ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕಿತರು ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಎಲ್ಲ ರೀತಿಯಲ್ಲೂ ಕಡ್ಡಾಯವಾಗಿ ಲಾಕ್’ಡೌನ್ ಮಾಡುವಂತೆ ಸೂಚಿಸಿರುವ ಕೇಂದ್ರ ಸರ್ಕಾರ ಕಠಿಣ ಎಚ್ಚರಿಕೆ ನೀಡಿದೆ.
ಎಲ್ಲ ರಾಜ್ಯಗಳಿಗೆ ಇಂದು ಎಚ್ಚರಿಕೆ ಆದೇಶ ನೀಡಿರುವ ಕೇಂದ್ರ ಸರ್ಕಾರ, ಸೋಂಕು ತಡೆಗಟ್ಟಲು ಆಯಾ ಪ್ರದೇಶಗಳನ್ನು ಕಡ್ಡಾಯವಾಗಿ ಲಾಕ್’ಡೌನ್ ಮಾಡಬೇಕು. ಜನರೂ ಸಹ ಇದನ್ನು ಪಾಲಿಸುವಂತೆ ತಾಕೀತು ಮಾಡಬೇಕು. ಒಂದು ವೇಳೆ ಯಾವುದೇ ರಾಜ್ಯಗಳು ಇದನ್ನು ನಿರ್ಲಕ್ಷಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಲ್ಲ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.
Get in Touch With Us info@kalpa.news Whatsapp: 9481252093
















