ಬೆಂಗಳೂರು: ದೇಶದ ಮೊಟ್ಟ ಮೊದಲ ಸೇನಾ ಮುಖ್ಯಸ್ಥ ಕೆ.ಎಂ. ಕಾರ್ಯಪ್ಪ ಅವರನ್ನು ನೀಡಿದ ಕೊಡಗು, ವೀರಾಧಿವೀರ ಸೈನಿಕರಲ್ಲಿ ತಾಯಿ ಭಾರತಿಯ ಸೇವೆಗೆ ಅರ್ಪಿಸಿದೆ.
ಇಂತಹ ಕೊಡಗು ಕಳೆದ ವರ್ಷ ಪ್ರವಾಹದಿಂದ ತತ್ತರಿಸಿದ್ದು, ಮೂಲ ಸೌಕರ್ಯಗಳ ಅಭಿವೃದ್ಧಿಗಳು ಇನ್ನೂ ನಡೆಯುತ್ತಲೇ ಇವೆ.
ಇಂತಹ ಕೊಡಗಿನವರ ಪರವಾಗಿ ಮಾತನಾಡಿರುವ ಪವರ್’ಸ್ಟಾರ್ ಪುನೀತ್ ರಾಜ್’ಕುಮಾರ್, ಇಲ್ಲಿಗೆ ಒಂದು ಸುಸಜ್ಜಿತ ಆಸ್ಪತ್ರೆಯ ಅಗತ್ಯತೆಯ ಕುರಿಗಾತಿ ಧ್ವನಿಯೆತ್ತಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ವೀರರ ನಾಡು ಕೊಡಗು ನಮ್ಮ ನಿಮ್ಮೆಲ್ಲರ ಹೆಮ್ಮೆ. ಕೊಡಗಿನ ಪ್ರಕೃತಿಗೆ ಮನಸೋತು ಪ್ರಪಂಚಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೊಡಗಿನಲ್ಲಿ ಒಂದು ಉತ್ತಮ ಅತ್ಯಾಧುನಿಕ ಹೈಟೆಕ್ ಆಸ್ಪತ್ರೆಯಾಗಬೇಕೆಂದು ನನ್ನ ಮನವಿ. ಕೊಡಗಿನ ಜನತೆಗೆ ಹಾಗೂ ಪ್ರವಾಸಿಗರಿಗೆ ಒಂದು ಮೂಲ ಸೌಕರ್ಯ ಒದಗಿಸಿದಂತಾಗುತ್ತದೆ ಎಂದಿದ್ದಾರೆ.
ವೀರರ ನಾಡು ಕೊಡಗು ನಮ್ಮ ನಿಮ್ಮೆಲ್ಲರ ಹೆಮ್ಮೆ, ಕೊಡಗಿನ ಪ್ರಕೃತಿಗೆ ಮನಸೋತು ಪ್ರಪಂಚಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ ಕೊಡಗಿನಲ್ಲಿ ಒಂದು ಉತ್ತಮ ಅತ್ಯಾಧುನಿಕ ಹೈಟೆಕ್ ಆಸ್ಪತ್ರೆಯಾಗಬೇಕೆಂದು ನನ್ನ ಮನವಿ.ಕೊಡಗಿನ ಜನತೆಗೆ ಹಾಗು ಪ್ರವಾಸಿಗರಿಗೆ ಒಂದು ಮೂಲ ಸೌಕರ್ಯ ಒದಗಿಸಿದಂತಾಗುತ್ತದೆ #WeNeedEmergencyHospitalInKodagu
— Puneeth Rajkumar (@PuneethRajkumar) June 16, 2019
ಈ ಮೂಲಕ ಕೊಡಗಿನವರಿಗಾಗಿ ಅಲ್ಲಿನ ಪ್ರದೇಶದಲ್ಲೇ ಒಂದು ಸುಸಜ್ಜಿತ ಆಸ್ಪತ್ರೆಯ ಕೊರತೆಯಿದೆ ಎನ್ನುವುದನ್ನು ತೋರಿಸಿದ್ದು, ಈಗ ನಡೆಯುತ್ತಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಜೊತೆಯಲ್ಲಿಯೇ ಇದೂ ಸಹ ಆಗಲಿ ಎಂಬುದು ಸ್ಥಳೀಯರ ಬೇಡಿಕೆಯೂ ಸಹ ಆಗಿದೆ.
















