No Result
View All Result
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth
English Articles

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

by kalpa News
July 2, 2026
0

Kalpa Media House  |  Mumbai | Q1 FY27 sales in the domestic & international markets stood at 1,08,488 units, compared...

Read moreDetails
ABB Innovation Center (AIC) brings together 1,000+ innovators from 37 countries to accelerate industrial AI

ABB Innovation Center (AIC) brings together 1,000+ innovators from 37 countries to accelerate industrial AI

July 2, 2026
Memorable Concert by Dr Sunder and Smt.J.B.Keerthana

Memorable Concert by Dr Sunder and Smt.J.B.Keerthana

July 2, 2026
Physical Intelligence to Shape India’s Future

Physical Intelligence to Shape India’s Future

July 2, 2026
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವರ್ಷಕ್ಕೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆಯ ಅಗತ್ಯವಿದೆಯೇ?

ಮೆಡಿಕಲ್ ಚೆಕ್’ಅಪ್, ಟ್ರೀಟ್’ಮೆಂಟ್ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ

kalpa News by kalpa News
February 14, 2020
in Special Articles
0
ವರ್ಷಕ್ಕೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆಯ ಅಗತ್ಯವಿದೆಯೇ?
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಎಮರ್ಜೆನ್ಸಿ ವಾರ್ಡ್‌ಗೆ ತೀವ್ರ ಎದೆ ನೋವು ಎಂದು ಕರೆತರಲ್ಪಟ್ಟ ವ್ಯಕ್ತಿಗೆ, ಹೃದಯಾಘಾತವಾಗಿದೆ ಎಂದು ವೈದ್ಯರು ನಿರ್ಧರಿಸಿದರು. ಆ ವ್ಯಕ್ತಿ ಅವನ ಜೊತೆಯವರದ್ದೆಲ್ಲಾ ಒಂದೆ ಪ್ರಶ್ನೆ! ಮೊನ್ನೆ, ಮೊನ್ನೆ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಅವರಿಗೆ ಕಂಪ್ಲೀಟ್ – ಫುಲ್ ಬಾಡಿ ಚೆಕ್ ಅಪ್ ಆಗಿದೆ, ಎಲ್ಲ ನಾರ್ಮಲ್ ಇತ್ತು. ಈಗ ಹೃದಯಾಘಾತ ಎಲ್ಲಿಂದ? ನಂಬುವುದೆಂತು? ಈ ಪರಿಸ್ಥಿತಿಯಲ್ಲಿ ವೈದ್ಯರು ಏನು ಮಾಡಬೇಕು? ಅಂತು ಇಂತು ಎಲ್ಲ ವೈದ್ಯಕೀಯ ದಾಖಲೆಗಳ ಮಹಜರು ನಡೆದು, ಇನ್ನೊಂದೆರಡು ಹಿರಿಯ ವೈದ್ಯರ ಉಪಸ್ಥಿತಿಯಲ್ಲಿ- ಅಂತು ಆ ವ್ಯಕ್ತಿಯ ಹೃದಯಾಘಾತಕ್ಕೆ ಚಿಕಿತ್ಸೆ ನಡೆದು, ಎಲ್ಲ ಸುಸೂತ್ರವಾಯಿತೆನ್ನಿ.

ಇಂದು ಈ ತರಹದ ಸಂಗತಿಗಳು ವಾಸ್ತವ. ಎದೆ ನೋವು ಬಂದವರಿಗೆಲ್ಲ ಹೃದಯವಿರುವುದು ನಿಜವಾದರೂ, ಹೃದಯಾಘಾತ ಖಂಡಿತ ಆಗಬೇಕೆಂದಿಲ್ಲ. ಮೊನ್ನೆ ನಾರ್ಮಲ್ ಇದ್ದ ಹೃದಯ ಇಂದು ಆಘಾತಕ್ಕೆ ಒಳಗಾಗಬಹುದು. ಅದರೆ ಇಂದಿನ ಸಂದರ್ಭದಲ್ಲಿ ಅದನ್ನು ಒಪ್ಪಿಕೊಳ್ಳಲು ಆಗದ ಸ್ಥಿತಿ ಯಾಕೆ?

ಮೊನ್ನೆ ನಡೆದ ಕಂಪ್ಲೀಟ್ ಚೆಕ್ ಅಪ್’ನಿಂದಲೇ ಅಥವಾ ವೈದ್ಯರ ಮೇಲೆ ಕಡಿಮೆಯಾಗುತ್ತಿರುವ ವಿಶ್ವಾಸದಿಂದಲೇ ಯಾವುದೇ ತೀವ್ರ ಕಾಯಿಲೆಯನ್ನು ಯಾರು ಬಯಸುವುದಿಲ್ಲ, ಮೊದಲ ಬಾರಿಗೆ ಒಪ್ಪಿಕೊಳ್ಳುವ ಮನಃಸ್ಥಿತಿ ಸಹ ಅಪೇಕ್ಷಣೀಯವಲ್ಲ. ನಿರಾಕರಣೆ ಅಲ್ಲಿನ ಸಹಜ ಮನಃಸ್ಥಿತಿ. ಈ ನಿರಾಕರಣೆಗೆ ಒಗ್ಗರಣೆ ಬೀಳುತ್ತಿರುವುದು, ಈ ಕಂಪ್ಲೀಟ್- ಚೆಕ್’ಅಪ್’ಗಳಿಂದ. ಹಾಗಾದಲ್ಲಿ ಮೊನ್ನೆಗೂ, ಇಂದಿಗೂ ತಿರುವು ಮುರುವಾಗುವ ಪರಿಸ್ಥಿತಿಯಲ್ಲಿ ಈ ಚೆಕ್’ಅಪ್’ಗಳ ಅವಶ್ಯಕತೆ ಏನು? ವೈದ್ಯಕೀಯವಾಗಿ ಅವುಗಳ ಸ್ಥಾನವೇನು?

2013ರ ಕೊನೆಯಲ್ಲಿ ಅಮೆರಿಕಾದಲ್ಲಿ ನಡೆದ ಬೆಳವಣಿಗೆಯೊಂದನ್ನು ನಾವು ಇಲ್ಲಿ ನೋಡಬೇಕು. 17 ವೈದ್ಯರ ಸಂಘಟನೆಗಳು ಒಟ್ಟಾಗಿ, 90 ವೈದ್ಯಕೀಯ ಪರೀಕ್ಷೆಗಳನ್ನು ಅನಗತ್ಯ, ಅತಿಯಾದ ಬಳಕೆ (Unnecessary, over use) ಎಂದು ಪಟ್ಟಿ ಮಾಡಿವೆ. ಇಂದು ಈ ಅಭಿಯಾನ (www.choosingwisely.org) ಬೆಳೆಯುತ್ತಿದ್ದು ಮತ್ತಷ್ಟು ವೈದ್ಯ ಸಂಘಟನೆಗಳು ಸೇರುತ್ತಿವೆ. ರೋಗ ಲಕ್ಷಣವೇ ಇಲ್ಲದ, ರೋಗಕ್ಕೆ ತುತ್ತಾಗಬಹುದಾದ ಯಾವುದೆ ರಿಸ್ಕ್‌ ಅಂಶಗಳಿಲ್ಲದ, ಆರೋಗ್ಯವಂತರ ಮೇಲೆ ಈ ಎಲ್ಲ ಪರೀಕ್ಷೆಗಳನ್ನು ನಡೆಸುವುದನ್ನು ಸೂಕ್ತ ಪರಿಶೀಲನೆಗೊಳಪಡಿಸಲು ನಿರ್ಧರಿಸಿವೆ. ಬಂದವರಿಗೆಲ್ಲ ಒಂದಿಷ್ಟು ಟೆಸ್ಟ್‌, ಒಂದು ಫೈಲ್, ಕಾಯಿಲೆ ಹೆಸರಿಡುವುದು, ಅದಕ್ಕೊಂದಿಷ್ಟು ಮಾತ್ರೆ, ಚಿಕಿತ್ಸೆ ಕ್ರಮಗಳು. ಬರದವರನ್ನೂ ಬರುವಂತೆ ಮಾಡುವ ಇಂದಿನ ವೈದ್ಯಕೀಯ ನಡೆಗಳ ಬಗ್ಗೆ ಇದು ಅಂಕುಶ ತರಬಹುದೆ? ಇಂದು ನಡೆಯುತ್ತಿರುವ ರೋಗ ಬಿತ್ತನೆ ಕಾಯಕಕ್ಕೆ ಸೂಕ್ತ ಚಿಕಿತ್ಸೆ ಸಿಗಬಹುದೆ? ಯಾವುದೇ ಪರೀಕ್ಷೆಗೂ, ಚಿಕಿತ್ಸಾ ಕ್ರಮಕ್ಕೂ ಸೂಕ್ತ ಮಾರ್ಗದರ್ಶಿ ಸೂತ್ರಗಳ ಅಳವಡಿಕೆಬೇಕು. ಈ ದಿಸೆಯಲ್ಲಿ ಜಾಗೃತಿ ಬೇಕು.

ಆರೋಗ್ಯವನ್ನು ಕೊಳ್ಳಲು ಇಂದು ಎಲ್ಲರು ಓಡುತ್ತಿದ್ದಾರೆ. ವರ್ಷಕ್ಕೊಮ್ಮೆ ಬೇಕಿರಲಿ, ಇಲ್ಲದಿರಲಿ ಚೆಕ್’ಅಪ್’ಗಳು ನಡೆಯುತ್ತಿವೆ. ಆಯಾ ವೃತ್ತಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು, ಅವರ ಸಂಘಗಳು ಚೆಕ್’ಅಪ್ ಆಯೋಜಿಸುತ್ತಿವೆ. ಆಸ್ಪತ್ರೆಗಳೊಂದಿಗೆ ಟೈ ಅಪ್ ಆಗಿವೆ. ಅವುಗಳಿಗೆ ಪಬ್ಲಿಸಿಟಿ ಕೂಡ ಬಹಳ. ವಿವಿಧ ಸ್ಕೀಂಗಳಿವೆ, ಕಾರ್ಡುಗಳಿವೆ, ಇನ್ಸುರೆನ್ಸ್‌’ಗಳಿವೆ. ಅವರನ್ನು ಬರಮಾಡಿಕೊಂಡು, ಕಾಯುತ್ತಿರುವ ವ್ಯವಸ್ಥೆ ಇದೆ. ಒಂದು ಉದ್ಯಮದ ಎಲ್ಲ ಉದ್ಯೋಗಿಗಳಿಗೆ ಈ ಚೆಕ್’ಅಪ್’ಗಳಿಂದ ಆಗುವ ವೆಚ್ಚವೇನು? ಅವರ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ರೋಗಕ್ಕೆ ಟೆಸ್ಟ್‌ ನಡೆಯುತ್ತಿದೆಯೇ? ಅಥವಾ ಪೂರ್ವ ನಿರ್ಧರಿತ ಪರೀಕ್ಷೆಗಳು ಮಾತ್ರ ನಡೆದು, ಕೆಲವು ರೋಗಗಳ ಸರ್ಟಿಫಿಕೇಟ್ ಸಿಗುತ್ತಿದೆಯೇ? ಉದಾಹರಣೆಗೆ ಉದ್ಯೋಗಿ ಮಧುಮೇಹಿಯಾಗಿದ್ದಲ್ಲಿ, ಅದಕ್ಕೆ ಬೇಕಾದ ಪರೀಕ್ಷೆಗಳು ಅಲ್ಲಿರುವುದಿಲ್ಲವಲ್ಲ! ಹೆಚ್ಚಿನ ಸಂದರ್ಭಗಳಲ್ಲಿ ಟೆಸ್ಟ್‌ ಆದ ನಂತರ ವ್ಯಕ್ತಿ/ ರೋಗಿ, ವೈದ್ಯರನ್ನು ನೋಡುವುದು, ಮೊದಲು ಭೇಟಿ, ನಂತರ ಟೆಸ್ಟ್‌ ಅಲ್ಲ. ಆ ಫಲಿತಾಂಶಗಳಲ್ಲಿ ಸಿಗುವುದು, ಅವರವರ ಸ್ಪೆಷಾಲಿಟಿ ಹುಡುಕಾಟ- ಲಾಭ ಮಾತ್ರ.

ವೈದ್ಯಕೀಯ ತಂತ್ರಜ್ಞಾನ ಬೆಳೆಯುವುದು, ರೋಗಗಳ ಬಗೆಗಿನ ಹೊಸ ತಿಳುವಳಿಕೆಗಳು, ಚಿಕಿತ್ಸಾಕ್ರಮಗಳು ಖಂಡಿತ ಸ್ವಾಗತಾರ್ಹ, ಅವುಗಳ ಬಳಕೆ, ಯಾರಿಗೆ, ಎಷ್ಟು, ಯಾವಾಗ ಎಂದು, ಪರಿಶೀಲನೆ ಅವಶ್ಯಕ. ಈ ದಿಸೆಯಲ್ಲಿ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಂಡು, ರೋಗಿಗೆ ಅಗತ್ಯ ಚಿಕಿತ್ಸೆಯ ಲಭ್ಯತೆಯ ಬಗ್ಗೆ ವಿಶ್ವಾಸ ಮೂಡಿಸುವ ಜವಾಬ್ದಾರಿ ಇಂದಿನ ಅಗತ್ಯ.

ವ್ಯಕ್ತಿ ತನಗಿರುವ ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ಹಿನ್ನೆಲೆ ಇತ್ಯಾದಿ ವೈದ್ಯಕೀಯ ಮಾನದಂಡಗಳ ಮೇಲೆ ಪರೀಕ್ಷೆಗೊಳಪಡಬೇಕು. ಅವುಗಳ ಸಾಧಕ, ಬಾಧಕಗಳ ಅರಿವು ಹೊಂದಬೇಕು. ವೈದ್ಯರೊಡನೆ ಚರ್ಚಿಸಿ ಸೂಕ್ತ ಪರೀಕ್ಷೆಗಳನ್ನು ಮಾತ್ರ ನಡೆಸಬೇಕು, ನಂತರ ಸೂಕ್ತ ಚಿಕಿತ್ಸೆಯ ಪ್ರಶ್ನೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ, ಸೂಕ್ತ ವೈದ್ಯಕೀಯ ಸಲಹೆಯಿಲ್ಲದೆ ಆರೋಗ್ಯವಂತನ ಮೇಲೆ ನಡೆಯುವ ಎಲ್ಲ ರೀತಿಯ screening ಪ್ರೋಗ್ರಾಂಗಳು, ಮೆಡಿಕಲ್ ಹುಡುಕಾಟಗಳು ಆಧಾರ ರಹಿತ.

ಸಲಹಾ ವೈದ್ಯರು
ಶ್ರೀಲಕ್ಷ್ಮೀ ನರ್ಸಿಂಗ್ ಹೋಂ
ಶಿವಮೊಗ್ಗ

Get in Touch With Us info@kalpa.news Whatsapp: 9481252093

Tags: DoctorDr RaveeshGeneral Health CheckupHealth Article in KannadaHealth checksHeart AttackhospitalKannada News WebsiteLatestNewsKannadaMedical ArticleShivamoggaSpecial Articleಆರೋಗ್ಯ ತಪಾಸಣೆಆಸ್ಪತ್ರೆವೈದ್ಯಕೀಯ ಪರೀಕ್ಷೆಶಿವಮೊಗ್ಗಹೃದಯಾಘಾತ
Share212Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಮ್ ಹುಡ್ಗ.. ನನ್ ಗಂಡ.. ಪ್ರೀತಿಯ ಗೂಡಲ್ಲಿ ಹಕ್ಕಿಗಿಂತಲೂ ಹೆಚ್ಚು ಜೋಪಾನ ಮಾಡುವ ರಾಜಕುಮಾರ

Next Post

ಫೆ.25ರಿಂದ ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆ: ಅದ್ದೂರಿ ಸಿದ್ಧತೆ, ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮ

kalpa News

kalpa News

Next Post
ಫೆ.25ರಿಂದ ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆ: ಅದ್ದೂರಿ ಸಿದ್ಧತೆ, ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮ

ಫೆ.25ರಿಂದ ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆ: ಅದ್ದೂರಿ ಸಿದ್ಧತೆ, ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮ

Leave a Reply Cancel reply

Your email address will not be published. Required fields are marked *

No Result
View All Result
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth
English Articles

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

by kalpa News
July 2, 2026
0

Kalpa Media House  |  Mumbai | Q1 FY27 sales in the domestic & international markets stood at 1,08,488 units, compared...

Read moreDetails
ABB Innovation Center (AIC) brings together 1,000+ innovators from 37 countries to accelerate industrial AI

ABB Innovation Center (AIC) brings together 1,000+ innovators from 37 countries to accelerate industrial AI

July 2, 2026
Memorable Concert by Dr Sunder and Smt.J.B.Keerthana

Memorable Concert by Dr Sunder and Smt.J.B.Keerthana

July 2, 2026
Physical Intelligence to Shape India’s Future

Physical Intelligence to Shape India’s Future

July 2, 2026
India marks the beginning of the Physical Intelligence era

MEIL-Analog Pact Ushers in AI-Driven Future

July 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!