ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಟಿಎಸ್’ಎಎಲ್ ವರ್ಲ್ಡ್ ಕಲ್ಚರ್ ಅಂಡ್ ಆರ್ಟ್ಸ್ ಸೆಂಟರ್’ನ ಡಾ. ರಶ್ಮಿ ವಿಜಯ್ ಹಾಗೂ ಅವರ ನೃತ್ಯ ತಂಡ ಭರತನಾಟ್ಯ #Bharatanatyam ಪ್ರದರ್ಶನದಲ್ಲಿ ವಿಶ್ವ ದಾಖಲೆ ಬರೆಯುವ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದೆ.
ಅಡಿಮಾ ಕಲ್ಚರಲ್ ಸೆಂಟರ್’ನಲ್ಲಿ ಟಿಎಸ್’ಎಎಲ್ ವರ್ಲ್ಡ್ ಕಲ್ಚರ್ ಅಂಡ್ ಆರ್ಟ್ಸ್ ಸೆಂಟರ್ ವತಿಯಿಂದ ಇತ್ತೀಚೆಗೆ ಡಾ.ರಶ್ಮಿ ವಿಜಯ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ನೃತ್ಯ ಪ್ರದರ್ಶನದಲ್ಲಿ 65 ನೃತ್ಯಗಾರರು ಅತ್ಯಂತ ಧೀರ್ಘ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ವಿಶ್ವದಾಖಲೆ #WorldRecord ನಿರ್ಮಿಸಿದ್ದಾರೆ.
ಈ ಮಹತ್ವದ ಸಾಧನೆಯನ್ನು ವಿಶ್ವ ವೈಡ್ ಬುಕ್ ಆಫ್ ರೆಕಾರ್ಡ್ಸ್ ಅಧಿಕೃತವಾಗಿ ಗುರುತಿಸಿ, ಈ ಕಲಾವಿದರಿಗೆ ಅಧಿಕೃತ ವಿಶ್ವ ದಾಖಲೆ ಪ್ರಮಾಣಪತ್ರ ಪ್ರದಾನ ಮಾಡಿದೆ.
ಈ ಕುರಿತಂತೆ ಮಾತನಾಡಿರುವ ಟಿಎಸ್’ಎಎಲ್ ವರ್ಲ್ಡ್ ಕಲ್ಚರ್ ಅಂಡ್ ಆರ್ಟ್ಸ್ ಸೆಂಟರ್ ಸಂಸ್ಥಾಪಕಿ, ನಿರ್ದೇಶಕಿ ಡಾ. ರಶ್ಮಿ ವಿಜಯ್, ಈ ಸಾಧನೆ ಕೇವಲ ಒಂದು ದಾಖಲೆ ಮಾತ್ರವಲ್ಲ – ಇದು ಭಾರತದ ಶ್ರೀಮಂತ ಶಾಸ್ತ್ರೀಯ ಪರಂಪರೆಯ ಮತ್ತು ನಮ್ಮ ಕಲಾವಿದರ ಅಚಲ ಆತ್ಮಸ್ಫೂರ್ತಿಯ ಉತ್ಸವವಾಗಿದೆ ಎಂದಿದ್ದಾರೆ.
ಇನ್ನು, ಈ ಯಶಸ್ಸನ್ನು ತಮ್ಮ ಹೃದಯ ಮತ್ತು ಆತ್ಮವನ್ನು ಅರ್ಪಿಸಿದ ಪ್ರತಿಯೊಬ್ಬ ನೃತ್ಯಗಾರರಿಗೂ ನಾವು ಅರ್ಪಿಸುತ್ತೇವೆ. ಈ ಸಾಧನೆ ಎಲ್ಲ ಕಲಾವಿದರ ನಿಷ್ಠೆ, ಶಿಸ್ತು ಮತ್ತು ಕಲಾತ್ಮಕ ಶ್ರೇಷ್ಠತೆಗೆ ನಿಜವಾದ ಗೌರವವಾಗಿದೆ. ಸಾಂಸ್ಕೃತಿಕ ಹಾಗೂ ಕಲಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪತ್ರಿಕಾ ಮತ್ತು ಮಾಧ್ಯಮ ಕ್ಷೇತ್ರದ ಎಲ್ಲರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















