ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೊರೋನಾ ಎರಡನೆಯ ಅಲೆಯ ಭೀತಿ ಎಲ್ಲೆಡೆ ತಾಂಡವವಾಡುತ್ತಾ, ದಿನದಿಂದ ದಿನಕ್ಕೆ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ನಡುವೆಯೇ ತಾಲೂಕಿನಲ್ಲಿ ಈವರೆಗೂ ಎಷ್ಟು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ? ಇಲ್ಲಿದೆ ಮಾಹಿತಿ: ಮುಂದೆ ಓದಿ…
ಜಿಲ್ಲಾಡಳಿತ ಇಂದು ಬಿಡುಗಡೆ ಮಾಡಿರುವ ಮಾಹಿತಿಯಂತೆ ತಾಲೂಕಿನಲ್ಲಿ ಈವರೆಗೂ ಒಟ್ಟು 03784 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಇನ್ನು ಈ ಇಂದು ಗಾಂಧಿನಗರದಲ್ಲಿ ಓರ್ವ ಪುರುಷ ಹಾಗೂ ನ್ಯೂಟೌನ್ ವ್ಯಾಪ್ತಿಯಲ್ಲಿ ಓರ್ವ ಪುರುಷ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿ ಹೆಚ್ಚಿನ ಪಾಸಿಟಿವ್ ಪ್ರಕರಣ ದಾಖಲಾಗಿದೆ.ಈ ಕುರಿತಂತೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ.ಅಶೋಕ್, ನಾಗರಿಕರು ಕೋವಿಡ್ ನಿಯಮವನ್ನು ಪಾಲಿಸುವುದರಲ್ಲಿ ಅನಾಸಕ್ತಿ ತೋರಿಸುತ್ತಿರುವುದು ಸಹ ಪಾಸಿಟಿವ್ ಪ್ರಕರಣ ಹೆಚ್ಚಲು ಒಂದು ಮುಖ್ಯ ಕಾರಣವಾಗಿದೆ. ನಾಗರಿಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಾಲೂಕಿನಲ್ಲಿ ಸಾಕಷ್ಟು ಕಡೆಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಹಾಗೂ ಲಸಿಕೆ ಹಾಕುವ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post