ಬೆಂಗಳೂರು: ದೇಶದಾದ್ಯಂತ ಹೊಸ ಟ್ರೆಂಡ್ ಸೃಷ್ಠಿಸಿ ಇಡಿಯ ಭಾರತೀಯ ಚಿತ್ರರಂಗ ಸ್ಯಾಂಡಲ್’ವುಡ್’ನತ್ತ ತಿರುಗಿನೋಡುವಂತೆ ದಾಖಲೆ ನಿರ್ಮಿಸಿರುವ ಕೆಜಿಎಫ್ ಚಾಪ್ಟರ್ 1 ಚಿತ್ರತಂಡ, ಈಗ ಯಾವುದೇ ರೀತಿಯ ಸದ್ದು-ಸುದ್ದಿಯಿಲ್ಲದೇ ಕೆಜಿಎಫ್ ಚಾಪ್ಟರ್ 2 ಗೆ ಮುಹೂರ್ತ ನಡೆಸಿದೆ.
ವಿಜಯನಗರದ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಸರಳವಾಗಿ ಪೂಜೆ ನೆರವೇರಿಸಿರುವ ಚಿತ್ರತಂಡ ಕೆಜಿಎಫ್ ಚಾಪ್ಟರ್ 2ಗೆ ಚಾಲನೆ ನೀಡಿದ್ದು, ಚಿತ್ರರಂಗದಲ್ಲಿ ಮತ್ತೆ ಸದ್ದು ಮಾಡಲು ಹೆಜ್ಜೆಯಿಡಲು ಆರಂಭಿಸಿದೆ.
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮತ್ತೆ ತೆರೆಗೆ ಬರಲಿರುವ ಚಾಪ್ಟರ್ 2 ಚಿತ್ರದ ಸರಳ ಮುಹೂರ್ತದ ವೇಳೆ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕರು ಹಾಗೂ ಚಿತ್ರತಂಡದ ಪ್ರಮುಖರಲ್ಲಿ ಕೆಲವರು ಮಾತ್ರ ಉಪಸ್ಥಿತರಿದ್ದರು.
ಕಳೆದ ಡಿಸೆಂಬರ್’ನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ಇಡಿಯ ದೇಶದಲ್ಲಿ ಸುದ್ದಿ ಮಾಡಿದ್ದು ಮಾತ್ರವಲ್ಲದೇ ವಿಶ್ವದ ಹಲವು ಕಡೆಗಳಲ್ಲೂ ಸಹ ಬಿಡುಗಡೆಯಾಗಿತ್ತು. ಬಾಲಿವುಡ್’ನ ಘಟಾನುಘಟಿಗಳು ರಾಕಿ ಭಾಯ್ ಅಬ್ಬರ ಕಂಡು ಸಲಾಂ ಹೊಡೆದಿದ್ದರು.
Discussion about this post