1838 ರಿಂದ 1917ರವರೆಗೂ ಸುಮಾರು 5 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ವೆಸ್ಟ್ ಇಂಡೀಸ್‌ನ 13 ದೇಶಗಳಲ್ಲಿ ದುಡಿಯಲು ಕರೆತರಲಾಗಿತ್ತು. ಹಾಗಂತ ಬಲವಂತವಾಗಿ ಕರೆತಂದದ್ದೇನಲ್ಲ. ಕರಾರು ಒಪ್ಪಂದದ ಮೇಲೆ ನೇಮಕ ಮಾಡಿಕೊಂಡು ಕರೆದೊಯ್ಯಲಾಯಿತು. ಜೀತ ಪದ್ಧತಿಗೆ ಕೊನೆ ಹಾಡುವ ಹಂತದಲ್ಲಿದ್ದ ಬ್ರಿಟಿಷರು ಚೀನಾ, ಪೋರ್ಚುಗೀಸ್ ಇನ್ನಿತರೇ ದೇಶಗಳಿಂದ ಕರಾರಿನ ಮೇಲೆ ಜನರನ್ನು ತರುವ ಪ್ರಯತ್ನ ವಿಫಲವಾದ ನಂತರ ಸಿಕ್ಕಿದ್ದೇ ಭಾರತೀಯರು.
ಹತ್ತಿ ಮತ್ತು ಕಬ್ಬಿನ ಬೆಳೆಯ ಮೇಲೆ ಸಾಕಷ್ಟು ಆಸಕ್ತಿ ಹೊಂದಿದ್ದ ಬ್ರಿಟಿಷರು ತಮ್ಮ ವಸಾಹತುಗಳಿಂದ ನೌಕರರನ್ನು ಬಲವಂತವಾಗಿ ಇಲ್ಲವೇ ಗುತ್ತಿಗೆ ಮೇಲೆ ಕರೆತರಲು ಆರಂಭಿಸಿದರು. 1833 ಜೀಪಪದ್ಧತಿಗೆ ಬ್ರಿಟನ್ನಲ್ಲಿ ಕೊನೆ ನಂತರ ಸಾಕಷ್ಟು ಆಫ್ರಿಕನ್ ಕೆಲಸಗಾರರು ತಮ್ಮ ಕೆಲಸವನ್ನು ತ್ಯಜಿಸಿದರು. ಕೆರೆಬಿಯನ್ ದ್ವೀಪಗಳಲ್ಲಿ ಹತ್ತಿ ಮತ್ತು ಕಬ್ಬು ಕೃಷಿಯಲ್ಲಿ ಹಿಡಿತ ಹೊಂದಿದ್ದ ಬ್ರಿಟಿಷರಿಗೆ ಕೆಲಸಗಾರರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಇದು ಅಲ್ಲಿನ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಿತ್ತು.
ಉಷ್ಣವಲಯದಲ್ಲಿರುವ ಈ ದ್ವೀಪಗಳ ವಾತಾವರಣ ಹೆಚ್ಚು ಬಿಸಿಲು ಮತ್ತು ತೇವಾಂಶದಿಂದ ಕೂಡಿರುತ್ತದೆ. ಇಂತಹ ವಾತಾವರಣದಲ್ಲಿ ಕಡಿಮೆ ಹಣಕ್ಕೆ ಕಷ್ಟಪಟ್ಟು ದುಡಿಯುವ ಕಾರ್ಮಿಕರು ಬೇಕಾಗಿತ್ತು. ಆಗ ತಾನೇ ಜೀತಪದ್ಧತಿ ಕೊನೆಗೊಂಡಿದ್ದರಿಂದ ನರಿಬುದ್ಧಿಯ ‘ಗುತ್ತಿಗೆ ನೌಕರಿ’ ಎಂಬಹ ಹೊಸ ರೂಪದಲ್ಲಿ ಜೀತಪದ್ಧತಿಯನ್ನು ಜಾರಿಗೆ ತಂದರು. ಜೀತಪದ್ಧತಿಗೂ, ಗುತ್ತಿಗೆ ನೌಕರರಿಗೂ ಹೆಚ್ಚೆನೂ ವ್ಯತ್ಯಾಸವಿರಲಿಲ್ಲ. ಕೆಲಸಗಾರರನ್ನು ಗುಲಾಮರು ಎಂದು ಸಂಬೋಧಿಸದೆ, ಗುತ್ತಿಗೆ ನೌಕರರೆಂದು ಹೇಳಲಾಗುತ್ತಿತ್ತು. ಈ ಸಮಯದಲ್ಲಿ ಭಾರತೀಯರು ಹೆಚ್ಚೆಚ್ಚು ಪ್ರಮಾಣ ಕೆಲಸಗಾರರಿಂದ ಖಾಲಿಯಾದ ಜಾಗವನ್ನು ತುಂಬಿದರು.
ಭಾರತೀಯರು ಗುತ್ತಿಗೆ ನೌಕರರನ್ನು ಹೊತ್ತ ವಿಟ್ಟಿ (Whitby) ಮತ್ತು ಹಸ್ಪರಸ್ (Hosperess) ಎಂಬ ಎರಡು ನೌಕೆಗಳು ಮೊತ್ತ ಮೊದಲ ಬಾರಿಗೆ ಕಲ್ಕತ್ತಾದಿಂದ 1838ರಲ್ಲಿ ಹೊರಟವು. ಈಗಿನ (ಹಿಂದೆ: ಬ್ರಿಟಿಷ್ ಗಯಾನ) 5 ಮೇ 1838ರಲ್ಲಿ ತಲುಪಿದವು.
(ಮುಂದುವರೆಯುವುದು…)
Discussion about this post