ನವದೆಹಲಿ: ಇವಿಎಂ ಮಷೀನ್’ಗಳು ಹ್ಯಾಕ್ ಆಗಿವೆ ಎಂದು ವ್ಯಾಪಕ ಆರೋಪಗಳು ಕೇಳಬಂದ ಹಿನ್ನೆಲೆಯಲ್ಲಿ ಮಹತ್ವದ ಕ್ರಮಕೈಗೊಂಡಿರುವ ಕೇಂದ್ರ ಚುನಾವಣಾ ಆಯೋಗ ಪೊಲೀಸ್ ದೂರನ್ನು ದಾಖಲಿಸಿದ್ದು, ತನಿಖೆ ನಡೆಸುವಂತೆ ಕೋರಿದೆ.
ಈ ಕುರಿತಂತೆ ನವದೆಹಲಿ ಪೊಲೀಸರಿಗೆ ದೂರು ದಾಖಲಿಸಿರುವ ಚುನಾವನಾ ಆಯೋಗ, ಆರೋಪದ ವಿಚಾರದಲ್ಲಿ ಸಮಗ್ರ ತನಿಖೆ ನಡೆಸುವಂತೆ ಕೇಳಿದೆ.
ಇವಿಎಂ ಮಷೀನ್ ಹ್ಯಾಕ್ ಆಗಿದೆ ಎಂದು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಆರೋಪ ಮಾಡಿದ್ದವು. ಆದರೆ, ಹಲವು ಬಾರಿ ಆಯೋಗ ಈ ಆರೋಪವನ್ನು ತಳ್ಳಿಹಾಕಿತ್ತು. ಆದರೆ, ಪದೇ ಪದೇ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಆಯೋಗ ಪೊಲೀಸ್ ದೂರು ದಾಖಲಿಸಿದೆ.
ಅಲ್ಲದೇ, ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪೋಲ್ ಪ್ಯಾನಲ್, ಕೆಲವು ಸ್ವಯಂಘೋಷಿತ ಸೈಬರ್ ಎಕ್ಸ್’ಪರ್ಟ್’ಗಳು ಇಂತಹ ಹೇಳಿಕೆಗಳನ್ನು ನೀಡಿದ್ದು, ಇದು ಭಾರತೀಯ ದಂಡ ಸಂಹಿತೆಯ ಉಲ್ಲಂಘನೆಯಾಗಿದೆ ಎಂದಿದೆ.
Discussion about this post