ಮಂಗಳೂರು: ಅಖಂಡ ಹಿಂದೂಗಳ ಹೃದಯ ಸಾಮ್ರಾಟ ಚಿರಂಜೀವಿ ಹನುಮಂತನನ್ನು ಇಡಿಯ ಹಿಂದೂ ಸಮಾಜದ ಐಕಾನ್ ಎಂದೇ ಪರಿಗಣಿಸಲಾಗಿದ್ದು, ಹಿಂದೂಗಳ ನರನಾಡಿಯಲ್ಲೇ ಬೆರೆತಿದೆ.
ಇಂತಹ ಹನುಮನನ್ನು ಉಗ್ರ ರೂಪದಲ್ಲಿ ಚಿತ್ರಿಸಿದ್ದ ಕರಣ್ ಆಚಾರ್ಯ ಅವರ ಕಲೆಗೆ ಇಡಿಯ ದೇಶವೇ ಮಾರು ಹೋಗಿತ್ತು. ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಈ ಚಿತ್ರ ಸಂಚಲನ ಸೃಷ್ಠಿಸಿ ಬೈಕು, ಕಾರು, ಆಟೋ, ಲಾರಿ, ಬಸ್ಸು ಸೇರಿದಂತೆ ಎಲ್ಲೆಡೆಯಲ್ಲೂ ಸಹ ಇದು ರಾರಾಜಿಸಿತ್ತು.
ಅಂದು ಆರಂಭವಾಗಿದ್ದ ಈ ಸಂಚಲನ ಇಂದಿಗೂ ಮುಂದುವರೆದೆ. ಅಪ್ರತಿಮ ಕಲಾವಿದ ಕರಣ್ ಆಚಾರ್ಯ ಇದನ್ನು ಸೃಷ್ಠಿಸಿದ್ದು, ಇದರಿಂದ ಕರಣ್ ದೇಶದೆಲ್ಲೆಡೆ ಪ್ರಖ್ಯಾತಿ ಪಡೆದರು.
ಇಂತಹ ಕಲಾವಿದ ಈಗಾಗಲೇ ಬಹಳಷ್ಟು ಚಿತ್ರಗಳನ್ನು ಸೃಷ್ಠಿಸಿದ್ದು, ಇತ್ತೀಚೆಗೆ ಅವರು ಸೃಷ್ಠಿಸಿರುವ ರಾಮ ದೇವರ ಚಿತ್ರ ಬಹಳಷ್ಟು ಪ್ರಸಿದ್ದಿ ಪಡೆದಿದೆ.
ಒಟ್ಟು ಮೂರು ಬಣ್ಣಗಳಲ್ಲಿ ಈ ಚಿತ್ರವನ್ನು ಕರಣ್ ಆಚಾರ್ಯ ಸೃಷ್ಠಿಸಿದ್ದು, ಶ್ವೇತ ವರ್ಣ, ಕೆಂಪು ಹಾಗೂ ಕೇಸರಿ ಬಣ್ಣಗಳ ಮೂಲಕ ಪ್ರಭು ಶ್ರೀ ರಾಮನನ್ನು ರಚಿಸಿದ್ದಾರೆ.
ಇದು ಉಗ್ರ ರಾಮನ ಚಿತ್ರ ಅಲ್ಲ
ಇನ್ನು, ಕರಣ್ ಆಚಾರ್ಯ ರಚಿಸಿರುವ ಈ ಚಿತ್ರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದು, ಲಕ್ಷಾಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ ಈ ರಾಮನ ಚಿತ್ರ ಉಗ್ರ ರೂಪಿಯಾಗಿದೆ. ಉಗ್ರ ರೂಪಿ ರಾಮ ಎಂಬ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಆದರೆ, ವಾಸ್ತವವಾಗಿ ಇದು ಉಗ್ರರೂಪಿ ರಾಮನಲ್ಲ ಬಹುತೇಕ ಮಂದಿಗೆ ತಿಳಿದಿಲ್ಲ.
ಹಾಗಾದರೆ ಈ ಚಿತ್ರದಲ್ಲಿರುವ ರಾಮನ ಭಾವನೆ ಏನು?
ಈ ಕುರಿತಂತೆ ಕರಣ್ ಆಚಾರ್ಯ ಕಲ್ಪ ನ್ಯೂಸ್ ಜೊತೆ ಮಾತನಾಡಿದ್ದಾರೆ.
ವಾಸ್ತವವಾಗಿ ರಾಮಾಯಣದ ಅಂತಿಮ ಘಟ್ಟದಲ್ಲಿ ರಾವಣನನ್ನು ಪ್ರಭು ಶ್ರೀ ರಾಮ ಸಂಹಾರ ಮಾಡುವ ಸಂದರ್ಭ ಈ ಚಿತ್ರದಲ್ಲಿದೆ.
ಕರಣ್ ಆಚಾರ್ಯ ಹೇಳುವಂತೆ, ರಾಮನ ಮುಂದೆ ರಾವಣ ನಿಂತಿರುತ್ತಾನೆ. ಸಂಹಾರ ಮಾಡುವ ಮುನ್ನ ರಾವಣನ್ನು ನೋಡುವ ರಾಮ ‘ನಾನು ನಿನ್ನನ್ನು ಈಗ ಸಂಹಾರ ಮಾಡಲಿದ್ದೇನೆ’ ಎಂದು ನಗುತ್ತಾ ಭಾವನೆ ವ್ಯಕ್ತಪಡಿಸುವುದನ್ನು ಈ ಚಿತ್ರದಲ್ಲಿ ಚಿತ್ರಿಸಿದ್ದೇನೆ ಎನ್ನುತ್ತಾರೆ.
ಕರಣ್ ರಚಿಸಿರುವ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಮನ ಮುಖದಲ್ಲಿ ನಗುವಿನ ಭಾವನೆ ವ್ಯಕ್ತವಾಗಿರುವುದು ಕಾಣುತ್ತದೆ. ಎದುರಿಗಿರುವ ವೈರಿ ರಾವಣನನ್ನು ಸಂಹಾರ ಮಾಡುವ ಧೈರ್ಯದೊಂದಿಗೆ ನಿನ್ನನ್ನು ಸಂಹಾರ ಮಾಡಲಿದ್ದೇನೆ ಎಂಬ ನಗುವನ್ನೂ ಸಹ ಚಿತ್ರದಲ್ಲಿ ರೂಪಿಸಿರುವುದು ಕರಣ್ ಆಚಾರ್ಯರ ಕಲಾಪ್ರತಿಭೆಗೆ ಸಾಕ್ಷಿ.
ಇನ್ನು, ಕರಣ್ ಆಚಾರ್ಯ ರಚಿಸಿರುವ ಈ ಚಿತ್ರ ಉಗ್ರ ರೂಪಿ ರಾಮ ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುತ್ತಿದೆ. ವಾಸ್ತವವಾಗಿ ನೋಡುವುದಾದರೆ ಹಿಂದೂಗಳಲ್ಲಿ ರಾಮನನ್ನು ಎಂದಿಗೂ ಉಗ್ರರೂಪಿಯಾಗಿ ನೋಡಿಲ್ಲ. ನಮ್ಮಲ್ಲಿ ವಿಷ್ಣುವನ್ನು ನರಸಿಂಹನ ಅವತಾರದಲ್ಲಿ ಉಗ್ರರೂಪಿಯಾಗಿ ನಮ್ಮ ಪರಂಪರೆಯಲ್ಲಿ ಒಪ್ಪಿಕೊಂಡಿದ್ದೇವೆಯೇ ವಿನಾ, ರಾಮನನ್ನು ಎಂದಿಗೂ ಉಗ್ರ ರೂಪಿಯಾಗಿ ಅಲ್ಲ. ಈ ವಿಚಾರವನ್ನು ಕರಣ್ ಸಹ ಅಂಗೀಕರಿಸಿದ್ದು, ತಾವು ರಚಿಸಿರುವುದು ಉಗ್ರ ರೂಪಿ ರಾಮ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
-ಎಸ್.ಆರ್. ಅನಿರುದ್ಧ ವಸಿಷ್ಠ
9008761663