ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಇಹಲೋಕ ತ್ಯಜಿಸಿದ ನಟ ಚಿರಂಜೀವಿ ಸರ್ಜಾರ ಅವರ ಪತ್ನಿ ಮೇಘನಾ ಸರ್ಜಾ ಅವರು ಇಂದು ಮುಂಜಾನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇಂದು ಮುಂಜಾನೆ 11.7 ಗಂಟೆಗೆ ಮೇಘನಾ ಗಂಡು ಮಗುವಿನೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಗು ಜನಿಸಿರುವುದು ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡಿದೆ. ನಮ್ಮ ಚಿರು ಅಣ್ಣ ಎಲ್ಲೂ ಹೋಗಿಲ್ಲ, ಎಲ್ಲರ ಜೊತೆಯಲ್ಲಿದ್ದಾರೆ.
ಜೂನ್ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ ಹೊಂದಿದ್ದರು. ಆಗ ಮೇಘನಾ ರಾಜ್ 4 ತಿಂಗಳ ಗರ್ಭಿಣಿ. ಈ ಪರಿಣಾಮವಾಗಿ ಕುಟುಂಬ ವರ್ಗ, ಅಪಾರ ಬಂಧು-ಮಿತ್ರರು, ಅಭಿಮಾನಿಗಳು ದುಃಖ ಸಾಗರದಲ್ಲಿ ಮುಳುಗಿತ್ತು. 5 ತಿಂಗಳ ನಂತರ ಇದೀಗ ಜೂನಿಯರ್ ಚಿರು ಆಗಮನ ಎಲ್ಲ ದುಃಖವನ್ನು ಮರೆಸಿದೆ.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಘನಾ ತಂದೆ ನಟ ಸುಂದರ್ ರಾಜ್, ಕತ್ತಲೆಯ ದುಃಖದ ಕಾರ್ಮೋಡ ಸರಿದು ನಮ್ಮ ಕುಟುಂಬಕ್ಕೆ ನವರಾತ್ರಿಯ ಶುಭ ಸಂದರ್ಭದಲ್ಲಿ ಖುಷಿ ತಂದಿದೆ. ಮಗು ಚಿರು ಥರಾನೇ ಇದ್ದಾನೆ. ಇಡೀ ಕರ್ನಾಟಕದ, ಕನ್ನಡಿಗರ ಹಾರೈಕೆ ನಮ್ಮ ಮೇಲಿದೆ, ನಮ್ಮ ಕಷ್ಟದ ಸಂದರ್ಭದಲ್ಲಿ ಎಲ್ಲರೂ ನಮ್ಮ ಜೊತೆಗಿದ್ದು ಹಾರೈಸಿದ್ದಾರೆ, ಅವರಿಗೆ ಧನ್ಯವಾದಗಳು ಎಂದರು.
ಮಗುವನ್ನು ಆಸ್ಪತ್ರೆ ಸಿಬ್ಬಂದಿಗಳು ಮೇಘನಾ ಅವರಿರುವ ವಾರ್ಡ್’ನಲ್ಲಿ ಇರಿಸಲಾಗಿರುವ ಚಿರು ಸರ್ಜಾ ಫೋಟೋಗೆ ಮುಟ್ಟಿಸಿ, ಸಂಭ್ರಮಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post