಕ್ ಗನಟೆ, ಕಲಬುರಗಿ ಮೊ.9241177535
ಸಮಯ: ಸಂಜೆ 2.30ರಿಂದ 4 ಗಂಟೆ - ಡಾ.ಸಂಜಯ್ ರಾಜ್, ತುಮಕೂರು ಮೊ.9886979089
ಡಾ.ಕೃಷ್ಣ ಮೈಸೂರು, ಮೈಸೂರು ಮೊ.9480292590
ಸಮಯ: ಸಂಜೆ 4ರಿಂದ 5.30ಗಂಟೆ - ಡಾ.ಮೃತ್ಯುಂಜಯ, ದಾವಣಗೆರೆ ಮೊ.9739238788
ಡಾ.ಅರವಿಂದ್ ಎಸ್.ಟಿ., ಶಿವಮೊಗ್ಗ ಮೊ.9620803715
ಸಮಯ: ಸಂಜೆ 5.30ರಿಂದ 7 ಗಂಟೆ - ಡಾ.ಶರಣ್ಯ ದೇವನಾಥನ್, ಬೆಂಗಳೂರು ಮೊ.9663677709
ಸಮಯ: 7ರಿಂದ 8.30ಗಂಟೆ
ಈ ಕೆಳಗಿನ ರೋಗಲಕ್ಷಣಗಳಿದ್ದರೆ ಈ ವೈದ್ಯರನ್ನು ಸಂಪರ್ಕಿಸಬಹುದು:
ಕೋವಿಡ್ ಸಂಬಂಧಿತ ಆತಂಕ, ಭಯ, ಪ್ರಕ್ಷುಬ್ಧತೆ, ಅನುಮಾನ, ತೀವ್ರ ಒತ್ತಡದ ಪ್ರತಿಕ್ರಿಯೆ, ದುಃಖ, ಹತಾಶತೆ, ಅಸಹಾಯಕತೆ, ನಿದ್ರೆಯ ತೊಂದರೆ, ಮಾದಕ ದ್ರವ್ಯ ಸೇವನೆ, ರೋಗದ ಆತಂಕ, ಗೀಳು ಮತ್ತು ಬಲವಂತಗಳು, ಅಪ್ರಸ್ತುತ ಆಲೋಚನೆಗಳು ಇತ್ಯಾದಿ.
ಸೂಚನೆ: ಸಾವಿನ ಭಯ ಹಾಗೂ ಆತ್ಮಹತ್ಯಾ ಯೋಚನೆಗಳು ಇದ್ದರೆ ಅಂತಹ ಪ್ರಕರಣಗಳನ್ನು ಮಾನಸಿಕ ತುರ್ತು ಎಂದು ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ದೂರವಾಣಿ ಮೂಲಕ ಸಲಹೆ ನೀಡಲು ಸಾಧ್ಯವಿಲ್ಲ. ಹೀಗಾಗಿ, ಅಂತಹ ಪ್ರಕರಣಗಳಿದ್ದರೆ ತತಕ್ಷಣ ಹತ್ತಿರದ ಮನೋವೈದ್ಯರನ್ನು ಸಂಪರ್ಕಿಸಿ.
Get in Touch With Us info@kalpa.news Whatsapp: 9481252093
Discussion about this post