ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಮಹಾಕುಂಭ ಮೇಳಕ್ಕೆ ಕರ್ನಾಟಕದಿಂದ ತೆರಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ #SouthWesternRailway ಮೂರು ವಿಭಿನ್ನ ದಿನಾಂಕದಂದು ವಿಶೇಷ ರೈಲು ವ್ಯವಸ್ಥೆ ಮಾಡಿದೆ.
ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ #Hubli ಮತ್ತು ಉತ್ತರ ಪ್ರದೇಶದ ವಾರಣಾಸಿ #Varanasi ನಿಲ್ದಾಣಗಳ ನಡುವೆ 3 ಟ್ರಿಪ್ ವಿಶೇಷ ಎಕ್ಸ್’ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
Also Read>> ರಾಜ್ಯದ 5 ಮಹಾನಗರ ಪಾಲಿಕೆಗಳಿಗೆ ಚುನಾವಣೆ? ಈಗಿರುವ ಮೀಸಲಾತಿಯೇ ಮುಂದುವರೆಯಲಿದೆಯೇ?
ವಿಶೇಷ ರೈಲುಗಳ ವಿವರಗಳು ಈ ಕೆಳಗಿನಂತಿವೆ:
ಹುಬ್ಬಳ್ಳಿ-ವಾರಣಾಸಿ ನಿಲ್ದಾಣಗಳ ನಡುವೆ ಮೂರು ಟ್ರಿಪ್ ವಿಶೇಷ ರೈಲು (07383/84) ಸಂಚಾರ.ರೈಲು ಸಂಖ್ಯೆ 07383 ಹುಬ್ಬಳ್ಳಿ – ವಾರಣಾಸಿ ವಿಶೇಷ ಎಕ್ಸ್’ಪ್ರೆಸ್ ರೈಲು ಫೆಬ್ರವರಿ 14, 21 ಮತ್ತು 28, 2025 (ಶುಕ್ರವಾರ) ರಂದು ಹುಬ್ಬಳ್ಳಿಯಿಂದ ಬೆಳಿಗ್ಗೆ 8:00 AM ಗಂಟೆಗೆ ಹೊರಟು, ಭಾನುವಾರದಂದು ಬೆಳಿಗ್ಗೆ 05:30 ಗಂಟೆಗೆ ಉತ್ತರ ಪ್ರದೇಶದ ವಾರಣಾಸಿ ನಿಲ್ದಾಣ ತಲುಪಲಿದೆ.
Also read: ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆ ಸಾಧ್ಯತೆ | ಸಿಎಂ ಸಿದ್ದರಾಮಯ್ಯ ಸಿದ್ಧತೆ
ಪುನಃ ಇದೆ ರೈಲು (07384) ಫೆಬ್ರವರಿ 17, 24 ಮತ್ತು ಮಾರ್ಚ್ 3, 2025 (ಸೋಮವಾರ) ರಂದು ವಾರಣಾಸಿಯಿಂದ ಬೆಳಿಗ್ಗೆ 5:00 ಗಂಟೆಗೆ ಹೊರಟು, ಬುಧವಾರ 12:45 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕಿರ್ಲೋಸ್ಕರವಾಡಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್ ನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ತಲ್ವಾಡ್ಯ, ಛನೆರಾ, ಖಿರ್ಕಿಯಾ, ಹದಾರ್, ಬಾನಾಪುರಾ, ಇಟಾಸಿರ್, ಪಿಪರಿಯಾ, ನರಸಿಂಗಪುರ, ಜಬಲ್ಪುರ, ಕಟ್ನಿ, ಮೈಹಾರ್, ಸತ್ನಾ, ಮಾಣಿಕಪುರ, ಪ್ರಯಾಗ್ ರಾಜ್ ಚಿಯೋಕಿ, ಮಿರ್ಜಾಪುರ ಮತ್ತು ಚುನಾರ್ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಬೋಗಿಗಳ ಸಂಯೋಜನೆ
ಈ ರೈಲುಗಳು 1 ಎಸಿ ಟು ಟೈರ್, 4 ಎಸಿ ತ್ರಿ ಟೈರ್, 11 ಸ್ಲೀಪರ್ ಕ್ಲಾಸ್, 1 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್ ಮತ್ತು 1 ಲಗೇಜ್/ಜನರೇಟರ್/ಬ್ರೇಕ್ ವ್ಯಾನ್ ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತದೆ.
ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.in ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post