ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಶ್ರೀರಾಮಚಂದ್ರಾಪುರ ಮಠದ #Shri Ramachandrapura Mutt ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ವತಿಯಿಂದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು #Raghaveshwara Shri ಅನುಗ್ರಹಿಸುವ ವಿಷ್ಣುಗುಪ್ತ ರಾಷ್ಟ್ರೀಯ ಸಮ್ಮಾನಕ್ಕೆ ಈ ಬಾರಿ ಖ್ಯಾತ ವಾಗ್ಮಿ, ಚಿಂತಕ ಮತ್ತು ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್ ಸಂಸ್ಥಾಪಕ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಈ ತಿಂಗಳ 10ರಂದು ಮಧ್ಯಾಹ್ನ 2ಗಂಟೆಗೆ ಗೋಕರ್ಣ ಅಶೋಕೆಯ ಗುರುದೃಷ್ಟಿ ಸಭಾಭವನದಲ್ಲಿ ನಡೆಯಲಿದೆ. ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ
Also read: ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ಆರೋಗ್ಯ ಸದೃಢ: ಚಂದ್ರಶೇಖರ್ ಅಭಿಪ್ರಾಯ

ದೇಶ ವಿದೇಶಗಳಲ್ಲಿ ಪ್ರವಾಸ ಮಾಡಿ ದಾಸಸಾಹಿತ್ಯ, ರಾಮಾಯಣ, ಭಾಗವತ ಗೀತೆ, ವಿಷ್ಣು ಸಹಸ್ರನಾಮ, ಭಕ್ತಿ ಭಾಗವತ, ಸುಂದಕಕಾಂಡ, ಶಿವಪಂಚಾಕ್ಷರಿ ಮಂತ್ರ, ರುದ್ರ-ಚಮಕ ಬಗ್ಗೆ ಅಮೆರಿಕ, ಯೂರೋಪ್, ಓಷಿಯಾನಾ, ಆಗ್ನೇಯ ಏಷ್ಯಾ ಮತ್ತು ಗಲ್ಫ್ ದೇಶಗಳಲ್ಲಿ ಪ್ರಚನಗಳನ್ನು ನೀಡಿದ್ದಾರೆ. ಭಕ್ತಿ ಚಳವಳಿಯಲ್ಲಿ ಇವರ ಗಣನೀಯ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ಕಳೆದ ವರ್ಷ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಇಸ್ರೋದ ವಿಶ್ರಾಂತ ಅಧ್ಯಕ್ಷ ಡಾ.ಕಿರಣ್ ಕುಮಾರ್ ಅವರಿಗೆ ನೀಡಲಾಗಿತ್ತು. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ಗುರುತಿಸಿ ಈ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post