ನವದೆಹಲಿ: ದೇಶದ ಶತ್ರುರಾಷ್ಟ್ರ ಪಾಕಿಸ್ಥಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಐತಿಹಾಸಿಕ ಯಶಸ್ಸು ಸಾಧಿಸಿರುವುದು ದೇಶದಾದ್ಯಂತ ಸಂಭ್ರಮ ಮೂಡಿಸಿದೆ.
ಟೀಂ ಇಂಡಿಯಾದ ಯಶಸ್ಸಿನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇಂತಹ ಯಶಸ್ಸಿನ ಮೂಲಕ ಪಾಕಿಸ್ಥಾನದ ಮೇಲೆ ಮತ್ತೊಂದು ಸ್ಟ್ರೈಕ್ ಮಾಡಿದೆ ಎಂದು ಪ್ರಶಂಸಿಸಿದ್ದಾರೆ.
Another strike on Pakistan by #TeamIndia and the result is same.
Congratulations to the entire team for this superb performance.
Every Indian is feeling proud and celebrating this impressive win. #INDvPAK pic.twitter.com/XDGuG3OiyK
— Amit Shah (@AmitShah) June 16, 2019
ಈ ಕುರಿತಂತೆ ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅತ್ಯಾದ್ಬುತ ಪಂದ್ಯವಾಗಿತ್ತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
Congratulations to Indian cricket team for winning the match against Pakistan in #CWC2019. The Indian team played an amazing game of cricket for this victory.
We are all proud of Team India.
— Rajnath Singh (@rajnathsingh) June 16, 2019
ಇನ್ನು, ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪಿಯೂಷ್ ಗೋಯೆಲ್ , ಕಿರಣ್ ರಿಜಿಜು, ಮತ್ತಿತರ ಅನೇಕ ನಾಯಕರು ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ.
ಭಾರತದ ಐತಿಹಾಸಿಕ ಯಶಸ್ಸು
ಟೀಂ ಇಂಡಿಯಾ ಒಡ್ಡಿದ್ದ 337 ರನ್ ಟಾರ್ಗೆಟ್ ಬೆನ್ನತ್ತಿದ್ದ ಪಾಕಿಸ್ಥಾನ ಆಟಕ್ಕೆ ಮಳೆಯೂ ಅಡ್ಡಿಯಾಗಿತ್ತು. ಪಂದ್ಯದ 35 ಓವರ್ ವೇಳೆಗೆ ಪಾಕ್ 6 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದಾಗ ಮಳೆ ಪ್ರಾರಂಭವಾಗಿದ್ದು ಪಂದ್ಯ ಕೆಲ ಕಾಲ ಸ್ಥಗಿತವಾಗಿತ್ತು. ಮಳೆ ನಿಂತು ಮತ್ತೆ ಪಂದ್ಯ ಪ್ರಾರಂಭವಾದಾಗ ಡಕ್ವರ್ತ್ ನಿಯಮದ ಅನ್ವಯ ಪಾಕ್’ಗೆ ಗೆಲ್ಲಲು 30 ಎಸೆತಗಳಲ್ಲಿ 136 ರನ್’ಗಳ ಟಾರ್ಗೆಟ್ ನೀಡಲಾಗಿತ್ತು. ಆದರೆ ಪಾಕ್ ಆಟಗಾರರಿಗೆ ಈ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಂತಿಮವಾಗಿ ವಾಸಮ್ 46 ಶದಾಬ್ ಖಾನ್ 20 ರನ್ ಗಳಿಸಿ ಅಜೇಯರಾಗಿ ಉಳಿದೂ 212 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಈ ಮೂಲಕ ಭಾರತಕ್ಕೆ 89 ರನ್ ಗಳ ರೋಚಕ ಗೆಲುವು ದಕ್ಕಿದೆ.
ಏಕದಿನದಲ್ಲಿ ಅತ್ಯಂತ ವೇಗವಾಗಿ 11,000 ರನ್ ಗಳಿಸಿದ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದರು. 222 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ ಅವರು 276 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದ ಸಚಿನ್ ತೆಂಡುಲ್ಕರ್ ದಾಖಲೆಯನ್ನು ನೆಲಸಮ ಮಾಡಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಟಿ20, ಏಕದಿನ, ಟೆಸ್ಟ್) ಒಟ್ಟು 358 ಸಿಕ್ಸರ್ ಬಾರಿಸಿದ ರೋಹಿತ್ ಭಾರತೀಯ ದಾಖಲೆ ನಿರ್ಮಿಸಿದರು. ಈ ವೇಳೆ 355 ಸಿಕ್ಸರ್ ಬಾರಿಸಿದ ಧೋನಿ ದಾಖಲೆ ಮೀರಿದರು.
ಈ ಕೂಟದಲ್ಲಿ ರೋಹಿತ್ 2ನೇ ಶತಕ ಬಾರಿಸಿದರು. ಅಷ್ಟು ಮಾತ್ರವಲ್ಲ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಶತಕ ಬಾರಿಸಿದ 2ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಕೊಹ್ಲಿ ಪಾಕ್ ವಿರುದ್ಧ ಶತಕ ಬಾರಿಸಿದ್ದರು.
Discussion about this post