ಕಲ್ಪ ಮೀಡಿಯಾ ಹೌಸ್ | ಹೊನ್ನಾಳಿ |
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಿಲೂರು ನಲ್ಲಿ ನಡೆದ ಚಿಲೂರು, ಟಿ.ಜಿ.ಹಳ್ಳಿ, ಕಡದ ಕಟ್ಟೆ, ಗೋವಿನ ಕೋವಿ, ಕುಂಕೋವ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳ ಜೊತೆ ವಿಧಾನಪರಿಷತ್ ಅಭ್ಯರ್ಥಿ ಡಿ.ಎಸ್. ಅರುಣ್ ಸಭೆ ನಡೆಸಿ, ಮತಯಾಚನೆ ಮಾಡಿದರು.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಎಸ್ .ರುದ್ರೇಗೌಡ್ರು, ಮಂಡಲ ಅಧ್ಯಕ್ಷರಾದ ಜೆ.ಕೆ. ಸುರೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೆ.ಈ. ಕಾಂತೇಶ್, ಅಭ್ಯರ್ಥಿ ಪ್ರಮುಖ್ ಎನ್.ಜೆ. ನಾಗರಾಜ್, ಹೃಷಿಕೇಶ್ ಪೈ, ಮಂಡಲ ಪ್ರದಾನ ಕಾರ್ಯದರ್ಶಿಗಳು ಹಾಗೂ ಪ್ರಮುಖರು, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು, ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಪ್ರಮುಖ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















