ಅಮೆರಿಕಾ ಮತ್ತು ರಷ್ಯಾ ನಡುವಿನ ಒಂದು ಕಾಲ್ಪನಿಕ ಸೇತುವೆ, ಭವಿಷ್ಯದಲ್ಲಿ ಕಟ್ಟಬೇಕೆನ್ನುವ, ಸದ್ಯದ ತಂತ್ರಜ್ಞಾನದಲ್ಲಿ ಸೇತುವೆ ಕಟ್ಟಲು ಪೂರಕವಲ್ಲದ ವಾತಾವರಣವಿರುವ ಜೀರಿಂಗ್ ಸಮುದ್ರದ ನಡುವಿನ ಈ ದ್ವೀಪಗಳಲ್ಲೇ ಅದು ಹಾದು ಹೋಗುತ್ತದೆ. ಮುಂದೊಂದು ಕಾಲಕ್ಕೆ ಈ ಸೇತುವೆ ನಿರ್ಮಾಣವಾದರೆ ಯುರೋಪ್, ಏಷ್ಯಾ, ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡಗಳನ್ನು ಕೇವಲ ರಸ್ತೆ ಮಾರ್ಗದಲ್ಲೆ ಕ್ರಮಿಸಲು ಸಾಧ್ಯವಾಗಲಿದೆ.
ಇತಿಹಾಸ: 1648ರಲ್ಲಿ ರಷ್ಯಾದ ನಾವಿಕ ಸೆಮ್ಯಾನ್ ಡೆನೇವ್ ಡೈಯಮೀಡ್ ದ್ವೀಪಗಳಲ್ಲಿ ತಲುಪಿದ. ಡೆನ್ಮಾರ್ಕ್‌ನ ನಾವಿಕ ವಿಟಸ್ ಬೇರಿಂಗ್ 1728 ಮತ್ತೊಮ್ಮೆ ದ್ವೀಪವನ್ನು ಕಂಡುಹಿಡಿದ. ವಿಟಸ್ ಬೇರಿಂಗ್ ಈ ದ್ವೀಪಗಳನ್ನು ತಲುಪಿದ ದಿನ ಆಗಸ್‌ಟ್ 16, 1728. ಅಂದು ರಷ್ಯನ್ ಚರ್ಚುಗಳಲ್ಲಿ ಸೇಂಟ್ ಡೈಯಮೀಡ್ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ನೆನಪಿಗಾಗಿ ಈ ದ್ವೀಪಗಳನ್ನು ಡೈಯಮೀಡ್ ದ್ವೀಪಗಳೆಂದು ಕರೆಯಲಾಯಿತು. ರಷ್ಯಾದ ಭೂ ಗಣಿತಶಾಸ್ತ್ರಜ್ಞ 1732ರಲ್ಲಿ ಈ ದ್ವೀಪಗಳ ಅಕ್ಷಾಂಶ ಮತ್ತು ರೇಖಾಂಶಗಳನ್ನು ಕಂಡುಹಿಡಿದನು.
ಅಮೆರಿಕಾ ಮತ್ತು ಯುಎಸ್‌ಎಸ್‌ಆರ್ ನಡುವಿನ ಶೀತಲ ಸಮರದ ಸಮಯದಲ್ಲಿ ಎರಡು ದೇಶಗಳ ನಡುವಿನ ಈ ಭಾಗದ ಗಡಿಯನ್ನು ‘JCE CURTAIN’ ಎಂದು ಕರೆಯಲಾಗುತ್ತಿತ್ತು. 1987ರಲ್ಲಿ ಲಿನ್‌ಕಾಕ್‌ಸ್ ಎಂಬ ವ್ಯಕ್ತಿ ಒಂದು ದ್ವೀಪದಿಂದ ಮತ್ತೊಂದಕ್ಕೆ ಈಜುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದ ಮತ್ತು ತನ್ನ ಈ ಸಾಧನೆಗೆ ಮಿಕಾಯಿಲ್ ಗೊರ್ಬಚೆವ ಮತ್ತು ರೊನಾಲ್‌ಡ್ ರೇಗಾನ್‌ರಿಂದ ಭಾರಿ ಪ್ರಶಂಸೆಯನ್ನು ಪಡೆದಿದ್ದ.
ಭೌಗೋಳಿಕ (Solar Home) ಬಿಗ್ ಡೈಯಮೀಡ್ ದ್ವೀಪ ಹೊಸವರ್ಷಕ್ಕೆ ಮೊದಲು ಕಾಲಿಡುವ ಭೂ ಭಾಗ ಆದರೆ ರಷ್ಯಾದ ಭಾಗವಾದ ಈ ಪ್ರದೇಶವೂ ಬೇರೊಂದು ಟೈ ಜೋನ್‌ಗೆ ಸೇರುತ್ತದೆ. ಹಾಗಾಗಿ ಅಂತರ್ರಾಷ್ಟ್ರೀಯ ದಿನಾಂಕ ರೇಖೆಗೆ ಬಿಗ್ ಡೈಯಮೀಡ್‌ಗೂ 3 ಘಂಟೆಗಳ ಅಂತರವಿದೆ. 1995ರಲ್ಲಿ ಅಂತರ್ರಾಷ್ಟ್ರೀಯ ದಿನಾಂಕದಲ್ಲಿ ಸ್ವಲ್ಪ ಬದಲಾವಣೆ ಮಾಡಿದ ನಂತರ ಅಧಿಕೃತವಾಗಿ ಹೊಸವರ್ಷಕ್ಕೆ ಕಾಲಿಡುವ ಪ್ರದೇಶವೆಂದರೆ ‘ಕಿರಿಬಾಟಿ’.
(ಮುಂದುವರೆಯುವುದು)
Discussion about this post