ಕಲ್ಪ ಮೀಡಿಯಾ ಹೌಸ್ | ಹಾಸನ |
ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ #HDRevanna ಅವರ ಬಂಧನಕ್ಕೆ ಕಾರಣವಾಗಿರುವ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಅಚ್ಚರಿಯ ಹೇಳಿಕೆ ನೀಡಿದ್ದು, ನನ್ನನ್ನು ಯಾರೂ ಸಹ ಕಿಡ್ನಾಪ್ ಮಾಡಿಲ್ಲ ಎಂದಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತಂತೆ ವಿಡಿಯೋವೊಂದನ್ನು ಹರಿಬಿಡಲಾಗಿದ್ದು, ಸಂತ್ರಸ್ತ ಮಹಿಳೆಯೇ ಇದರಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ನನ್ನನ್ನು ಯಾರೂ ಸಹ ಕಿಡ್ನಾಪ್ #Kidnap ಮಾಡಿಲ್ಲ, ಬೇಸರಗೊಂಡು ನಾನೇ ಬೇರೆಡೆಗೆ ಹೋಗಿದ್ದೆ. ನಾನು ಸೇಫ್ ಆಗಿದ್ದೇನೆ. ನನ್ನ ಮಗ ತಿಳಿಯದೇ ದೂರು ನೀಡಿದ್ದಾನೆ ಎಂದು ಮಹಿಳೆ ವೀಡಿಯೋದಲ್ಲಿ ಮಾತನಾಡಿದ್ದಾರೆ.
ನನ್ನ ಕಿಡ್ನಾಪ್ ಆಗಿದೆ ಎಂಬ ವಿಚಾರ ಸುಳ್ಳಾಗಿದ್ದು, ಇದರಲ್ಲಿ ಯಾರದ್ದೂ ಸಹ ತಪ್ಪು ಇಲ್ಲ. ಯಾರೂ ಸಹ ನನಗೆ ತೊಂದರೆ ನೀಡಿಲ್ಲ. ದಯಮಾಡಿ ಯಾರಿಗೂ ತೊಂದರೆ ಕೊಡಬೇಡಿ ಎಂದು ಬೇಡಿಕೊಂಡಿರುವುದು ವೀಡಿಯೋದಲ್ಲಿದೆ.
Also read: 75 ಕಡೆ ಝೀರೋ ರಿಸಲ್ಟ್ ಬಂದಿದ್ದರೂ ಬಿಗಿಯಾಗಿ ಪರೀಕ್ಷೆ ನಡೆಸಿದ್ದು ಇದಕ್ಕಾಗಿ: ಶಿಕ್ಷಣ ಸಚಿವರು ಹೇಳಿದ್ದೇನು
ಈ ವೀಡಿಯೋದ ಹಿಂದಿನ ಸತ್ಯಾಸತ್ಯತೆ ಬಯಲಾಗಬೇಕಿದ್ದು, ಕಿಡ್ನಾಪ್ ಆಗಿದ್ದಾರೆ ಎಂಬ ಮಹಿಳೆ ಈಕೆಯೇ ಎಂಬುದು ಸಾಬೀತಾಗಬೇಕಿದೆ. ಒಂದು ವೇಳೆ ವೀಡಿಯೋದಲ್ಲಿ ಮಹಿಳೆ ಮಾತನಾಡಿರುವ ವಿಚಾರಗಳು ಸತ್ಯವೇ ಆಗಿರುವುದು ಸಾಬೀತಾದರೆ ರೇವಣ್ಣ ಅವರ ಜೈಲುವಾಸ ಅಂತ್ಯವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















Discussion about this post