ಕಲ್ಪ ಮೀಡಿಯಾ ಹೌಸ್ | ಮೈಸೂರು |
ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು #SanskritUniversity ಅಯೋಧ್ಯೆಯಲ್ಲಿ ಆಯೋಜಿಸಿದ್ದ 61ನೇ ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಮೈಸೂರಿನ #Mysore ಅಗ್ರಹಾರದ ಕೃಷ್ಣ ಪಿ. ಬಾದರಾಯಣ ಅವರು ಭಾರತೀಯ ವಿಜ್ಞಾನ ಭಾಷಣ ಸ್ಪರ್ಧೆ (ಪ್ರಾಚೀನ ವಿಜ್ಞಾನದಲ್ಲಿ ಪ್ರಬಂಧನ ವಿಧಿ- ವಿಷಯ)ಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
ವಿಜೇತ ವಿದ್ಯಾರ್ಥಿಗೆ ಪ್ರಶಂಸಾ ಪತ್ರದೊಂದಿಗೆ 12,000 ರೂ.ನಗದು ಬಹುಮಾನವನ್ನೂ ನೀಡಿ ಗೌರವಿಸಲಾಗಿದೆ.
ಮೈಸೂರಿನ ಉತ್ತರಾದಿ ಮಠದ #UttaradiMutt ಹಿರಿಯ ವಿದ್ವಾಂಸ ಬಾದರಾಯಣಾಚಾರ್ಯ ಮತ್ತು ಭಾಗ್ಯಶ್ರೀ ಅವರ ಪುತ್ರನಾದ ಈತ ತಂದೆಯ ಬಳಿಯೇ ಸಂಸ್ಕೃತ ವೇದ, ಶಾಸ್ತ್ರ ಅಧ್ಯಯನ ಮಾಡುತ್ತಿದ್ದು, ಮೈಸೂರಿಗೆ ಕೀರ್ತಿ ತಂದಿದ್ದಾನೆ. ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗದ 30ಕ್ಕೂ ಹೆಚ್ಚು ಸಂಸ್ಕೃತ ಪಾಠಶಾಲೆ, ಗುರುಕುಲಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Also read: ಯುಪಿಎ ಅವಧಿಯಲ್ಲಿ ಎಷ್ಟು ಎನ್ ಡಿಆರ್ ಎಫ್ ಹಣ ಬಂದಿದೆ, ರಾಜ್ಯ ಸರ್ಕಾರ ಬಹಿರಂಗಪಡಿಸಲಿ
ಸಮಾರಂಭದಲ್ಲಿ ಅಯೋಧ್ಯೆಯ ಶ್ರೀರಾಮನ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ ಜೀ, ಶ್ರೀ ರಾಮಜನ್ಮಭೂಮಿ ನ್ಯಾಸದ ಅಧ್ಯಕ್ಷ ನೃತ್ಯ ಗೋಪಾಲದಾಸ ಸ್ವಾಮೀಜಿ, ರಾಮ ಜನ್ಮಭೂಮಿ ನ್ಯಾಸ ಕ್ಷೇತ್ರದ ಮಹಾಸಚಿವ ಚಂಪತ್ ರಾಯ, ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಶ್ರೀನಿವಾಸ ವರಖೇಡಿ (ಮಾ. 22ರಂದು) ಬಹುಮಾನ ವಿತರಿಸಿದರು. ದೇಶದ ವಿವಿಧ ಭಾಗದ ಹಿರಿಯ ವಿದ್ವಾಂಸರು ತೀರ್ಪುಗಾರರಾಗಿ ಆಗಮಿಸಿದ್ದರು.
ರಾಜ್ಯದ ಪ್ರತಿನಿಧಿ
ಕೃಷ್ಣ ಬಾದರಾಯಣ ಬೆಂಗಳೂರಿನ ಸಂಸ್ಕೃತ ವಿವಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಾಚೀನ ಭಾರತೀಯ ರಾಸಾಯನ ಶಾಸ್ತ್ರ ವಿಷಯದ ಬಗ್ಗೆ ಭಾಷಣ ಮಾಡಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದ. ಕರ್ನಾಟಕವನ್ನು ಪ್ರತಿನಿಧಿಸಿದ ಕೃಷ್ಣನಿಗೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ದೊರಕಿರುವುದನ್ನು ಹೆಮ್ಮೆಯ ಸಂಗತಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post