ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈದ್ ಮಿಲಾದ್ ಹಬ್ಬದ ಮೆರವಣಿಗೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 10ರಂದು ನಗರದ ಹಲವು ಕಡೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಹಾಗೂ ನಿಲುಗಡೆ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಸೂಚನೆ ಹೊರಡಿಸಿದ್ದು, ಈದ್ ಮಿಲಾದ್ ಮೆರವಣಿಗೆ ಗಾಂಧಿ ಬಜಾರ್ ಜಾಮಿಯಾ ಮಸೀದಿಯಿಂದ ಆರಂಭಗೊಂಡು ಗಾಂಧಿ ಬಜಾರ್ 2ನೆಯ ಕ್ರಾಸ್, ಬಿಎಚ್ ರಸ್ತೆ, ಮೀನಾಕ್ಷಿ ಭವನ, ಟ್ಯಾಂಕ್ ಬಾಂಡ್ ರಸ್ತೆ, ಬಾಪೂಜಿ ನಗರ ಮುಖ್ಯರಸ್ತೆ, ಟ್ಯಾಂಕ್ ಮೊಹಲ್ಲಾ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತ, ಗೋಪಿ ಸರ್ಕಲ್, ನೆಹರೂ ರಸ್ತೆ ಮುಖಾಂತರವಾಗಿ ಅಮೀರ್ ಅಹಮದ್ ವೃತ್ತ, ಬಿಎಚ್ ರಸ್ತೆ, ಅಶೋಕ ಸರ್ಕಲ್, ಎನ್’ಟಿ ರಸ್ತೆ, ಗುರುದೇವ ರಸ್ತೆ, ಕ್ಲಾರ್ಕ್ ಪೇಟೆ, ನೂರಾನಿ ಮಸೀದಿ, ಕೆಆರ್ ಪುರಂ ಮಾರ್ಗವಾಗಿ ಅಮೀರ್ ಅಹಮದ್ ಸರ್ಕಲ್ ತಲುಪಲಿದೆ.
ಯಾವ ಮಾರ್ಗ ಬದಲಾವಣೆ?
- ಮೆರವಣಿಗೆ ಸಾಗುವ ಮಾರ್ಗದಲ್ಲಿ ಹಾಗೂ ಮಾರ್ಗದ ಸುತ್ತ 100 ಮೀಟರ್ ಅಂತರದಲ್ಲಿ ಎಲ್ಲ ವಾಹನ ಸಂಚಾರ ನಿಷೇಧ
- ಭದ್ರಾವತಿ, ಬೆಂಗಳೂರು ಕಡೆಯಿಂದ ಬರುವ ಎಲ್ಲ ವಾಹನ, ಎಲ್ಲ ಬಸ್’ಗಳು, ಬೈಪಾಸ್ ರಸ್ತೆ ಮುಖಾಂತರ ಸಾಗಬೇಕು
- ಚಿತ್ರದುರ್ಗ, ಹೊಳೆಹೊನ್ನೂರು ಕಡೆಯಿಂದ ಬರುವ ಹಾಗೂ ಹೋಗುವ ಎಲ್ಲ ಭಾರೀ ವಾಹನ ಮತ್ತು ಬಸ್’ಗಳು ಎಂಆರ್’ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗಬೇಕು
- ಹೊನ್ನಾಳಿ, ದಾವಣಗೆರೆಯಿಂದ ಬರುವ ಎಲ್ಲ ಭಾರೀ ವಾಹನ ಮತ್ತು ಬಸ್’ಗಳು ಸಂಗೊಳ್ಳಿರಾಯಣ್ಣ ವೃತ್ತದಿಂದ, ಶಂಕರಮಠ ರಸ್ತೆ, ಹೊಳೆ ಬಸ್ ನಿಲ್ದಾಣ, ಎಂಆರ್’ಎಸ್ ವೃತ್ತ, ಬೈಪಾಸ್ ರಸ್ತೆ ಮಾರ್ಗವಾಗಿ ಸಾಗಬೇಕು.
- ಲಷ್ಕರ್ ಮೊಹಲ್ಲಾ ರಸ್ತೆಯಲ್ಲಿ ಎಲ್ಲ ವಾಹನಗಳ ಸಂಚಾರ ನಿಷೇಧ
- ಕೆಎಸ್’ಆರ್’ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಹರಿಹರ, ದಾವಣಗೆರೆಗೆ ಹೋಗುವ ಎಲ್ಲಾ ಬಸ್’ಗಳು ಮತ್ತು ಭಾರೀ ವಾಹನಗಳು ಬೈಪಾಸ್ ಮುಖಾಂತರವಾಗಿ ಎಂಆರ್’ಎಸ್ ವೃತ್ತ, ವಿದ್ಯಾನಗರ, ಶಂಕರಮಠ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತದ ಮುಖಾಂತರ ಸಾಗಬೇಕು
- ಕೆಎಸ್’ಆರ್’ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆ ಮುಖಾಂತರ ಎಂಆರ್’ಎಸ್ ವೃತ್ತದ ಕಡೆ ಹೋಗಬೇಕು
- ಎಲ್ಲ ಮಾರ್ಗಗಳಲ್ಲಿ ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಆಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳಿಗೆ ಅವಕಾಶವಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post