ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪ್ರಯಾಗ್‌ರಾಜ್ ಮತ್ತು ಶ್ರೀ ಸಿದ್ದಾರೂಢ ಸ್ವಾಮೀಜಿ (ಎಸ್ಎಸ್ಎಸ್) ಹುಬ್ಬಳ್ಳಿ ರೈಲು ನಿಲ್ದಾಣಗಳ ನಡುವೆ ವಿಶೇಷ ರೈಲು ಸೇವೆಯನ್ನು ಆರಂಭಿಸಲು ಉತ್ತರ ಮಧ್ಯ ರೈಲ್ವೆ ಘೋಷಿಸಿದೆ.
ರೈಲು ಸಂಖ್ಯೆ 04113 ಪ್ರಯಾಗ್‌ರಾಜ್–ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲು ಜೂನ್ 13, 20, 27 ಹಾಗೂ ಜುಲೈ 4 ಮತ್ತು 11, 2026ರಂದು (ಶನಿವಾರಗಳು) ಪ್ರಯಾಗ್‌ರಾಜ್‌ನಿಂದ ಬೆಳಿಗ್ಗೆ 05:05 ಗಂಟೆಗೆ ಹೊರಟು ಸೋಮವಾರ ಮಧ್ಯಾಹ್ನ 15:10ಕ್ಕೆ ಹುಬ್ಬಳ್ಳಿಗೆ ತಲುಪಲಿದೆ.
ಮರಳಿ ಸಂಚಾರದಲ್ಲಿ, ರೈಲು ಸಂಖ್ಯೆ 04114 ಎಸ್ಎಸ್ಎಸ್ ಹುಬ್ಬಳ್ಳಿ–ಪ್ರಯಾಗ್‌ರಾಜ್ ವಿಶೇಷ ರೈಲು ಜೂನ್ 9, 16, 23, 30 ಹಾಗೂ ಜುಲೈ 7 ಮತ್ತು 14, 2026ರಂದು (ಮಂಗಳವಾರಗಳು) ಹುಬ್ಬಳ್ಳಿಯಿಂದ ಬೆಳಿಗ್ಗೆ 09:00 ಗಂಟೆಗೆ ಹೊರಟು ಗುರುವಾರ ರಾತ್ರಿ 22:40ಕ್ಕೆ ಪ್ರಯಾಗ್‌ರಾಜ್ ತಲುಪಲಿದೆ.
ಈ ವಿಶೇಷ ರೈಲು ಮಾರ್ಗ ಮಧ್ಯೆ ಫತೇಪುರ್, ಗೋವಿಂದಪುರಿ, ಇಟಾವಾ, ಭಿಂಡ್, ಸೋನಿ, ಗ್ವಾಲಿಯರ್, ಶಿವಪುರಿ, ಗುಣಾ, ಬೀನಾ, ಭೋಪಾಲ್, ನಾಗ್ಪುರ, ಬಲ್ಹರ್ಷಾ, ಸಿರ್ಪುರ್ ಕಾಘಜ್ ನಗರ, ಮಂಚೇರಿಯಲ್, ಕಾಜಿಪೇಟ್, ಕಾಚಿಗುಡ, ಮಹಬೂಬ್ನಗರ, ಗದ್ವಾಲ್, ಕರ್ನೂಲ್ ಸಿಟಿ, ಧೋಣ್, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ, ತುಮಕೂರು, ಅರಸೀಕೆರೆ, ದಾವಣಗೆರೆ ಮತ್ತು ಎಸ್‌ಎಂಎಂ ಹಾವೇರಿ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಈ ರೈಲು ಒಟ್ಟು 22 ಬೋಗಿಗಳನ್ನು ಹೊಂದಿದ್ದು, 3 ಎಸಿ ತ್ರಿ-ಟೈರ್ ಕೋಚ್‌ಗಳು, 9 ಸ್ಲೀಪರ್ ಕ್ಲಾಸ್, 8 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು (ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್‌ಗಳು) ಒಳಗೊಂಡಿರುತ್ತವೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















