ಜಪ
ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ದರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ.
ಜಪ ಎಂಬ ಪದವು ಜಪಿಸು ಎನ್ನುವ ಪದದಿಂದ ಮೂಡಿ ಬಂದಿದೆ. ಜಪ ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ.
ಜ ಕಾರೋ ಜನ್ಮ ವಿಚ್ಚೇದನ
ಪ ಕಾರೋ ಪಾಪನಾಶಕ
ತಸ್ಮಾಜ್ಯಪ ಇತಿಪ್ರೊಕ್ತೋ
ಜನ್ಮ ಪಾಪ ವಿನಾಶಕ
ಜಕಾರವು ಜನ್ಮ ವಿನಾಶಕವಾದದ್ದೆಂದೂ
ಪ ಕಾರವು ಪಾಪಗಳನ್ನು ನಾಶ ಮಾಡುವುದೆಂದೂ,
ಜನ್ಮ ಪವಿತ್ರವಾಗಬೇಕಾದರೆ ಜಪ ಅವ್ಶಕವೆಂದಾಗುತ್ತದೆ.
ಜಪ ಅಂದರೇನು?
ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸನಲ್ಲಾಗಲಿ ಧ್ಯಾನಿಸುವುದೇ ಜಪ.
ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೆ ಕೇಳಿಸುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ.
ಜಪಿಸುವ ಮಂತ್ರ ಬೀಜಮಂತ್ರವಾಗಲೀ, ತಾರಕ ಮಂತ್ರವಾಗಲೀ ಅಥವಾ ಇಷ್ಟ ದೇವತಾ ಮಂತ್ರವಾಗಲೀ ಗುರುಗಳಿಂದ ಉಪದೇಶ ಪಡಯಬೇಕೆಂಬ ನಿಯಮವಿದೆ.
ಜಪದಲ್ಲಿ ಮೂರು ವಿಧಾನಗಳಿವೆ:
ವಾಚಿಕ: ಬೇರೆಯವರ ಕಿವಿಗೆ ಕೇಳಿಸುವಂತೆ ಪಠಿಸುವುದು
ಉಪಾಂಶು: ತುಟಿಗಳು ಅಲುಗಾಡುತ್ತಿದ್ದರೂ ಶಬ್ದವು ಹೊರಗೆ ಕೇಳಿಸದಂತೆ ಜಪ ಮಾಡುವುದು
ಮಾನಸಿಕ: ಮನಸ್ಸಿನಲ್ಲಿ ಧ್ಯಾನಿಸುವುದು
ವಾಚಿಕ ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು ಉಪಾಂಶು, ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, ಮಾನಸಿಕ ಜಪ ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ.
ಜಪವನ್ನು ಉಪದೇಶಿಸುವವನನ್ನು ಗುರು ಎಂದು ಕರೆಯಲಾಗುತ್ತದೆ. ಗುರು ಎಂಬ ಶಬ್ದಕ್ಕೆ ಅರ್ಥ.
ಗು ಎಂದರೆ ಕತ್ತಲು ಅಥವಾ ಅಜ್ಞಾನ
ರು ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ. ಗುರು ಉಪದೇಶ ಮಾಡುವುದರ ಜೊತೆಗೆ ಆಶೀರ್ವಾದವನ್ನೂ ಮಾಡುತ್ತಾನೆ.
ನಾಳೆ ಓದಿ: ಜಪದ ವಿಧಗಳಾವುವು?
Discussion about this post