ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ನಡುವೆಯೇ 74ನೆಯ ಸ್ವಾತಂತ್ರೋತ್ಸವಕ್ಕೆ ಇಡಿಯ ದೇಶವೇ ಸಿದ್ದವಾಗುತ್ತಿದೆ. ಅಂತೆಯೇ ಶಿವಮೊಗ್ಗದಲ್ಲೂ ಸಹ ಸಿದ್ದತೆಗಳು ಮನೆ ಮಾಡಿದೆ.
ನಾಳೆ ಬೆಳಗ್ಗೆ 9 ಗಂಟೆಗೆ ಡಿಎಆರ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಧ್ವಜಾರೋಹಣ ಮಾಡಲಿದ್ದು, ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ.
ಇನ್ನು, ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣಕ್ಕೆ ಸಿದ್ದತೆ ನಡೆದಿದೆ.

ಪ್ರಮುಖವಾಗಿ, ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯನ್ನು ನಾಳೆಯ ಸ್ವಾತಂತ್ರೋತ್ಸವಕ್ಕೆ ಭರ್ಜರಿ ಸಿದ್ದತೆ ನಡೆದಿದೆ. ಇಡಿಯ ಠಾಣೆಯನ್ನು ವಿಶೇಷವಾಗಿ ಸಿಂಗರಿಸಲಾಗಿದ್ದು, ಮುಂಭಾಗದಲ್ಲಿ ಸುಂದರವಾದ ರಂಗೋಲಿಯನ್ನು ಚಿತ್ರಿಸಲಾಗಿದೆ.
ಠಾಣೆಯಲ್ಲಿನ ಮಹಿಳೆ ಸಿಬ್ಬಂದಿಗಳು ಅತ್ಯಂತ ಸಂಭ್ರಮದಿಂದ ಸುಂದರವಾದ ರಂಗೋಲಿಯನ್ನು ಚಿತ್ರಿಸಿದ್ದಾರೆ.
ಕೊರೋನಾ ಆತಂಕದ ನಡುವೆಯೇ ತಮ್ಮ ಮನೆಯ ಹಬ್ಬವನ್ನು ಹೇಗೆ ಸಂಭ್ರಮಿಸುವ ರೀತಿಯಲ್ಲೇ ರಾಷ್ಟ್ರೀಯ ಹಬ್ಬವನ್ನೂ ಸಹ ಆಚರಿಸುತ್ತಿರುವುದು ಮಾದರಿಯಾಗಿದೆ.
Get In Touch With Us info@kalpa.news Whatsapp: 9481252093

















