ಹೌದು ನಯನಾ, ಮಂಗಳೂರು ಎಫ್‍ಎಂ ರೇಡಿಯೋ ಲೋಕದಲ್ಲಿ ಈ ಹೆಸರು ಕೇಳದವರು ಯಾರಿದ್ದಾರೆ… ಅಷ್ಟು ಫೇಮಸ್ ಈ ಆರ್‌ಜೆ.
ಇವರ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ ಬನ್ನಿ…
ಇವರ ಹೆಸರು ನಯನಾ ಯರುಕೋಣೆ ಚೀತನಮಕ್ಕಿ ವಿನಯಾ ಎನ್ ಶೆಟ್ಟಿ ಹಾಗೂ ನೆಲ್ಯಾಡಿ ವೀರಪ್ಪ ಶೆಟ್ರ ಮನೆ ನಾರಾಯಣ ಶೆಟ್ಟಿಯವರ ಪುತ್ರಿ.
ಸದಾನಂದ ಶೆಟ್ಟಿಯವರು ನಾವುಂದದಲ್ಲಿ ಪ್ರಾಥಮಿಕ, ಪಿಯು (ಸೈನ್ಸ್) ಶಿಕ್ಷಣವನ್ನು ನಾವುಂದದಲ್ಲಿ ಮುಗಿಸಿ ನಂತರ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಿಸ್ಟಿಂಕ್ಷನ್ ನಲ್ಲಿ ಬಿಸಿಎ ಪದವಿ ಪಡೆದು ಬೆಂಗಳೂರಿನಲ್ಲಿ ಎಂಬಿಎ HR (ಕಾಲೇಜಿಗೆ ಪ್ರಥಮ) ಪದವಿಯನ್ನು ಪಡೆದು HR Recruiter ಆಗಿ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಿದರು.
ಕಲಿಕೆಯಲ್ಲಿ ಹತ್ತನೆಯ ತರಗತಿಯವರೆಗೆ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡದ ಇವರು ಇಷ್ಟಲ್ಲದೆ, ಸಾಂಸ್ಕೃತಿಕ ಚಟುವಟಿಕೆಗಳು, ಬರವಣಿಗೆ, ಭಾಷಣ ಜೊತೆಗೆ ಆಟೋಟ ಸ್ಪರ್ಧೆಗಳಲ್ಲಿ ಸದಾ ಭಾಗವಹಿಸಿ ಅದೆಷ್ಟೋ ಬಹುಮಾನಗಳನ್ನು ಕಾಲೇಜು ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಬಾಚಿಕೊಂಡಿದ್ದಾರೆ.
ಮಂಗಳೂರಿಗೆ ತೆರಳಿದ ನಂತರ ಆಕಸ್ಮಿಕವಾಗಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ನ ಅಂಗಸಂಸ್ಥೆ ರೇಡಿಯೋ ಮಿರ್ಚಿಯಲ್ಲಿ, ಅದೆಷ್ಟೋ ಆಯ್ಕೆ ಪ್ರಕ್ರಿಯೆಗಳ ಮೂಲಕ ಅಪರೂಪದ ಹಾಗೆ ಅಷ್ಟೇ ಕಷ್ಟಕರವಾದ, ಕೆಲವರಿಗೆ ಮಾತ್ರವೇ ಸಿಗಬಹುದಾದ ಕೆಲಸವಾದ ಆರ್‌ಜೆ ಅಂದ್ರೆ ರೇಡಿಯೋ jockey ಆಗಿ ಆಯ್ಕೆ ಆಗುತ್ತಾರೆ.
ಒಂದೂವರೆ ವರ್ಷಗಳ ಅನುಭವ ಪಡೆದ ನಂತರ, ಅವರನ್ನು ಹುಡುಕಿಕೊಂಡು ಬಂದ ಆಫರ್ 93.5 ರೆಡ್ ಎಫ್‌ಎಮ್ ಡ್ರೈವ್ ಟೈಮ್ ಶೋ ಅಂದರೆ ಬೆಳಿಗ್ಗೆ ಏಳು ಘಂಟೆಯಿಂದ ಹನ್ನೆರಡು ಘಂಟೆಯವರೆಗಿನ ಪ್ರಸಿದ್ಧ ಕಾರ್ಯಕ್ರಮ ನಮಸ್ಕಾರ ಮಂಗಳೂರು.
ನಮಸ್ಕಾರ ಮಂಗಳೂರು 5 ಗಂಟೆಗಳ ಕಾರ್ಯಕ್ರಮವಾಗಿದ್ದು ಇದು ಮಾಹಿತಿ, ತಿಳಿವಳಿಕೆ, ಜನಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಎಫ್‍ಎಂ ರೇಡಿಯೋ ಇತಿಹಾಸದಲ್ಲಿ ಭಾರತದಲ್ಲಿಯೇ ಅತಿಹೆಚ್ಚಿನ ಅವಧಿಯ ರೇಡಿಯೋ ಕಾರ್ಯಕ್ರಮವಾಗಿದೆ.
ನವೀನ ಪರಿಕಲ್ಪನೆಗಳು, ಉತ್ತಮ ವಿಚಾರಗಳಿಂದ ನಮಸ್ಕಾರ ಮಂಗಳೂರು ಕರಾವಳಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಆರ್ ಜೆ ನಯನಾ ಅಂದ್ರೆ ಮಂಗಳೂರಿನ ಬೆಳಗು, ಬೆಳಗಿನ ಪಯಣ, ನಿಮ್ಮ ನಯನ, ನಾನ್ ನಯನ, ಕಣ್ಣಿನ ರಾಣಿ ಹೀಗೇ ಜನ ಬೇರೆ ಬೇರೆ ಹೆಸರಿನಿಂದ ಪ್ರೀತಿಯಿಂದ ಗುರುತಿಸುತಿದ್ದು, ಕುಂದಾಪುರದ ನಯನ ಈಗ ಕರಾವಳಿಯ ಪ್ರೀತಿಯ ಮನೆ ಮಗಳಾಗಿದ್ದಾಳೆ.
ತನ್ನ ಅದ್ಭುತ ಕಂಠ ಸಿರಿ, ಮೃದು ಮಾತು, ಧ್ವನಿಗಳ ಏರಿಳಿತದ ಮೇಲಿನ ಹಿಡಿತ ಹಾಗೆ ಕನ್ನಡ ಭಾಷಾ ಸಂಪತ್ತು, ನಿರರ್ಗಳ ಮಾತಿನ ಮೂಲಕ ಕೇವಲ ರೇಡಿಯೋದಲ್ಲಿ ಮಾತ್ರವಲ್ಲದೆ ನಿರೂಪಣೆಯ ಮೂಲಕವೂ ಜನ ಮನವನ್ನು ಗೆದ್ದಿದ್ದಾರೆ.
ದುಬೈನಲ್ಲೂ ಸೈ ಎನಿಸಿಕೊಂಡ ನಯನಾ
ದುಬೈನಲ್ಲಿ ನಡೆದ ನಮ್ಮ ಕುಂದಾಪುರ ಸ್ನೇಹ ಮಿಲನದಲ್ಲಿ ಎಸ್. ಜಾನಕಿ, ವಾಣಿ ಜಯರಾಮ್, ರಾಜೇಶ್ ಕೃಷ್ಣನ್ ಅವರ ಕಾರ್ಯಕ್ರಮಗಳ ನಿರೂಪಣೆಯ ಮೂಲಕ ಕರಾವಳಿಯಲ್ಲಿ ಮನೆಮಾತಾಗಿದ್ದಾರೆ. ಟಿವಿ ವಾಹಿನಿಯಲ್ಲೂ ಕೆಲವು ಕಾಲ ಕೆಲಸ ಮಾಡಿದ ಅನುಭವ ಇದ್ದು ಇದರ ಜೊತೆಗೆ ಕನ್ನಡದ ಒಂದು ಮೊಟ್ಟೆಯ ಕಥೆ ಚಿತ್ರ ಪಾತ್ರವೊಂದಕ್ಕೆ ಧ್ವನಿ ನೀಡಿದ್ದು, ರೇಡಿಯೋ ಜಾಹಿರಾತುಗಳು, ಡಾಕ್ಯುಮೆಂಟರಿ, ಕಿರು ಚಿತ್ರಗಳಿಗೆ ಕೂಡ ಧ್ವನಿಯಾಗಿದ್ದಾರೆ.
ಬರಹಗಾರ್ತಿಯೂ ಆಗಿರುವ ನಯನಾ ಅವರ ಪರಿಸರ ಹಾಗೂ ಜನಜಾಗೃತಿಗೆ ಸಂಬಂಧಿಸಿದ ಹಲವಾರು ಲೇಖನಗಳು ಈಗಾಗಲೇ ವಿಜಯವಾಣಿ, ವಿಶ್ವ ವಾಣಿ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಕಥೆ ಕವನ ಬರೆಯುವ ಅಭ್ಯಾಸವು ಇದ್ದು ಭಾವನಾತ್ಮಕ ಅಂಶಗಳ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಇವರು.
ಪ್ರತಿ ದಿನ ತನ್ನ ಕಾರ್ಯಕ್ರಮದ ಮೂಲಕ ಜನರಿಗೆ ಸ್ಪೂರ್ತಿ ಹಾಗೆ ಹಲವು ಜನಜಾಗೃತಿಗೆ ಸಂಬಂಧಿಸಿದ ವಿಚಾರಗಳ ಮೂಲಕ ಅದೆಷ್ಟೋ ಜನರಿಗೆ ಮಾದರಿಯಾಗಿದ್ದು ಇತ್ತೀಚೆಗೆ ತನ್ನ ತಂದೆಯ ನೆನಪಿಗಾಗಿ ಸೀಡ್ ಬಾಲ್ ಅಭಿಯಾನ ಕಾರ್ಯಕ್ರಮ ಕೂಡ ಮಾಡಿ ಕಾಡುಗಳಲ್ಲಿ ಅದರ ಬಿತ್ತನೆ ಕಾರ್ಯಕ್ರಮ ಕೂಡ ತನ್ನ ಸಹೋದರ ನವೀನ್ ಶೆಟ್ಟಿ ಹಾಗೂ ಸ್ನೇಹಿತರೊಂದಿಗೆ ಮಾಡಿದ್ದು ಈಗಾಗಲೇ ಪರಿಸರ ಪರ ಕೆಲಸಗಳನ್ನು ಮಾಡುವ ಪಣತೊಟ್ಟಿದ್ದಾರೆ.
ಉದ್ಯಮಿ ಕಾಕ್ತೋಟ ಉಪ್ಪುಂದರ ಮನೆ ಸದಾನಂದ್ ಶೆಟ್ಟೆಯವರ ಕೈ ಹಿಡಿದು ಎರಡು ವರ್ಷದ ಮಗ ಇಶಾನ್ ಶೆಟ್ಟಿ ಯ ಜೊತೆ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ.
Name: Nayana shetty
Husband: sadanand shetty
Mother: vinaya N Shetty
yarukone cheathnamakky
Father: nelyadi veerappa
shetra mane narayana shetty
Education: MBA HR(Bangalore)
Job-HR recruiter, Radio jockey 98.3,
Currently working for 93.5 Red FM
Other areas
1. voice over aritst- ondu motteya kathe, short films, documentaries, advertisements, script writer
2. Writing articles in vijayavani and vishwa vani
3. You tube channel anchor
4. Giving talks to students
ಮಾಹಿತಿ ಸಂಗ್ರಹ ಮತ್ತು ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post