No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Tuesday, July 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಸುಂದರ ಬದುಕಿಗೆ ಚೌಕಟ್ಟು ಅಗತ್ಯ: ರಾಘವೇಶ್ವರ ಶ್ರೀ

kalpa News by kalpa News
September 5, 2024
in ಉತ್ತರ ಕನ್ನಡ
0
ಮಾತಾಪಿತೃಗಳನ್ನು ದೈವಸಮಾನರಾಗಿ ಕಾಣಬೇಕು: ರಾಘವೇಶ್ವರ ಶ್ರೀ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಇಡೀ ಶಿಷ್ಯವರ್ಗ ಒಂದು ಚೌಕಟ್ಟಿನಲ್ಲಿ ಬರಬೇಕು ಎನ್ನುವುದು ಶ್ರೀಮಠದ ಅಪೇಕ್ಷೆ. ಎಷ್ಟೇ ಸುಂದರ ಚಿತ್ರಕ್ಕೂ ಶೋಭೆ ಬರಬೇಕಾದರೆ ಆಕರ್ಷಕ ಚೌಕಟ್ಟು ಬೇಕು. ಅಂತೆಯೇ ಬದುಕು ಸುಂದರವಾಗಬೇಕಾದರೆ ಬದುಕಿಗೂ ಒಂದು ಚೌಕಟ್ಟು ಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ #Raghaveshwara Shri ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 46ನೇ ದಿನವಾದ ಬುಧವಾರ ಉಪ್ಪಿನಂಗಡಿ ಮಂಡಲದ ವೇಣೂರು, ಉಜಿರೆ, ಉರುವಾಲು, ಉಪ್ಪಿನಂಗಡಿ, ಕಬಕ ಮತ್ತು ಮಾಣಿ ವಲಯಗಳ ಭಕ್ತರ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿ, “ಮಠಕ್ಕೆ ಹೇಗೆ ನಿಗದಿತ ನೀತಿ, ಚೌಕಟ್ಟು ಇದೆಯೋ, ಶಿಷ್ಯರಿಗೂ ಇದು ಬೇಕು. ನಿರ್ದಿಷ್ಟ ಚೌಕಟ್ಟಿನ ಒಳಗೆ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು” ಎಂದರು.
ಉಪ್ಪಿನಂಗಡಿ ಭಾಗದ ಶಿಷ್ಯರು ಮಠದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಊಟಕ್ಕೆ ಉಪ್ಪು ಎಷ್ಟು ಮಹತ್ವದ್ದೋ ಹಾಗೆ ಉಪ್ಪಿನಂಗಡಿ ಮಠಕ್ಕೆ ಅಷ್ಟು ಮಹತ್ವದ್ದು. ಬದುಕಿನಲ್ಲಿ ಸಮತೋಲನ ತಪ್ಪದಂತೆ ಹೇಗಿರಬೇಕು ಎನ್ನುವುದನ್ನು ಪ್ರತಿನಿತ್ಯ ನೆನಪಿಸುವ ರಸ ಉಪ್ಪು; ಪದಾರ್ಥಕ್ಕೆ ಉಪ್ಪು ರುಚಿ ಕೊಡುವಂತೆ ಜೀವನದಲ್ಲಿ ಸಮತೋಲನ ಸಾಧಿಸಬೇಕು ಎನ್ನುವ ಪಾಠವನ್ನು ಇದು ಸದಾ ನೆನಪಿಸುತ್ತದೆ ಎಂದು ವಿವರಿಸಿದರು.

ಶ್ರೀಮಠದ ವಿಕಾಸದಲ್ಲಿ, ಅಭಿವೃದ್ಧಿ ಕಾರ್ಯದಲ್ಲಿ ಉಪ್ಪಿನಂಗಡಿ ಇಂಥದ್ದೇ ಪಾತ್ರ ವಹಿಸಿದೆ. ಸಂಪನ್ಮೂಲ ಮತ್ತು ಸಮಯಕ್ಕೆ ವಿಶೇಷ ಮಹತ್ವ ಇದೆ. ತಮ್ಮ ಅಮೂಲ್ಯ ಸಮಯ ಮತ್ತು ಸಂಪನ್ಮೂಲವನ್ನು ಮಠಕ್ಕಾಗಿ ನೀಡಿದ ಬಹಳಷ್ಟು ಶಿಷ್ಯರು ಈ ಭಾಗದಲ್ಲಿದ್ದಾರೆ. ಮಠ ಎನ್ನುವುದು ಎಲ್ಲರ ಮನೆ; ಇಡೀ ವರ್ಷ ಇಲ್ಲಿಗೆ ಶಿಷ್ಯರು ಬಂದಷ್ಟೂ ಸಂತೋಷ. ಹೆಚ್ಚು ಹೆಚ್ಚು ಮಠಕ್ಕೆ ಬಂದು ಸೇವೆ ಸಲ್ಲಿಸಿ ಎಂದು ಆಶಿಸಿದರು.
ವಿಶೇಷ ಕುಸುರಿ ಕೆಲಸದ ಕಲಾವಿದ ಕಾಷ್ಟಶಿಲ್ಪಿ ಕೊಂಕಣಾಜೆ ಶಂಕರ ನಾರಾಯಣ ಭಟ್ಟ ವಿಶೇಷತೆ ಇಂದು ಅನಾವರಣಗೊಂಡಿದೆ. ಕಾಷ್ಟಶಿಲ್ಪಕ್ಕೆ ಬೌದ್ಧಿಕ ತಂತ್ರಜ್ಞನಾಗಿ ಕಲಾತ್ಮಕ ಅಂಶಗಳನ್ನು ಸೇರಿಸುವ ಇವರ ಕಲೆ ಅಪೂರ್ವ. ಅವರದ್ದು ಮರದ ಕೆಲಸ ಮಾಡುವ ಚಿನ್ನದ ಕೈ. ಮರವನ್ನು ಕೆತ್ತುವ ಅಮರ ಕೈ ಇದು. ಶ್ರೀಮಠಕ್ಕೆ ತುಂಬಾ ನಿಷ್ಠೆಯಿಂದ ಇರುವ ಕಲಾಕುಟುಂಬದ ಸೇವೆ ಸಮಾಜಕ್ಕೆ ಇನ್ನಷ್ಟು ಲಭಿಸಲಿ ಎಂದು ಹಾರೈಸಿದರು.

ಒಂದು ವಸ್ತು ನಿಮ್ಮ ಕೈಗೆ ಬರುವಾಗ ಹೇಗಿತ್ತು ಅದು ನಂತರ ಅದು ಹೇಗೆ ಮಾರ್ಪಾಡಾಗುತ್ತದೆ ಎನ್ನುವುದು ಮುಖ್ಯ. ಕೊಂಕಣಾಜೆಯವರ ಕೈಗೆ ಸಿಕ್ಕಿದ ಮರದ ತುಂಡು ಅಪೂರ್ವ ಕಲಾಕೃತಿಯಾಗಿ ರೂಪುಗೊಳ್ಳುತ್ತದೆ ಎಂದು ಬಣ್ಣಿಸಿದರು.

http://kalpa.news/wp-content/uploads/2024/04/VID-20240426-WA0008.mp4

ಹಿರಿಯ ಗುರಿಕ್ಕಾರರಾದ ಮುದ್ರಜೆ ಗೋವಿಂದ ಭಟ್ ಇಂದಿನ ಅನಾವರಣ ನೆರವೇರಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಪದಾಧಿಕಾರಿಗಳಾದ ಹೇರಂಬ ಶಾಸ್ತ್ರಿ, ಈಶ್ವರಪ್ರಸಾದ್ ಕನ್ಯಾನ, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ವಿವಿವಿ ಪ್ರಾಂತ ಉಪಾಧ್ಯಕ್ಷ ಪರಮೇಶ್ವರ ಭಟ್, ವಿವಿವಿ ಮಂಡಲ ಅಧ್ಯಕ್ಷೆ ಶೈಲಜಾ ಕೆ.ಟಿ, ಕಾರ್ಯದರ್ಶಿ ಶ್ರೀಧರ ಭಟ್, ಚಾತುಮಾಸ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ಈಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaRaghaveshwara shriUttara Kannadaಗೋಕರ್ಣಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಸ್ವಾತಂತ್ರ್ಯ ವೀರ ಸಾವರ್ಕರ್

Next Post

ರೇಡಿಯೋ ಶಿವಮೊಗ್ಗ ಎಫ್‌ಎಂನಲ್ಲಿ ನಟ ಪ್ರಮೋದ್ ಶೆಟ್ಟಿ ಸಂವಾದ | ಸೆ.6ರಂದು ಪ್ರಸಾರ

kalpa News

kalpa News

Next Post
ರೇಡಿಯೋ ಶಿವಮೊಗ್ಗ ಎಫ್‌ಎಂನಲ್ಲಿ ನಟ ಪ್ರಮೋದ್ ಶೆಟ್ಟಿ ಸಂವಾದ | ಸೆ.6ರಂದು ಪ್ರಸಾರ

ರೇಡಿಯೋ ಶಿವಮೊಗ್ಗ ಎಫ್‌ಎಂನಲ್ಲಿ ನಟ ಪ್ರಮೋದ್ ಶೆಟ್ಟಿ ಸಂವಾದ | ಸೆ.6ರಂದು ಪ್ರಸಾರ

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL