ಹೊಸಪೇಟೆ: ಇಲ್ಲಿ ಹರಿಯುವ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು ಒಂದೆಡೆ ಸಂಭ್ರಮ ಮೂಡಿದ್ದರೆ, ಇನ್ನೊಂದೆಡೆ ರೈತಾಪಿ ವರ್ಗದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳೆದ ಒಂದು ತಿಂಗಳಿನಿಂದ ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಗಾ ಮತ್ತು ಭದ್ರ ನದಿಗಳು ತುಂಬಿ ತುಳುಕುತ್ತಿರುತ್ತವೆ. ಜುಲೈ ಪ್ರಾರಂಭದಲ್ಲಿ ಉತ್ತರ ಕರ್ನಾಟಕದ ಬಹುಭಾಗ ಈ ವರ್ಷ ಮಳೆ ಬೀಳದೆ ಕಂಗಾಲಗಿದ್ದ ರೈತರಿಗೆ ಆಗಸ್ಟ್ ಪ್ರಾರಂಭದಲ್ಲಿ ಸಂತಸವನ್ನು ನೀಡಿದ ಮಳೆರಾಯ ಬರಬರುತ್ತಾ ಆಗಸ್ಟ್ ಮುಗಿಯುವ ತನಕ ಜನರಿಗೆ ಹೆದರಿಕೆಯನ್ನು ಉಂಟು ಮಾಡಿದ ಘಟನೆ ಕಣ್ಣ ಮುಂದೆ ನಿಂತಿರುತ್ತದೆ.
ಈ ಬಾರಿ ತುಂಗಭದ್ರಾಯ ಹೊಸಪೇಟೆ ಡ್ಯಾಂ ಪೂರ್ಣ ಪ್ರಮಾಣದಲ್ಲಿ ತುಂಬಿ ನಂತರ ಹತ್ತಿರದ ಮುನಿರಾಬಾದ್ ಕ್ರಸ್ಟ್ ಗೇಟ್ ಮುರಿದು ಸುಮಾರು ಮೂರು ನಾಲ್ಕು ದಿನ ಮುನಿರಾಬಾದ್ ಮತ್ತು ತಗ್ಗು ಪ್ರದೇಶದ ಜನರಿಗೆ ಆತಂಕವನ್ನು ಒದಗಿಸಿ ಘಟನೆ ಒಂದುಕಡೆಯಾದರೆ ಇತ್ತ ಕರ್ನಾಟಕದ ಉತ್ತರ ಕರ್ನಾಟಕದ ಬಹುಭಾಗ ನೀರಿನಿಂದ ಮುಳುಗಡೆಯಾಗಿ ಜನರು ಕಷ್ಟ ಪಡುತ್ತಿದ್ದಾರೆ.
ತುಂಗಭದ್ರಾ ಅಣೆಕಟ್ಟಿನ ನೀರಿನ ಮಟ್ಟ 1633 ಅಡಿ ಇದ್ದು ಕಳೆದ ಶುಕ್ರವಾರ ಮತ್ತು ಶನಿವಾರ 157 ಮೀಮೀ ಮಳೆಯಾಗಿದೆ ಮತ್ತು ಎಲ್ಲ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ ತುಂಗಭದ್ರಾ ನದಿಯಿಂದ ಹೊಸಪೇಟೆ ಡ್ಯಾಂ ಭಾಗಕ್ಕೆ ಹೆಚ್ಚಿನ ನೋರು ಸಂಗ್ರಹವಾಗಿ ಮತ್ತೆ ಅಣೆಕಟ್ಟಿನ 28 ಗೇಟ್ ಓಪನ್ ಮಾಡಲಾಗಿದೆ. ಅದರ ಮೂಲಕ ಸುಮಾರು 80 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿದು ಬಿಡಲಾಗಿದೆ. ಇದರಿಂದ ಐತಿಹಾಸಿಕ ಪ್ರಸಿದ್ಧ ಹಂಪೆಯ ಕೆಲವು ಸ್ಮಾರಕಗಳು ಜಲಾವೃತವಾಗಿದೆ.
ಮಲೆನಾಡು ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ದಿನ 4 ಟಿಎಂಸಿ ನೀರು ಸಂಗ್ರಹವಾಗಿ ಅಣೆಕಟ್ಟಿನಿಂದ ಹೊರಗೆ ಬಿಡಲಾಗುತ್ತದೆ. ಇದರ ಪರಿಣಾಮ ಇಂದು ಹಂಪೆಯ ಪ್ರಸಿದ್ಧ ಪುರಂದರ ಮಂಟಪ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಹಂಪೆಯ ಯಂತ್ರೋದ್ದಾರಕ ಹನುಮಂತ ಮತ್ತು ಸೀತರಾಮ ಮಂದಿರಕ್ಕೆ ಹೋಗುವುದು ರದ್ದಾಗಿದೆ. ಮಳೆಯ ಪ್ರಮಾಣ ಹೆಚ್ಚಳದಿಂದಾಗಿ ಯಾತ್ರಿಕರು, ವಿದೇಶಿಗರು ಮತ್ತು ಭಕ್ತರಿಗೆ ತುಂಬಾ ತೊಂದರೆಯಾಗಿದೆ. ಹಂಪೆಯ ಪ್ರಸಿದ್ಧ ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿನ ಕರ್ಮ ಮಂಟಪ ಹಾಗೂ ಸ್ನಾನಗಟ್ಟಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಚಕ್ರ ತೀರ್ಥ ಕೋದಂಡರಾಮ ದೇವಾಲಯಕ್ಕೆ ಕಾಲುದಾರಿಗಳು ಸಹ ಜಲಾವೃತವಾಗಿದೆ.
ತುಂಗಭದ್ರಾ ನದಿಯ ದಂಡೆಗೆ ಹೊಂದಿಕೊಂಡಿರುವ ಪಿ. ಬುಕ್ಕಸಾಗರ, ವೆಂಕಟಾಪುರ ಗ್ರಾಮಗಳಿಗೆ ಜಿಲ್ಲಾಡಳಿತ ಈಗಾಗಲೆ ಮುನ್ನೆಚ್ಚರಿಕೆ ಕ್ರಮವಾಗಿ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪ್ರತಿದಿನ ತಿಳಿಸುತ್ತಿದ್ದಾರೆ.
ತುಂಗಭದ್ರಾ ನದಿಗೆ ಇನ್ನೂ ಹೆಚಿನ ನೀರು ಬರುವ ಸಾಧ್ಯತೆ ಇರುತ್ತದೆ ಎಂದು ಕಲ್ಪ ನ್ಯೂಸ್’ಗೆ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೋಟೆ, ಸಿರಗುಪ್ಪ ತಾಲೂಕಿನ ಕೆಲವು ಗ್ರಾಮಗಳಿಗೂ ಸಹ ನೀರು ಒಳ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿರುವ ಬಗ್ಗೆ ವರದಿಯಾಗಿದೆ. ಈಗ ಇನ್ನೂ ಹೆಚ್ವು ನೀರು ಬರುತಗತಿದ್ದು ತಗ್ಗುಪ್ರದೇಶದ ಜನರಲ್ಲಿ ಆತಂಕ ಸೃಷ್ಠಿಸಿದೆ.
ಇಂದು ಭಾನುವಾರ ಪ್ರವಾಸಿಗರು ಬರುವುದು ಹೆಚ್ಚಾಗಿದೆ. ಈ ಭಾಗದಲ್ಲಿ ಮಳೆ ಇಲ್ಲದೆ ಜನರಿಗೆ ಸಂತಸ ಇದ್ದು ಈ ವರ್ಷದ ಬೆಳೆಗಳನ್ನು ಹಾಳಾಗಿದ್ದು ಭತ್ತದ ಬೇಳೆ ಈ ಭಾಗದಲ್ಲಿ ಶೇ.30-40 ಹಾಳಾಗಿರುತ್ತದೆ. ಮುಂದಿನ ದಿನದಲ್ಲಿ ಅಕ್ಕಿ ಮತ್ತು ತೊಗರಿ ಬೇಡಿಕೆ ಹೆಚ್ಚಾಗಿ ದರದಲ್ಲಿ ಸಹ ಬದಲಾಗುವ ನಿರೀಕ್ಷೆಯಿದೆ.
ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಭತ್ತ ಮತ್ತು ದ್ವಧಳ ಧಾನ್ಯದ ಬೇಳೆಯನ್ನು ರೈತರು ಈ ಹೂತ್ತಿಗೆ ಒಂದು ಬಾರಿ ಬೆಳೆದು ಮಾರಾಟ ಮಾಡುತ್ತಿದ್ದರು. ಆದರೆ, ಈ ಭಾಗದಲ್ಲಿ ಆದ ಜಲಾವೃತಕ್ಕೆ ಸಂಪೂರ್ಣ ಹಾಳಾಗಿದೆ ಎಂದು ರೈತರು ಕಲ್ಪ ನ್ಯೂಸ್ ಜೊತೆ ಅವರ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಈಭಾಗದ ರೈತರಿಗೆ, ಉದ್ಯಮಗಳಿಗೆ ಮತ್ತು ಕಾರ್ಖಾನೆಗಳಿಗೆ ಅತಿ ಮುಖ್ಯವಾಗಿ ಬೇಕಾಗುವ ನೀರು ಈ ವರ್ಷ ಹಸಿವನ್ನು ನಿಂಗಿಸಿ ಸಂತಸ ತಂದಿರುವುದು ಒಂದು ಕಡೆಯಾದರೆ ಉದ್ಯಮಗಳು ಗ್ರಾಹಕರಿಂದ ಸರಿಯಾದ ಬೇಡಿಕೆ ಇಲ್ಲದೆ ಅನೇಕ ಕಾರ್ಖಾನೆಗಳು ಉತ್ಪಾದನೆಯನ್ನು ಕಡಿತ ಮಾಡಿರುತ್ತಾರೆ.
ಒಟ್ಟಾರೆ ಮಳೆಯಿಂದ ಕೆಲವೊಂದು ಭಾಗ ಜಲಾವೃತಿಯಾಗಿದೆ, ರೈತರಲ್ಲಿ ನಿರಾಸೆ ಉಂಟಾಗಿದೆ ಜನರಿಗೆ ಎಡಬಿಡದೆ ಬರುತ್ತಿರುವ ಮಳೆಯಿಂದ ಅತಂಕ ಹೆಚ್ಚಾಗಿದೆ.
ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ
Discussion about this post