ಕಲ್ಪ ಮೀಡಿಯಾ ಹೌಸ್ | ಹಂಪಿ |
ವಿಜಯನಗರ ಜಿಲ್ಲೆ ಹಂಪಿಯ ತುಂಗಭದ್ರಾ ನಡುಗಡ್ಡೆಯಲ್ಲಿರುವ ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ನರಹರಿ ತೀರ್ಥರ ಬೃಂದಾವನ ಆರಾಧನೆ ಮತ್ತು ದೈನಿಂದಿನ ಪೂಜೆಗೆ ಸಂಬಂಧಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ #Mantralaya Shri Raghavendraswamy Mutt ಹೈಕೋರ್ಟ್’ನಲ್ಲಿ ಜಯ ಸಂದಿದೆ.
ಈ ಕುರಿತಂತೆ ರಾಜ್ಯ ಹೈಕೋರ್ಟ್ #HighCourt ಧಾರವಾಡ ಪೀಠ ಆದೇಶ ಹೊರಡಿಸಿದ್ದು, ಕೆಳಗಿನ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ರದ್ದುಗೊಳಿಸಿದೆ.
Also read: ಅನುದಾನಿತ ಶಾಲಾ-ಕಾಲೇಜುಗಳಲ್ಲೂ ವಯೋಮಿತಿ ವಿಸ್ತರಿಸಲು ಬಿಜೆಪಿ ನಿಯೋಗ ಮನವಿ
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದವರು ನರಹರಿ ತೀರ್ಥರ ಆರಾಧನೆ ಮಾಡದಂತೆ ಹೊಸಪೇಟೆಯ ಕಿರಿಯ ಶ್ರೇಣಿ ನ್ಯಾಯಾಲಯದ ಮೂಲ ದಾವೆ ಹಾಗೂ ಅದರ ಮೇಲೆ ಪ್ರಥಮ ಮೇಲ್ಮನವಿಯನ್ನು ಸಲ್ಲಿಸಿದ್ದ ಉತ್ತರಾದಿ ಮಠದವರು ಪ್ರತಿಬಂಧಕಾಜ್ಞೆಯನ್ನು ತಂದಿದ್ದರು.
ಆದರೆ, ಇದನ್ನು ಪ್ರಶ್ನಿಸಿದ ರಾಯರ ಮಠದವರು ಉಚ್ಛ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಎರಡನೇ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನು ಪುರಸ್ಕರಿಸಿದ ನ್ಯಾಯಾಲಯ, ಈ ಹಿಂದಿನ ಆದೇಶವು ತಪ್ಪು ಗ್ರಹಿಕೆಯಿಂದ ಕೂಡಿದ್ದು, ಕೆಳ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿದೆ.
ಈ ಮೂಲಕ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನ್ಯಾಯಾಲಯದಲ್ಲಿ ಜಯ ದೊರೆತಿದ್ದು, ಶ್ರೀಮಠದ ಭಕ್ತರಲ್ಲಿ ಸಂತಸ ಮೂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post