ನವದೆಹಲಿ: ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಶ್ರೀರಾಮಚಂದ್ರಾಪುರ ಮಠವೇ ಮುಂದುವರೆಸಿಕೊಂಡು ಹೋಗಲು ಸುಪ್ರೀಂ ಕೋರ್ಟ್ ಇಂದು ಅಸ್ತು ಎಂದಿದೆ.
ಈ ಕುರಿತಂತೆ ಇಂದು ವಿಚಾರಣೆ ನಡೆಸಿದ ನ್ಯಾಯಪೀಠ, ಶ್ರೀಮಠದ ಅರ್ಜಿಯನ್ನು ಮಾನ್ಯ ಮಾಡಿರು. ರಾಜ್ಯ ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಮುಂದುವರಿಸುವಂತೆ ನ್ಯಾಯಪೀಠ ಸೂಚಿಸಿದೆ.
ಸೆಪ್ಟೆಂಬರ್ 10 ರ ನಂತರ ಡಿಸಿ ನೇತೃತ್ವದ ಸಮಿತಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ತಡೆಸಿಕ್ಕಿದ್ದು, ಸುಪ್ರೀಂ ಕೋರ್ಟಿನಲ್ಲಿ ತೀರ್ಮಾನ ಆಗುವವರೆಗೂ ದೇವಾಲಯದ ಆಡಳಿತವನ್ನು ಶ್ರೀಮಠವೇ ನಿರ್ವಹಿಸಲಿದೆ.
ಅಲ್ಲದೇ, ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿರುವ ನ್ಯಾಯಾಲಯ, ವಿಚಾರಣೆಯನ್ನು ಮುಂದೂಡಿದೆ.
ಇದಕ್ಕೂ ಮುನ್ನ ಏನಾಗಿತ್ತು?
ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಸರ್ಕಾರಕ್ಕೆ ವಹಿಸುವ ಕುರಿತು ರಾಜ್ಯ ಉಚ್ಚ ನ್ಯಾಯಾಲಯ ಕಳೆದ ಆ.10 ರಂದು ತೀರ್ಪು ನೀಡಿತ್ತು ಹಾಗೂ ಅದೇ ದಿನ ಮಧ್ಯಂತರ ಆದೇಶವನ್ನು ನೀಡಿ, ತೀರ್ಪಿನಲ್ಲಿ ಉಲ್ಲೇಖಿಸಿರುವ ಡಿಸಿ ನೇತೃತ್ವದ ಸಮಿತಿ ಸೆಪ್ಟೆಂಬರ್ 10 ನಂತರ ಕಾರ್ಯ ನಿರ್ವಹಿಸಲಿದೆ, ಸೆಪ್ಟೆಂಬರ್ 10 ವರೆಗೆ ಮಠವೇ ಆಡಳಿತವನ್ನು ಸಡೆಸಲಿದೆ ಎಂದು ಮಧ್ಯಂತರ ಆದೇಶದಲ್ಲಿ ಹೇಳಿತ್ತು.

















