ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಜನ್ನಾಪುರದ ವಾಸಿ ಹಾಗೂ ಶಿವಮೊಗ್ಗದ ಜೆಎನ್’ಎನ್’ಸಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಚಂದನಾ ಸಿ. ಆಚಾರ್ಯ ಅವರು, 2018-19 ನೆಯ ಸಾಲಿನ ಎಂ.ಟೆಕ್ ಟ್ರಾನ್ಸ್‌ಸ್ಪೋಟೇಷನ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್’ಮೆಂಟ್ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದು ಬೆಳಗಾವಿ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ಇವರಿಗೆ ಇತ್ತೀಚೆಗೆ ನಡೆದ ವಿವಿಯ ಘಟಕೋತ್ಸವದಲ್ಲಿ ದೆಹಲಿಯ ಎನ್‌ಬಿಎ ಅಧ್ಯಕ್ಷ ಕೆ.ಕೆ. ಅಗರ್ವಾಲ್ ಮತ್ತು ಕುಲಸಚಿವ ಪ್ರೊ ಕರಿಸಿದ್ದಪ್ಪ ಮುಂತಾದವರು ಬಂಗಾರದ ಪದಕ ನೀಡಿ ಗೌರವಿಸಿದರು.
ಚಂದನಾ ಸಿ. ಆಚಾರ್ಯ ಇವರು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ದಂಪತಿಗಳಾದ ಚೆನ್ನಪ್ಪ ಆರ್. ಆಚಾರ್ಯ ಮತ್ತು ಸುಮಿತ್ರಮ್ಮ ಪುತ್ರಿಯಾಗಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093





Discussion about this post